ಬಿಜೆಪಿಗೆ ತಲೆನೋವಾದ ಈಶ್ವರಪ್ಪ : ನಾಳೆ ಕಮಲ‌ನಾಯಕರ ಮಹತ್ವದ ಸಭೆ

ಬೆಂಗಳೂರು : ಬಿಜೆಪಿ ಪಾಲಿಗೆ ಈಶ್ವರಪ್ಪ ಮಗ್ಗುಲ ಮುಳ್ಳಾಗಿದ್ದಾರೆ. ಸದಾ ಕಾಲ ಒಂದಿಲ್ಲೊಂದು ಕಾಂಟ್ರಾವರ್ಸಿ ಹೇಳಿಕೆಗಳಿಂದಲೇ ವಿವಾದ ಸೃಷ್ಟಿಸುವ ಈಶ್ವರಪ್ಪ (Eswharappa controversial statement) ಈಗ ರಾಷ್ಟ್ರಧ್ವಜದ ಕುರಿತು ನೀಡಿದ ಹೇಳಿಕೆ ಕಾಂಗ್ರೆಸ್ ಗೆ ಅಸ್ತ್ರವಾಗಿದೆ. ಕೆಂಪುಕೋಟೆಯ ಮೇಲೆ ಭಗವಾ ಧ್ವಜ ಅಥವಾ ಕೇಸರಿ ಧ್ವಜ ಹಾರಿಸುವ ಈಶ್ವರಪ್ಪ ಹೇಳಿಕೆ ಮುಂದಿಟ್ಟುಕೊಂಡು ವಿಪಕ್ಷ ಕಾಂಗ್ರೆಸ್ ಧರಣಿ‌ ನಡೆಸುತ್ತಿದೆ. ಈ ಬೆಳವಣಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್ ಸೋಮವಾರ ತುರ್ತು ಸಭೆ ನಡೆಸಲು ಮುಂದಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ‌, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ರಾಜ್ಯದ ಬಿಜೆಪಿ ಪ್ರಮುಖರ ಸಭೆ ನಡೆಯಲಿದೆ.

ನಾಳೆ ಬೆಳಗ್ಗೆ 7 ಗಂಟೆಗೆ ಹೈಕಮಾಂಡ್ ನಿರ್ದೇಶನದಂತೆ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಈಶ್ವರಪ್ಪ ಹೇಳಿಕೆಯಿಂದ ಬಿಜೆಪಿ ತೀವ್ರ ಮುಜುಗರಕ್ಕೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯುತ್ತಿರುವ ಸಭೆ ತೀವ್ರ ಕುತೂಹಲ‌ ಪಡೆದುಕೊಂಡಿದೆ. ಈ ಮಧ್ಯೆ ನಾಳೆ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಉಗ್ರ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸೂಚನೆ ನೀಡಿರೋದರಿಂದ ಬಿಜೆಪಿ ಕಾಂಗ್ರೆಸ್ ಗೆ ಕೌಂಟರ್ ಪ್ಲ್ಯಾನ್ ರೂಪಿಸಲು ಸಭೆ ನಡೆಸಲಿದೆ.

ಒಂದೊಮ್ಮೆ ಬಿಜೆಪಿ ಈಶ್ವರಪ್ಪ ರಾಜೀನಾಮೆ ಪಡೆಯದೇ ಇದ್ದಲ್ಲಿ, ಕಾಂಗ್ರೆಸ್ ತನ್ನ ಹೋರಾಟವನ್ನು ದೇಶವ್ಯಾಪಿಗೆ ವಿಸ್ತರಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಒಂದೊಮ್ಮೆ ಕಾಂಗ್ರೆಸ್ ದೇಶವ್ಯಾಪಿ ಹೋರಾಟ ನಡೆಸಿದಲ್ಲಿ ಬಿಜೆಪಿ ಅದನ್ನು ಹೇಗೆ ಎದುರಿಸಬೇಕು. ಹೈಕಮಾಂಡ್ ಗೆ ಮಾಹಿತಿ ನೀಡಲು ಬಿಜೆಪಿ ನಾಯಕರು ಕಾರ್ಯತಂತ್ರ ರೂಪಿಸಲು ಸಭೆ ನಡೆಸುತ್ತಿದ್ದಾರೆ.

ಇದೇ ವೇಳೆ ಹಿಜಾಬ್ ವಿವಾದದ ಬಗ್ಗೆಯೂ ಮಹತ್ವದ ಸಮಾಲೋಚನೆ ನಡೆಸಲಿರುವ ಬಿಜೆಪಿ ನಾಯಕರು ಹೋರಾಟವನ್ನು ತಡೆಯಲು ಹಾಗೂ ಗೊಂದಲ ಬಗೆಹರಿಸಲು ಅಗತ್ಯ ಕ್ರಮಗಳ ಕುರಿತು ಕೂಡ ಚರ್ಚೆ ನಡೆಸಿ ಬಿಜೆಪಿ ನಾಯಕರು ತೀರ್ಮಾನಕೈಗೊಳ್ಳಲಿದ್ದಾರಂತೆ. ಈ ಎಲ್ಲ ಕಾರಣಗಳಿಗಾಗಿ ನಾಳೆ ನಡೆಯಲಿರುವ ಬಿಜೆಪಿ ಸಭೆ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ : ವಿಧಾನಸಭಾ ಚುನಾವಣೆಗೆ ಮಾಸ್ಟರ್‌ ಫ್ಲ್ಯಾನ್‌ : ಬಜೆಟ್‌ ಮಂಡನೆ ಇನ್ನಷ್ಟು ವಿಳಂಭ

ಇದನ್ನೂ ಓದಿ : ಬಸವರಾಜ ಹೊರಟ್ಟಿ ಬಿಜೆಪಿ ಸೇರ್ತಾರಾ? ಓದಿ ನಿಮ್ಮ ಅಭಿಪ್ರಾಯ ತಿಳಿಸಿ

( bjp Headache for Eswharappa controversial statement, meeting call for bjp high command )

Comments are closed.