Karnataka Cabinet : ನಾಳೆ 24 ಸಚಿವರ ಪ್ರಮಾಣ ವಚನ, ಇಲ್ಲಿದೆ ನೂತನ ಸಚಿವರ ಪಟ್ಟಿ

ಬೆಂಗಳೂರು :Karnataka Cabinet : ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತಕ್ಕೆ ಬಂದ ಬೆನ್ನಲ್ಲೇ ಇದೀಗ ಪೂರ್ಣ ಪ್ರಮಾಣದಲ್ಲಿ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲು ಸಜ್ಜಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಈ ಹಿಂದೆ 8 ಮಂದಿ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆದರೆ ಇದೀಗ ಮತ್ತೆ 24 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಕಾಂಗ್ರೆಸ್‌ನ ಪಕ್ಷದ ನೂತನ ಸಚಿವರ ಪಟ್ಟಿಯನ್ನು ಈಗಾಗಲೇ ಎಐಸಿಸಿ ಬಿಡುಗಡೆ ಮಾಡಿದೆ. ಅಲ್ಲದೇ ನಾಳೆ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಶಾಸಕರ ಪಟ್ಟಿಯನ್ನು ಈಗಾಗಲೇ ಮುಖ್ಯಮಂತ್ರಿಗಳ ಕಚೇರಿಯಿಂದ ರಾಜಭವನಕ್ಕೆ ಕಳುಹಿಸಿ ಕೊಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 32 ಮಂದಿ ಸಚಿವರ ಸಂಪುಟ ರಚನೆ ಆದಂತೆ ಆಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಹಾಗೂ ಡಿಕೆ ಶಿವಕುಮಾರ್‌ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

Karnataka Cabinet : ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿರುವ 24 ಶಾಸಕರ ಪಟ್ಟಿ

  1. ಎಚ್.ಕೆ.ಪಾಟೀಲ್‌ (ಗದಗ)
  2. ಕೃಷ್ಣಬೈರೇಗೌಡ (ಬೆಂಗಳೂರು)
  3. ಎನ್.ಚೆಲುವರಾಯ ಸ್ವಾಮಿ (ಮಂಡ್ಯ)
  4. ಕೆ.ವೆಂಕಟೇಶ್‌ (ಮೈಸೂರು)
  5. ಎಚ್.ಸಿ.ಮಹಾದೇವಪ್ಪ ( ಮೈಸೂರು)
  6. ಈಶ್ವರ ಖಂಡ್ರೆ (ಬೀದರ್)‌
  7. ಕೆ.ಎನ್.ರಾಜಣ್ಣ ( ತುಮಕೂರು)
  8. ದಿನೇಶ್‌ ಗುಂಡೂರಾವ್‌ (ಬೆಂಗಳೂರು)
  9. ಶರಣ ಬಸಪ್ಪ ದರ್ಶನಾಪುರ (ಯಾದಗಿರಿ)
  10. ಶಿವಾನಂದ ಪಾಟೀಲ್‌ (ಬಿಜಾಪುರ)
  11. ಆರ್.ಬಿ.ತಿಮ್ಮಾಪುರ್‌ (ಬಾಗಲಕೋಟೆ)
  12. ಎಸ್.ಎಸ್.ಮಲ್ಲಿಕಾರ್ಜುನ್‌ ( ದಾವಣಗೆರೆ)
  13. ಶಿವರಾಜ್‌ ತಂಗಡಗಿ (ಕೊಪ್ಪಳ)
  14. ಶರಣ ಪ್ರಕಾಶ್‌ ಪಾಟೀಲ್‌ (ಕಲಬುರಗಿ)
  15. ಮಾಂಕಾಳ ವೈದ್ಯ ( ಉತ್ತರ ಕನ್ನಡ)
  16. ಲಕ್ಷ್ಮೀ ಹೆಬ್ಬಾಳ್ಕರ್‌ ( ಬೆಳಗಾವಿ)
  17. ರಹೀಮ್‌ ಖಾನ್‌ (ಬೀದರ್)‌
  18. ಸಂತೋಷ್‌ ಲಾಡ್‌ (ದಾರವಾಡ )
  19. ಡಿ.ಸುಧಾಕರ್‌ ( ಚಿತ್ರದುರ್ಗ)
  20. ಎನ್.ಎಸ್.ಬೋಸರಾಜು (ರಾಯಚೂರು)
  21. ಬೈರತಿ ಸುರೇಶ್‌ (ಬೆಂಗಳೂರು )
  22. ಮಧು ಬಂಗಾರಪ್ಪ ( ಶಿವಮೊಗ್ಗ)
  23. ಎಂ.ಸಿ.ಸುಧಾಕರ್‌ ( ಚಿಕ್ಕಬಳ್ಳಾಪುರ)
  24. ಬಿ.ನಾಗೇಂದ್ರ (ಬಳ್ಳಾರಿ)

ಇದನ್ನೂ ಓದಿ : School Holidays Extend : ಕರ್ನಾಟಕ ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ : 26 ದಿನಗಳ ಕಾಲ ಹೆಚ್ಚುವರಿ ರಜೆ

ಇದನ್ನೂ ಓದಿ : Karnataka Bank MD Srikrishnan Hari Hara Sarma: ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಆಗಿ ಶ್ರೀಕೃಷ್ಣನ್ ಹರಿಹರ ಶರ್ಮಾ ನೇಮಕ

Karnataka Cabinet 24 MLAs to be sworn in minister tomorrow

Comments are closed.