Karnataka cabinet expansion : ಏಪ್ರಿಲ್ 30 ಕ್ಕೆ ಬೊಮ್ಮಾಯಿ ದೆಹಲಿ ಭೇಟಿ : ಮತ್ತೆ ಶುರುವಾಯ್ತು ಸಂಪುಟ ವಿಸ್ತರಣೆ ಸರ್ಕಸ್‌

ಬೆಂಗಳೂರು : ಇನ್ನೇನು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ. ಈ ಮಧ್ಯೆಯೂ ರಾಜ್ಯ ಬಿಜೆಪಿಯಲ್ಲಿ ಇನ್ನೂ ಸಚಿವ ಸಂಪುಟ ವಿಸ್ತರಣೆ (Karnataka cabinet expansion) ಸರ್ಕಸ್ ಜೋರಾಗಿಯೇ ನಡೆದಿದೆ.‌ಮೇ ತಿಂಗಳಿನಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದು ಈ ವೇಳೆ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ಮಾತು ಕೇಳಿ ಬಂದಿತ್ತು. ಈಗ ಇದಕ್ಕೂ ಮುನ್ನವೇ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಸರ್ಕಸ್ ಜೋರಾಗಿದ್ದು, ಸಿಎಂ ದೆಹಲಿ ಪ್ರವಾಸದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಸಿಎಂ ಮನೆಗೆ ದೌಡಾಯಿಸಿದ್ದಾರೆ.

ರಾಜ್ಯ ಸಿಎಂ ಬಸವರಾಜ್ ಬೊಮ್ಮಾಯಿ ಏಪ್ರಿಲ್ ೩೦ ರಂದು ದೆಹಲಿಗೆ ಭೇಟಿ ನೀಡಲಿದ್ದಾರೆ. ಏಪ್ರಿಲ್ 30ಕ್ಕೆ ಸಿಎಂ ರಿಂದ ದೆಹಲಿ ಪ್ರವಾಸ ಹಿನ್ನೆಲೆಯಲ್ಲಿ ಈಗ ಬಿಜೆಪಿಯ ಸಚಿವ ಸ್ಥಾನಾಕಾಂಕ್ಷಿತ ಶಾಸಕರುಗಳು ಮಂತ್ರಿ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದು, ಸಿಎಂ ಬೊಮ್ಮಾಯಿಯವರಿಗೆ ತಮ್ಮ ನೀರಿಕ್ಷೆ ಮನವರಿಕೆ ಮಾಡಿಸಲು ಪ್ರಯತ್ನ ಆರಂಭಿಸಿದ್ದಾರೆ.

ಸಚಿವ ಸಂಪುಟ ಸೇರೋ ಆಸೆಯಲ್ಲಿರೋ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಆನಂದ್ ಮಾಮನಿ ಸೇರಿದಂತೆ ಹಲವರು ಸಿಎಂ ಭೇಟಿ ಮಾಡಿದ್ದಾರೆ. ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಭೇಟಿಯಾದ ಆಕಾಂಕ್ಷಿ ಗಳು ಸಿಎಂಗೆ ತಮ್ಮ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಯಾಗಿರುವ ಯೋಗೇಶ್ವರ್, ಆನಂದ್ ಮಾಮನಿಯವರು ಇನ್ನೇನು ಚುನಾವಣೆಗೆ ದಿನಗಣನೆ ನಡೆದಿದೆ. ನಮಗೂ ಕ್ಷೇತ್ರದಲ್ಲಿ ಜನರನ್ನು ಮನವೊಲಿಸಿ ಮತ ಪಡೆಯುವ ಹಾಗೂ ಚುನಾವಣೆಯಲ್ಲಿ ಗೆಲ್ಲುವ ಸವಾಲಿದೆ. ಹೀಗಾಗಿ ಈ ಬಾರಿಯ ಸಂಪುಟ ದಲ್ಲಿ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರಂತೆ.

ಸಿಎಂ ಬೊಮ್ಮಾಯಿ, ಏಪ್ರಿಲ್ 29ರ ಸಂಜೆ ದೆಹಲಿಗೆ ತೆರಳುತ್ತಿದ್ದು, ಏಪ್ರಿಲ್ 30ರಂದು ಹೈಕೋರ್ಟ್ ಜಡ್ಜ್ ಗಳು ಹಾಗೂ ಮುಖ್ಯಮಂತ್ರಿ ಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಭೆ ಬಳಿಕ ಬೊಮ್ಮಾಯಿ ವರಿಷ್ಠರನ್ನು ಭೇಟಿ ಮಾಡಲಿದ್ದು, ಈ ವೇಳೆ ರಾಜ್ಯದಲ್ಲಿ ಬಿಜೆಪಿ ನಡೆಸಲಿರುವ ಸಮಾವೇಶ ಹಾಗೂ ಮುಖ್ಯವಾಗಿ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸಲಿದ್ದಾರಂತೆ.

ಈಗಾಗಲೇ ರಾಜ್ಯದಲ್ಲಿ ಹಲವಾರು ಭಾರಿ ಸಚಿವ ಸಂಪುಟ ವಿಸ್ತರಣೆಯ ಸಂಗತಿ ಚರ್ಚೆಗೆ ಗ್ರಾಸವಾಗಿದ್ದು ಮುಹೂರ್ತ ಫಿಕ್ಸ್ ಆದಂತಾಗಿ ಬಳಿಕ ವಿಳಂಭಗೊಂಡಿದೆ. ಹೀಗಾಗಿ ಈಗ ಮುಂಬರುವ ವಿಧಾನಸಭೆ ಚುನಾವಣೆ ಕಾರಣಕ್ಕೆ ಸಂಪುಟ ವಿಸ್ತರಣೆ ಹೈಕಮಾಂಡ್ ಗೂ ಅನಿವಾರ್ಯ ವಾಗಿದೆ. ಹೀಗಾಗಿ ಇದೇ ಕೊನೆ ಅವಕಾಶ ಅನ್ನೋ ಕಾರಣಕ್ಕೆ ಸಂಪುಟ ಸ್ಥಾನಾಕಾಂಕ್ಷಿಗಳು ಸಿಎಂ ಬೆನ್ನು ಬಿದ್ದಿದ್ದಾರೆ.

ಇದನ್ನೂ ಓದಿ : 40% ಕಮೀಷನ್ ಪ್ರಕರಣ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊರೆ ಹೋದ ಗುತ್ತಿಗೆದಾರರ ಸಂಘ

ಇದನ್ನೂ ಓದಿ : ರಾಜ್ಯದ ಮೇಲೆ ಚಾಣಾಕ್ಯನ ಕಣ್ಣು: ಮೇ ತಿಂಗಳೊಂದರಲ್ಲೇ ಎರಡೆರಡು ಭಾರಿ ರಾಜ್ಯಕ್ಕೆ ಬರ್ತಿದ್ದಾರೆ ಅಮಿತ್ ಶಾ

Karnataka cabinet expansion CM Basavaraj Bommai Visit Delhi April 30th

Comments are closed.