Dk Shivakumar vs Siddaramaiah : ಸಿಎಂ ಮಾತ್ರವಲ್ಲ ಸಚಿವ ಸ್ಥಾನಕ್ಕೂ ಪಟ್ಟು: ಸಂಪುಟದಲ್ಲಿ ಸಿದ್ಧು ಆಪ್ತ ರಿಗೆ ಮಣೆ, ಡಿಕೆಶಿಗೆ ಹಿನ್ನಡೆ

ಬೆಂಗಳೂರು : Dk Shivakumar vs Siddaramaiah : ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಚಿವ ಸಂಪುಟದೊಂದಿಗೆ ರಾಜ್ಯದಲ್ಲಿ ಅಧಿಕಾರ ನಡೆಸಲು ಮುಂದಾಗಿದೆ. ವಾರದಿಂದ ನಡೆದ ಸಂಪುಟ ವಿಸ್ತರಣೆ ಹಗ್ಗ ಜಗ್ಗಾಟ ಅಂತ್ಯಕಂಡಿದ್ದು, ಪಟ್ಟು ಬಿಡದೇ ಸಿಎಂ ಸ್ಥಾನ ಪಡೆದುಕೊಂಡ ಸಿದ್ಧರಾಮಯ್ಯ ಅದೇ ಹಿಡಿತ ಮುಂದುವರೆಸಿದ್ದು, ತವರಿನಲ್ಲಿ ತಮ್ಮ ಆತ್ಮೀಯರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಇಲ್ಲೂ ಡಿಕೆಶಿಗೆ ಹಿನ್ನಡೆಯಾಗಿದೆ.

ಹೌದು ಸಿಎಂ ಸ್ಥಾನದ ರೇಸ್ ನಲ್ಲೂ ಸಾಮ,ಬೇದ,ದಂಡದಂತೆ ಎಲ್ಲಾ ಅಸ್ತ್ರ ಪ್ರಯೋಗಿಸಿ ತಮ್ಮ ಹಟವನ್ನೇ ಸಾಧಿಸಿಕೊಂಡ ಸಿದ್ಧ ರಾಮಯ್ಯನವರು ಸಚಿವ ಸಂಪುಟದಲ್ಲೂ ತಮ್ಮೆಲ್ಲ ಆತ್ಮೀಯರಿಗೆ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ತಮ್ಮ ತವರು ಭಾಗವಾಗಿರುವ ಹಳೆ ಮೈಸೂರು ಹಾಗೂ ಮೈಸೂರು ಭಾಗದಲ್ಲೂ ತಮ್ಮ ಆತ್ಮೀಯರಿಗೆ ಪಟ್ಟ ಕಟ್ಟಿದ್ದು, ಡಿಕೆಶಿಗೆ ಸಂಪುಟ ವಿಸ್ತರಣೆಯಲ್ಲೂ ಮೇಲುಗೈಯಾಗದಂತೆ ಹಿಡಿತ ಮುಂದುವರೆಸಿದ್ದಾರೆ. ತಮ್ಮ ಆಪ್ತ ಪಿರಿಯಾಪಟ್ಟಣ ಶಾಸಕ ವೆಂಕಟೇಶ್ ಗೆ ಸಚಿವ ಸ್ಥಾನ ಕೊಡಿಸುವಲ್ಲಿ ಸಿದ್ಧು ಯಶಸ್ವಿಯಾಗಿದ್ದಾರೆ. ಆರು ಭಾರಿ ಶಾಸಕರಾಗಿರುವ ಕೆ‌.ವೆಂಕಟೇಶ್ ಒಕ್ಕಲಿಗ ಕೋಟಾದಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಆರಂಭದಿಂದಲೂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಕೆ.ವೆಂಕಟೇಶ್.ಆರು ಬಾರಿ ಗೆದ್ದರೂ ಮೌನವಾಗಿಯೇ ಇದ್ದರು. ಸಚಿವ ಸ್ಥಾನಕ್ಕಾಗಿ ಯಾವುದೇ ಲಾಭಿ ಮಾಡಿರಲಿಲ್ಲ. ಆದರೆ ಮುಂಬರುವ ಲೋಕಸಭಾ ಚುನಾವಣೆ ಗುರಿ ಇಟ್ಟುಕೊಂಡ ಸಿದ್ದರಾಮಯ್ಯ, ಒಕ್ಕಲಿಗ ಮತಗಳ ಕ್ರೋಢೀಕರಣಕ್ಕೆ ಪ್ಲಾನ್ ಮಾಡಿದ್ದು,
ಶತಾಯಗತಾಯ ಎಂಪಿ ಚುನಾವಣೆಯಲ್ಲಿ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ರೂಪುರೇಷೆ ರೂಪಿಸಿ ವೆಂಕಟೇಶ್ ಗೆ ಸ್ಥಾನ ಕೊಡಿಸಿದ್ದಾರೆ.

