Cabinate Expansion : ಸಂಪುಟ ಸರ್ಕಸ್ ಗೆ ಕ್ಲೈಮ್ಯಾಕ್ಸ್ : ಮೇ 11 ರಂದು ನಿರ್ಧಾರವಾಗಲಿದೆ ಭವಿಷ್ಯ

ಬೆಂಗಳೂರು : ಕಳೆದ ಒಂದು ವರ್ಷದಿಂದ ದೀಪಾವಳಿಗೆ, ವರಮಹಾಲಕ್ಷ್ಮೀ ಹಬ್ಬಕ್ಕೆ, ಗಣೇಶ್ ಚತುರ್ಥಿಗೆ ನೊರೆಂಟು ಹಬ್ಬದ ವೇಳೆ ವಿಸ್ತರಣೆಯಾಗುತ್ತೇ ಅಂದ್ಕೊಂಡ ಸಂಪುಟ ಇನ್ನೂ ಗಣೇಶನ‌ ಮದುವೆಯಂತೇ ಮುಂದೂಡಿಕೆಯಾಗುತ್ತಲೇ ಇದೆ. ಈ ಮಧ್ಯೆ ಇನ್ನೇನೂ ಚುನಾವಣೆ ಸಮೀಪಿಸುತ್ತಿರೋದರಿಂದ ಈಗ ಸಂಪುಟ ವಿಸ್ತರಣೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಹೀಗಾಗಿ ಸಂಪುಟ ವಿಸ್ತರಣೆಗೆ (Cabinate Expansion) ಕೊನೆಯ ಭಾರಿ ಮುಹೂರ್ತ ಫಿಕ್ಸ್ ಆಗಿದ್ದು, ಮೇ 11 ಕ್ಕೆ ಕ್ಯಾಬಿನೆಟ್ ಭವಿಷ್ಯ ನಿರ್ಧಾರವಾಗಲಿದೆ.

ಹೌದು, ಇನ್ನೇನು ಚುನಾವಣೆಗೆ ಸಿದ್ಧವಾಗಬೇಕಿರೋ ರಾಜ್ಯ ಬಿಜೆಪಿಗೆ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ಅನಿವಾರ್ಯವಾಗಿದೆ. ಹೀಗಾಗಿ ಕೊನೆಗೂ ಹೈಕಮಾಂಡ್ ಮನವೊಲಿಸಲು ಮುಂದಾಗಿರೋ ಸಿಎಂ ಬೊಮ್ಮಾಯಿ ಮೇ 11 ಕ್ಕೇ ಗ್ರೀನ್ ಸಿಗ್ನಲ್ ಪಡೆಯೋ ವಿಶ್ವಾಸದಲ್ಲಿದ್ದಾರೆ. ಇನ್ನೇನು ಮೇ ಮೊದಲ ವಾರದ ಅಮಿತ್ ಶಾ ರಾಜ್ಯ ಭೇಟಿ ವೇಳೆ ಸಂಪುಟ ವಿಸ್ತರಣೆ ಹಾಗೂ ನೂತನ ಸಚಿವರ ನೇಮಕಕ್ಕೆ ಒಪ್ಪಿಗೆ ಸಿಗೋ ನೀರಿಕ್ಷೆ ಇತ್ತು. ಆದರೆ ಅಮಿತ್ ಬಂದಂಗೆ ಹೋದರೇ ವಿನಃ ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ತುಟಿಕ್ ಪಿಟಿಕ್ ಎನ್ನಲಿಲ್ಲ. ಹೀಗಾಗಿ ಸಿಎಂ ಆತಂಕಗೊಂಡಿದ್ದಾರೆ.

ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ ಬಳಿಕ ನೂತನ ಸಚಿವರ ಯಾದಿಯೊಂದಿಗೆ ಸಂಪುಟ ಸಭೆ ನಡೆಸಲು ಪ್ಲ್ಯಾನ್ ಮಾಡಿದ್ದ ಸಿಎಂ ಬೊಮ್ಮಾಯಿ ಅದಕ್ಕಾಗಿಯೇ ಸಚಿವ ಸಂಪುಟ ಸಭೆಯನ್ನು ಮುಂದೂಡಿದ್ದರು. ಆದರೆ ಇನ್ನೂ ಹೈಕಮಾಂಡ್ ಸಂದೇಶ ನೀಡೋ ದೊಡ್ಡ ಮನಸ್ಸು ಮಾಡಿಲ್ಲ. ಹೀಗಾಗಿ ತಮಗಿರೋ ಸಂಪುಟದ ಒತ್ತಡವನ್ನು ನಿವಾರಿಸಿಕೊಳ್ಳೋ ಉದ್ದೇಶದಿಂದ ಸಿಎಂ ಖುದ್ದು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸಿ ಮರಳಲಿದ್ದಾರೆ ಎನ್ನಲಾಗುತ್ತಿದೆ. ಮೇ‌ 10ರ ರಾತ್ರಿ ದೆಹಲಿಗೆ ತೆರಳುತ್ತಿರುವ ಸಿಎಂ ಮೇ 11 ಕ್ಕೆ ಅಮಿಶ್ ಷಾ, ಜೆಪಿ ನಡ್ಡಾ ಭೇಟಿಗೆ ನಿರ್ಧರಿಸಿದ್ದಾರೆ. ಈ ವೇಳೆ ನಿಗಮ‌ಮಂಡಳಿ ನೇಮಕವೂ ಬಾಕಿ ಉಳಿದಿದ್ದು, ಸಂಪುಟ ವಿಸ್ತರಣೆಯ ಜೊತೆಗೆ ನಿಗಮ‌ ಮಂಡಳಿ ನೇಮಕಕ್ಕೂ ಒಪ್ಪಿಗೆ ಪಡೆದೇ ಹಿಂತಿರುಗಲಿದ್ದಾರೆ ಎನ್ನಲಾಗ್ತಿದೆ.

ಒಂದೊಮ್ಮೆ ಈಗಲೂ ಸಂಪುಟ ವಿಸ್ತರಣೆ ಮಾಡದೇ ಇದ್ದಲ್ಲಿ ಚುನಾವಣೆಗೆ ಹೋಗೋದು ಕಷ್ಟವಾಗುತ್ತದೆ. ಜಾತಿ,ಧರ್ಮ, ಪ್ರಾದೇಶಿಕತೆವಾರು ಆಕಾಂಕ್ಷಿಗಳಿಗೆ ಸಚಿವ ಸ್ಥಾನ ನೀಡೋದರಿಂದ ಅಭಿವೃದ್ಧಿ ಕಾರ್ಯ ಹಾಗೂ ಸಚಿವ ಸ್ಥಾನದ ಬಲದಿಂದ ಮತ ಕೇಳಲು ನೆರವಾಗಲಿದೆ. ಅಲ್ಲದೇ ಸಚಿವ ಸ್ಥಾನಾಕಾಂಕ್ಷಿಗಳು ಚುನಾವಣೆ ಹೊತ್ತಿನಲ್ಲಿ ಮುನಿಸಿ ಕೊಳ್ಳೋದು ಬೇಡ ಎಂಬ ಕಾರಣಕ್ಕೆ ಸಂಪುಟಕ್ಕೆ ಒಪ್ಪಿಗೆ ನೀಡಿ ಎಂದು ಸಿಎಂ ಬೊಮ್ಮಾಯಿ ಹೈಕಮಾಂಡ್ ನಾಯಕರನ್ನು ಮನವೊಲಿಸಲಿದ್ದಾರೆ ಎನ್ನಲಾಗ್ತಿದೆ. ಒಂದೊಮ್ಮೆ ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಹಿರಿಯರ ಮನವೊಲಿಸುವಲ್ಲಿ ಸಫಲರಾದಲ್ಲಿ ಅದು ಅವರ ನಾಯಕತ್ವ ಹಾಗೂ ಸ್ಥಾನದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲಿದ್ದು, ಇದೇ ಕಾರಣಕ್ಕೆ‌ಮೇ ೧೧ ರಂದು ಸಂಪುಟದ ಭವಿಷ್ಯ ಎಂದು ಬಿಜೆಪಿ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ :  ಶಾಲೆ ಆರಂಭ ಮುಂದೂಡಿ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಭಾಪತಿ ಬಸವರಾಜ್‌ ಹೊರಟ್ಟಿ

ಇದನ್ನೂ ಓದಿ :  IPL 2022 ರಲ್ಲಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದ CSK : ಇಲ್ಲಿದೆ ಐಪಿಎಲ್‌ ಪಾಯಿಂಟ್ಸ್‌ ಟೇಬಲ್‌

Karnataka Cabinate Expansion, CM Visit Delhi

Comments are closed.