ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್‌, ಉತ್ತರ ಕನ್ನಡಕ್ಕೆ ಮಂಕಾಳ್‌ ವೈದ್ಯ : ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ

ಬೆಂಗಳೂರು : District incharge ministers list : ಸರಕಾರ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ನಿರೀಕ್ಷೆಯಂತೆಯೇ ಬೆಂಗಳೂರು ಉಸ್ತುವಾರಿಯ ಹೊಣೆ ದೊರೆತಿದೆ. ಹೈಕಮಾಂಡ್‌ ಮಟ್ಟದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ. ಹಾಗಾದ್ರೆ ಯಾವ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ ದೊರೆತಿದೆ ಅನ್ನೋ ಮಾಹಿತಿ ಇಲ್ಲಿದೆ.

District incharge ministers list : ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ

  • ಡಿಕೆ ಶಿವಕುಮಾರ್‌ – ಬೆಂಗಳೂರು ನಗರ
  • ಡಾ.ಜಿ.ಪರಮೇಶ್ವರ್‌ – ತುಮಕೂರು
  • ಲಕ್ಷ್ಮೀ ಹೆಬ್ಬಾಳ್ಕರ್​-ಉಡುಪಿ
  • ಮಂಕಾಳ್ ವೈದ್ಯ-ಉತ್ತರ ಕನ್ನಡ
  • ಹೆಚ್.ಕೆ.ಪಾಟೀಲ್‌ -ಗದಗ
  • ಕೆ.ಹೆಚ್.ಮುನಿಯಪ್ಪ- ಬೆಂಗಳೂರು ಗ್ರಾಮಾಂತರ
  • ರಾಮಲಿಂಗಾರೆಡ್ಡಿ-ರಾಮನಗರ
  • ಕೆ.ಜೆ.ಜಾರ್ಜ್​-ಚಿಕ್ಕಮಗಳೂರು
  • ಎಂ.ಬಿ.ಪಾಟೀಲ್​-ವಿಜಯಪುರ
  • ದಿನೇಶ್ ಗುಂಡೂರಾವ್​-ದಕ್ಷಿಣ ಕನ್ನಡ
  • ಹೆಚ್​.ಸಿ.ಮಹದೇವಪ್ಪ-ಮೈಸೂರು,
  • ಸತೀಶ್ ಜಾರಕಿಹೊಳಿ-ಬೆಳಗಾವಿ
  • ಪ್ರಿಯಾಂಕ್​ ಖರ್ಗೆ-ಕಲಬುರಗಿ
  • ಶಿವಾನಂದಪಾಟೀಲ್-ಹಾವೇರಿ
  • ಜಮೀರ್​ ಅಹ್ಮದ್ ಖಾನ್​​-ವಿಜಯನಗರ
  • ಶರಣಬಸಪ್ಪ ದರ್ಶನಾಪುರ-ಯಾದಗಿರಿ
  • ಈಶ್ವರ್ ಖಂಡ್ರೆ-ಬೀದರ್
  • ಬಿ.ನಾಗೇಂದ್ರ-ಬಳ್ಳಾರಿ
  • ಕೆ.ಎನ್​.ರಾಜಣ್ಣ-ಹಾಸನ
  • ಭೈರತಿ ಸುರೇಶ್​-ಕೋಲಾರ
  • ಮಧು ಬಂಗಾರಪ್ಪ-ಶಿವಮೊಗ್ಗ
  • ಡಾ.ಎಂ.ಸಿ.ಸುಧಾಕರ್-ಚಿಕ್ಕಬಳ್ಳಾಪುರ
  • ಎನ್​.ಎಸ್​.ಬೋಸರಾಜು-ಕೊಡಗು ಜಿಲ್ಲಾ
  • ಚಲುವರಾಯಸ್ವಾಮಿ-ಮಂಡ್ಯ
  • ಎಸ್​.ಎಸ್​.ಮಲ್ಲಿಕಾರ್ಜುನ್​-ದಾವಣಗೆರೆ
  • ಸಂತೋಷ್ ಲಾಡ್-ಧಾರವಾಡ
  • ಶರಣಪ್ರಕಾಶ್ ಪಾಟೀಲ್​-ರಾಯಚೂರು
  • ಆರ್​.ಬಿ.ತಿಮ್ಮಾಪುರ-ಬಾಗಲಕೋಟೆ
  • ಕೆ.ವೆಂಕಟೇಶ್​-ಚಾಮರಾಜನಗರ
  • ಶಿವರಾಜ್​ ತಂಗಡಗಿ-ಕೊಪ್ಪಳ
  • ಡಿ.ಸುಧಾಕರ್​-ಚಿತ್ರದುರ್ಗ

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಯಾರೊಬ್ಬರಿಗೂ ಕೂಡ ಸಚಿವ ಸ್ಥಾನ ಲಭಿಸದ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳಿಗೂ ಹೊರ ಜಿಲ್ಲೆಯವರೇ ಈ ಬಾರಿ ಉಸ್ತುವಾರಿಯ ಹೊಣೆ ಹೊತ್ತುಕೊಂಡಿದ್ದಾರೆ. ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಉಸ್ತುವಾರಿ ಸಚಿವರಾಗಿದ್ರೆ, ದಕ್ಷಿಣ ಕನ್ನಡ ಜಿಲ್ಲೆಗೆ ದಿನೇಶ್‌ ಗುಂಡೂರಾವ್‌ ಉಸ್ತುವಾರಿ ಸಚಿವರಾಗಿದ್ದಾರೆ. ಇನ್ನು ಭಟ್ಕಳ ಶಾಸಕರಾಗಿದ್ದ ಮಂಕಾಳ್‌ ವೈದ್ಯ ಅವರು ಇದೇ ಮೊದಲ ಬಾರಿ ಸಚಿವರಾಗಿದ್ದು, ಇದೀಗ ತಮ್ಮ ಜಿಲ್ಲೆಯ ಉಸ್ತುವಾರಿ ಹೊಣೆವಹಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಉಸ್ತುವಾರಿಯ ಮೇಲೆ ಕಣ್ಣಿಟ್ಟಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ನಿರಾಸೆಯಾಗಿದ್ರೆ, ಸತೀಶ್‌ ಜಾರಕಿಹೊಳಿ ಅವರು ಬೆಳಗಾವಿ ಉಸ್ತುವಾರಿ ಸಚಿವರಾಗಿದ್ದಾರೆ.

ಇದನ್ನೂ ಓದಿ : ಉಚಿತ.. ಉಚಿತ.. ಉಚಿತ ಎನ್ನುತ್ತಲೇ ಗ್ರಾಹಕರಿಗೆ ವಿದ್ಯುತ್‌ ಶಾಕ್‌ ಕೊಟ್ಟ ರಾಜ್ಯ ಸರಕಾರ

ಇದನ್ನೂ ಓದಿ : BJP leader Swami Gowda : ಅಪಘಾತದಲ್ಲಿ ಬಿಜೆಪಿ ಮುಖಂಡ ಸಾವು

Karnataka CM Siddaramaiah announce district incharge ministers list

Comments are closed.