ಭಾನುವಾರ, ಏಪ್ರಿಲ್ 27, 2025
HomekarnatakaJds March : ಕೈ ಪಾದಯಾತ್ರೆಗೆ ದಳಪತಿಗಳ ಸೆಡ್ಡು : ಪಾದಯಾತ್ರೆ ಆರಂಭಿಸಿದ ನಿಖಿಲ್ ಕುಮಾರಸ್ವಾಮಿ...

Jds March : ಕೈ ಪಾದಯಾತ್ರೆಗೆ ದಳಪತಿಗಳ ಸೆಡ್ಡು : ಪಾದಯಾತ್ರೆ ಆರಂಭಿಸಿದ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ

- Advertisement -

ಬೆಂಗಳೂರು : ಅತ್ತ ಕಾಂಗ್ರೆಸ್ ನಾಯಕರು ತೊಟ್ಟ ಶಪಥವನ್ನು ಈಡೇರಿಸಲೇ ಬೇಕೆಂದು ಮತ್ತೆ ಪಾದಯಾತ್ರೆ ಆರಂಭಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಅಂತ ಬಿಜೆಪಿ ವಾಗ್ದಾಳಿ ಮಾಡುತ್ತಿದ್ದರೇ ಇತ್ತ ಜೆಡಿಎಸ್ ಯುವ ನಾಯಕರು ಮಾತ್ರ ಸದ್ದಿಲ್ಲದೇ ಕೈ ನಾಯಕರಿಗೆ ಸೆಡ್ಡು ಹೊಡೆಯಲು ಪಾದಯಾತ್ರೆ ಆರಂಭಿಸಿದ್ದಾರೆ. ಅತ್ತ ಸಂಸದ ಪ್ರಜ್ಚಲ್ ರೇವಣ್ಣ ತಮ್ಮ ಸ್ವಕ್ಷೇತ್ರದಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ (Jds March) ಆರಂಭಿಸಿದ್ದರೇ, ಇತ್ತ ನಿಖಿಲ್ ಕುಮಾರಸ್ವಾಮಿ ಕೂಡ ಚಾಮರಾಜನಗರದ ಹನೂರು ತಾಲೂಕು ತಾಳ ಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ (Jds March) ನಡೆಸಲಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ, ಪಕ್ಷದ ಜಲಧಾರೆ ಸೇರಿದಂತೆ ಜನಪರ ಕಾರ್ಯಕ್ರಮಗಳಿಗೆ ಚಾಲನೆ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿಕೊಂಡಿದ್ದಾರೆ. ಈಗಾಗಲೇ ಪ್ರಜ್ವಲ್ ರೇವಣ್ಣ ಹೊಳೆನರಸೀಪುರದಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ಅರಂಭಿಸಿದ್ದಾರೆ. ಹೊಳೆನರಸೀಪುರದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಜ್ವಲ್ ಧರ್ಮಸ್ಥಳದತ್ತ ತೆರಳುತ್ತಿದ್ದಾರೆ.

ಸಂಸದರ ಈ ಪಾದಯಾತ್ರೆಗೆ ಹಾಸನದ ಪ್ರತಿ ತಾಲೂಕಿನಿಂದ ಕಾರ್ಯಕರ್ತರು ಸಾಥ್ ನೀಡಲಿದ್ದು, ಇದು ಜೆಡಿಎಸ್ ನ ಶಕ್ತಿಪ್ರದರ್ಶನ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಪ್ರಜ್ವಲ್ ರೇವಣ್ಣ ಪಾದಯಾತ್ರೆ (Jds March) ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿ ಕೂಡ ಪಾದಯಾತ್ರೆಗೆ ಸಿದ್ಧವಾಗಿದ್ದು ಶಿವರಾತ್ರಿ ನೆಪವಿಟ್ಟುಕೊಂಡು ಕಾಲ್ನಡಿಗೆಯಲ್ಲೇ ಮಲೆಮಹದೇಶ್ವರನ ಬೆಟ್ಟಕ್ಕೆ ತೆರಳಲು ನಿರ್ಧರಿಸಿದ್ದಾರೆ.

