ಸಿಎಂ ಸ್ಥಾನಕ್ಕೆ ಏರಿದಾಗಿನಿಂದ ಒಂದಿಲ್ಲೊಂದು ಬಿಗಿ ನಿಯಮಗಳ ಮೂಲಕ ಸುದ್ದಿಯಾಗುತ್ತಿರುವ ಸಿಎಂ ಬೊಮ್ಮಾಯಿ ಈಗ ಖಾಸಗಿ ನಿವಾಸದಲ್ಲಿ ಮೊಬೈಲ್ ಬ್ಯಾನ್ ಮಾಡಿದ್ದಾರೆ.

ಆರ್.ಟಿ.ನಗರದಲ್ಲಿರುವ ಬಸವರಾಜ್ ಬೊಮ್ಮಾಯಿಖಾಸಗಿ ನಿವಾಸದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಈ ಬಗ್ಗೆ ನಿವಾಸದ ಹೊರಭಾಗದಲ್ಲಿ ಬೋರ್ಡ್ ಹಾಕಲಾಗಿದೆ.

ಸಿಎಂ ಭೇಟಿಗೆ ಬರುವವರು ಬಂದು, ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿ ಹೋಗಬಹುದು.ಆದರೆ ಸಿಎಂ ನಿವಾಸದ ಒಳಭಾಗಕ್ಕೆ ಮೊಬೈಲ್ ಒಯ್ಯುವಂತಿಲ್ಲ. ಖಡಕ್ ಆದೇಶದಿಂದ ಕಾರ್ಯಕರ್ತರು ಹಾಗೂ ಸಿಎಂ ಭೇಟಿಗೆ ಬಂದವರು ಕಂಗಾಲಾಗಿದ್ದಾರೆ.

ಸಿಎಂ ಭೇಟಿಗೆ ಬಂದವರು ಭೇಟಿ ಬಳಿಕ ಮೊಬೈಲ್ ನಲ್ಲಿ ಸೆಲ್ಪಿ ತೆಗೆದುಕೊಳ್ಳಲು ಆರಂಭಿಸುತ್ತಾರೆ. ಇದರಿಂದ ಅನಗತ್ಯ ಸಮಯ ವ್ಯರ್ಥವಾಗುತ್ತದೆ. ಹೀಗಾಗಿ ಮೊಬೈಲ್ ನಿಷೇಧಿಸಲಾಗಿದೆ ಎಂದು ಸಿಎಂ ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.