ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ದೆಹಲಿಗೆ ಹೋಗಿ ಬಂದವರಿಗೆ ಉತ್ತರ ಕೊಟ್ಟು ಕಳುಹಿಸಿದ್ದಾರೆ. ಕೊರೊನಾ ಎದುರಿಸುವುದಷ್ಟೆ ನನ್ನ ಗುರಿ ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಅತೃಪ್ತರಿಗೆ ಟಾಂಗ್ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವಂತೆ ಸಚಿವ ಸಿ.ಪಿ.ಯೋಗೀಶ್ವರ್ ನಾಯಕತ್ವದಲ್ಲಿ ಹಲವು ಶಾಸಕರು ದೆಹಲಿಗೆ ತೆರಳಿದ್ದರು. ಅಲ್ಲದೇ ಜೂನ್ ಮೊದಲ ವಾರದಲ್ಲಿಯೇ ಯಡಿಯೂಪ್ಪ ಬದಲಾವಣೆಯಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಸ್ವೈ ಗರಂ ಆಗಿದ್ದಾರೆ.
ಕೊರೊನಾ ಗೆಲ್ಲುವ ಹೋರಾಟ ಬಿಟ್ಟು ಬೇರೆ ಯಾವುದೇ ವಿಚಾರವೂ ನನ್ನ ಮುಂದೆ ಇಲ್ಲ. ದೆಹಲಿಗೆ ತೆರಳಿದವರಿಗೆ ಬಿಜೆಪಿ ವರಿಷ್ಠರು ಉತ್ತರ ಕೊಟ್ಟು ಕಳುಹಿಸಿದ್ದಾರೆ ಅನ್ನೋ ಮೂಲಕ ಯಡಿಯೂರಪ್ಪ ತಾನು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಅನ್ನೋ ಉತ್ತರವನ್ನು ನೀಡಿದ್ದಾರೆ. ಈ ಬೆಳವಣಿಗೆಯ ನಡುವಲ್ಲೇ ಸಂಪುಟ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ರೆಬೆಲ್ ನಾಯಕ ಸಿ.ಪಿ.ಯೋಗೀಶ್ವರ್ ಭಾಗಿಯಾಗಿದ್ದಾರೆ.