ಸೋಮವಾರ ಹನೂರು ತಾಲೂಕು ತಾಳ ಬೆಟ್ಟದಿಂದ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಆರಂಭಿಸಲಿದ್ದು 21 ಕಿಲೋಮೀಟರ್ ಕಾಲ್ನಡಿಗೆ ಮೂಲಕ ತೆರಳಿ ಬೆಟ್ಟ ಗುಡ್ಡ ಹತ್ತಿ ಇಳಿದು ಮಲೆಮಹದೇಶ್ವರನ ಸನ್ನಿಧಾನ ತಲುಪಲಿದ್ದಾರೆ. ಇತ್ತೀಚಿಗಷ್ಟೇ ನಿಖಿಲ್ ಕುಮಾರಸ್ವಾಮಿ ರಾಜ್ಯದ ಹಲವು ಜಿಲ್ಲೆಗಳಿಗೆ ಪ್ರವಾಸ ನಡೆಸಿದ್ದರು. ಅದಾಗುತ್ತಿದ್ದಂತೆ ಈಗ ಮತ್ತೇ ಪಾದಯಾತ್ರೆ ಹೆಸರಿನಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ . ರೇವಣ್ಣನವರ ಇಬ್ಬರೂ ಪುತ್ರರು ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದಾರೆ. ಹೀಗಾಗಿ ಈ ವಿಧಾನಸಭಾ ಚುನಾವಣೆ ಯಲ್ಲಿ ನಿಖಿಲ್ ರನ್ನು ಶಾಸಕರನ್ನಾಗಿಸಲೇಬೇಕೆಂದು ಎಚ್ಡಿಕೆ ಪಣ ತೊಟ್ಟು ಕಾರ್ಯಪ್ರವೃತ್ತರಾಗಿದ್ದಾರೆ. ಇದರ ಫಲವಾಗಿಯೇ ನಿಖಿಲ್ ಹಿಂದೆಂದಿಗಿಂತಲೂ ಹೆಚ್ಚು ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಮಾತ್ರವಲ್ಲ 2023 ರ ಚುನಾವಣೆಯಲ್ಲೂ ಜೆಡಿಎಸ್ ಕಿಂಗ್ ಮೇಕರ್ ಆಗೋ ಕನಸಿನಲ್ಲಿದೆ ಇದೇ ಕಾರಣಕ್ಕೆ ಪಕ್ಷದ ಚಟುವಟಿಕೆಗಳನ್ನು ನಾಯಕರು ಚುರುಕುಗೊಳಿಸಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್ ಪಾದಯಾತ್ರೆಯತ್ತ ಗಮನ ಹರಿಸುವ ವೇಳೆಯಲ್ಲಿಯೇ ಜೆಡಿಎಸ್ ಯುವ ನಾಯಕರು ಪಾದಯಾತ್ರೆ (Jds March) ನಡೆಸುವ ಮೂಲಕ ಕೈಪಾಳಯಕ್ಕೆ ಸೆಡ್ಡು ಹೊಡೆಯೋ ಲೆಕ್ಕಾಚಾರದಲ್ಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ : ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸಿಎಂ ಚಾಲನೆ : ಸದ್ದಿಲ್ಲದೇ ಚುನಾವಣೆ ಸಿದ್ದವಾಗುತ್ತಿದೆ ಬಿಜೆಪಿ

ಇದನ್ನೂ ಓದಿ : ಹರ್ಷ ಹತ್ಯೆ ಪ್ರಕರಣ, ಸಹಜ ಸ್ಥಿತಿಗೆ ಮರಳಿದ ಶಿವಮೊಗ್ಗ : ನಾಳೆಯಿಂದ ಶಾಲೆ, ಕಾಲೇಜು ಆರಂಭ

( Jds March vs Mekedatu March : Nikhil Kumaraswamy and Prajwal Rewanna started the march )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular