ಬೆಂಗಳೂರು : karala Former Chief Minister Oommen Chandy : ಕಾಂಗ್ರೆಸ್ ಹಿರಿಯ ಮುಖಂಡ, ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ವಿಧಿವಶರಾಗಿದ್ದರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ ಎಂದು ಉಮ್ಮನ್ ಚಾಂಡಿ ಅವರ ಪುತ್ರ ಮಾಹಿತಿ ನೀಡಿದ್ದಾರೆ.
2004-06 ಮತ್ತು 2011-16ರಲ್ಲಿ ಎರಡು ಬಾರಿ ಉಮ್ಮನ್ ಚಾಂಡಿ ಅವರು ಕೇರಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕರಾಗಿರುವ ಉಮ್ಮನ್ ಚಾಂಡಿ ಅವರು ತಮ್ಮ 27 ನೇ ವಯಸ್ಸಿನಲ್ಲಿಯೇ ಶಾಸಕರಾಗಿ ಆಯ್ಕೆಯಾಗಿದ್ದರು. 1970 ರಲ್ಲಿ ಮೊದಲ ಬಾರಿ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಶಾಸಕರಾಗಿ ಆಯ್ಕೆಯಾಗಿದ್ದರು. ನಂತರದಲ್ಲಿ ಸತತವಾಗಿ 11 ಬಾರಿ ಶಾಸಕರಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.
Extremely sad to bid farewell to our most beloved leader and former CM Shri. Oommen Chandy. One of the most popular and dynamic leaders of Kerala, Chandy sir was loved across generations and sections of the population. The Congress family will miss his leadership and energy. pic.twitter.com/YaeywDOKwd
— Congress Kerala (@INCKerala) July 18, 2023
ಅತೀ ಹೆಚ್ಚು ದಿನಗಳ ಕಾಲ ವಿಧಾನಸಭೆಯನ್ನು ಪ್ರತಿನಿಧಿಉಸವ ಮೂಲಕ ಅವರು ಕೇರಳದ ಕಾಂಗ್ರೆಸ್ (ಎಂ) ಮಾಜಿ ವರಿಷ್ಠ ದಿವಂಗತ ಕೆಎಂ ಮಣಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ನಾಲ್ಕು ಬಾರಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ, ನಾಲ್ಕು ಬಾರಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಉಮ್ಮನ್ ಚಾಂಡಿ ಅವರ ನಿಧನಕ್ಕೆ ಕೇರಳ ಕಾಂಗ್ರೆಸ್ ಶ್ರದ್ದಾಂಜಲಿ ಸಲ್ಲಿಸಿದೆ.
The tale of the king who triumphed over the world with the power of 'love' finds its poignant end.
— K Sudhakaran (@SudhakaranINC) July 18, 2023
Today, I am deeply saddened by the loss of a legend, @Oommen_Chandy. He touched the lives of countless individuals, and his legacy will forever resonate within our souls. RIP! pic.twitter.com/72hdK6EN4u
ನಮ್ಮ ಪ್ರೀತಿಯ ನಾಯಕ ಮತ್ತು ಮಾಜಿ ಸಿಎಂ ಶ್ರೀಗಳಿಗೆ ವಿದಾಯ ಹೇಳಲು ತುಂಬಾ ದುಃಖವಾಗಿದೆ. ಉಮ್ಮನ್ ಚಾಂಡಿ. ಕೇರಳದ ಅತ್ಯಂತ ಜನಪ್ರಿಯ ಮತ್ತು ಕ್ರಿಯಾತ್ಮಕ ನಾಯಕರಲ್ಲಿ ಒಬ್ಬರಾದ ಚಾಂಡಿ ಸರ್ ತಲೆಮಾರುಗಳು ಮತ್ತು ಜನಸಂಖ್ಯೆಯ ವಿಭಾಗಗಳಲ್ಲಿ ಪ್ರೀತಿಸಲ್ಪಟ್ಟರು. ಕಾಂಗ್ರೆಸ್ ಕುಟುಂಬವು ಅವರ ನಾಯಕತ್ವ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ : ಉಡುಪಿ : ಕಳಪೆ ಗುಣಮಟ್ಟದ ಟೈಲ್ಸ್ ಪೂರೈಕೆ, ಅಂಗಡಿ, ಕಂಪೆನಿಗೆ 1 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