ತೋಟದ ಮನೆಯಲ್ಲಿ ಬುಟ್ಟಿ ಹೊತ್ತ ಮಿಲ್ಕಿ ಬ್ಯೂಟಿ…! ಇದು ಆಶಿಕಾ ಲಾಕ್ ಡೌನ್ ಡೈರಿ…!!

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ನಟ-ನಟಿಯರೆಲ್ಲ ಈಗ ಕೈಯಲ್ಲಿ ಕೆಲಸವಿಲ್ಲದೇ ಮನೆ ಸೇರಿದ್ದಾರೆ. ಕೊರೋನಾ ಎರಡನೇ ಅಲೆ ಎಲ್ಲವನ್ನು ಸ್ತಬ್ಧಗೊಳಿಸಿದೆ. ಈ ಮಧ್ಯೆ ಹಾಲಿನಂತ ಬಿಳುಪಿನ ಚೆಲುವೆ ಆಶಿಕಾ ರಂಗನಾಥ ಮಾತ್ರ ತೋಟದ ಮನೆ ಸೇರಿದ್ದು, ಕೈತುಂಬ ಕೆಲಸ ಮಾಡ್ತಿರೋ ಪೋಟೋ ಹಂಚಿಕೊಂಡಿದ್ದಾರೆ.

https://kannada.newsnext.live/bangalore-south-mp-tejasvisurya-vaccine-drive-private-hospital/amp/

ಇದೇ ಮೊದಲ ಬಾರಿಗೆ ಮನೋರಂಜನಾ ಕ್ಷೇತ್ರ ಸಂಪೂರ್ಣ ಸ್ತಬ್ಧವಾಗಿದ್ದು, ಸಿನಿಮಾ ಶೂಟಿಂಗ್, ಸೀರಿಯಲ್,ರಿಯಾಲಿಟಿ ಶೋ ಎಲ್ಲವೂ ಚಿತ್ರೀಕರಣ ನಿಲ್ಲಿಸಿದೆ. ಹೀಗಾಗಿ ನಟ-ನಟಿಯರೆಲ್ಲ ತಮ್ಮ ಫ್ರೀ ಟೈಂನಲ್ಲಿ ಕೊರೋನಾ ಸಂತ್ರಸ್ಥರಿಗೆ ನೆರವಾಗೋದು, ತೋಟದ ಮನೆಯಲ್ಲಿ ಸಮಯ ಕಳೆಯೋದರಲ್ಲಿ ತೊಡಗಿಸಿಕೊಂಡಿದ್ದಾರೆ.

https://kannada.newsnext.live/nhai-issues-guidelines-for-toll-plazas-to-reduce-waiting-time/amp/

ನಟಿ ಆಶೀಕಾ ರಂಗನಾಥ ಕೂಡ ತಮ್ಮ ತೋಟದ ಮನೆಯಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಕೇವಲ ಟೈಂ ಪಾಸ್ ಮಾಡೋದು ಮಾತ್ರವಲ್ಲ ತೋಟದ ಮನೆಯಲ್ಲಿ ಕೆಲಸ ಮಾಡಿ ಸೈ ಎನ್ನಿಸಿಕೊಳ್ತಿದ್ದಾರೆ.

https://kannada.newsnext.live/karnataka-relief-for-auto-taxi-drivers-click-here-to-apply/amp/

ಮಾವಿನ ತೋಪಿನಲ್ಲಿ ಬುಟ್ಟಿ ಹಿಡಿದು ಕೆಲಸ ಮಾಡ್ತಿರೋ ಪೋಟೋಗಳನ್ನು ಹಂಚಿಕೊಂಡಿರೋ ಆಶೀಕಾ ರಂಗನಾಥ್, ಕೊರೋನಾದಲ್ಲಿ ನಾನಂತೂ ಕೃಷಿಳಾದೆ ಎಂಬಂತೆ  ಪೋಸು ನೀಡಿದ್ದಾರೆ.

ಆಶಿಕಾಗೆ ಕುಟುಂಬದ ಇತರ ಸದಸ್ಯರು, ಮುದ್ದಿನ ನಾಯಿ ಕೂಡ ಸಾಥ್ ನೀಡಿದೆ. ಹಲ್ಲು ಕತ್ತರಿಸೋದು, ಗಿಡಗಳಿಗೆ ನೀರು ಹಾಕೋದು, ಹೊಸ ಜಾತಿಯ ಸಸ್ಯಗಳನ್ನು ನೆಡೋದು ಹೀಗೆ ಸಾಕಷ್ಟು ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ ಮಿಲ್ಕಿಬ್ಯೂಟಿ.

ತಮ್ಮ ನೆಚ್ಚಿನ ನಟಿಯ ಕೃಷಿಕೆಲಸದ ಪೋಟೋ ನೋಡಿರೋ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.  

Comments are closed.