ಆದರೆ ಸಿದ್ಧರಾಮಯ್ಯನವರ ಈ ಹಿಡಿತದ ಮುಂದೇ ಡಿಸಿಎಂ ಡಿಕೆಶಿವಕುಮಾರ್ ಮತ್ತೊಮ್ಮೆ ಸೋತಿದ್ದು ತಮ್ಮ ಆತ್ಮೀಯರಿಗೆ ಸಂಪುಟಕ್ಕೆ ಎಂಟ್ರಿ ಕೊಡಿಸಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ಡಿಕೆಶಿ ಆಪ್ತ ಹಾಗೂ ಕಾಂಗ್ರೆಸ್ ನ ಹಿರಿಯ ಶಾಸಕ ತನ್ವೀರ್ ಶೇಠ್ ಸಚಿವ ಸ್ಥಾನದ ನೀರಿಕ್ಷೆಯಲ್ಲಿದ್ದರು, ಆದರೆ ಡಿಕೆಶಿ ತಮ್ಮ ಆಪ್ತನನ್ನು ಸಿದ್ಧು ಸಂಪುಟ ಸೇರಿಸಲು ಸಾಧ್ಯವಾಗಿಲ್ಲ. ವೆಂಕಟೇಶ್ ಹಾಗೂ‌‌ ಡಾ. ಎಚ್. ಸಿ. ಮಹದೇವಪ್ಪ ಹೊರತುಪಡಿಸಿ ಇನ್ಯಾರಿಗೂ ಸ್ಥಾನ ಸಿಕ್ಕಿಲ್ಲ. ಇದನ್ನೂ ಓದಿ : Education News : ಸರಕಾರಿ ಶಾಲೆಗಳ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಹೀಗಾಗಿ ತನ್ವೀರ್ ಸೇಠ್ ಮುಸ್ಲಿಂ ಕೋಟಾ ಅಡಿಯಲ್ಲಿ ಸಂಪುಟ ಸೇರುವ ಕನಸು ಕೈಗೂಡಿಲ್ಲ. ಮುಸ್ಲಿಂರಿಗೆ ಒಂದೇ ಸಚಿವ ಸ್ಥಾನ ಮೀಸಲಿರಿಸಲಾಗಿತ್ತು.‌ ತನ್ವೀರ್ ಸೇಠ್ ಆರಂಭದಿಂದಲೂ ಸಿದ್ಧರಾಮಯ್ಯ ಜೊತೆ ಆತ್ಮೀಯ ಸಂಬಂಧ ಹೊಂದಿಲ್ಲ. ಹೀಗಾಗಿ ಈ ಮುಸ್ಲಿಂ ಕೋಟಾದ ಸಚಿವಗಿರಿ ಸಿದ್ಧು ಆಪ್ತ್ ಜಮೀರ್ ಪಾಲಾಗಿದೆ. ಒಟ್ಟಿನಲ್ಲಿ 34 ಸಚಿವರ ಪಟ್ಟಿಯಲ್ಲಿ ಸಿದ್ಧರಾಮಯ್ಯನವರ ಆತ್ಮೀಯರು ಹೆಚ್ಚಿದ್ದು ಇದು ಹಲವು ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ. ಇದನ್ನೂ ಓದಿ : Karnataka Cabinet : ನಾಳೆ 24 ಸಚಿವರ ಪ್ರಮಾಣ ವಚನ, ಇಲ್ಲಿದೆ ನೂತನ ಸಚಿವರ ಪಟ್ಟಿ

Comments are closed.