ಸೋಮವಾರ, ಏಪ್ರಿಲ್ 28, 2025
HomepoliticsBL Santosh Warning : ಮೋದಿ ಜಪ ಬಿಡಿ : ನಿಮ್ಮ ತಪ್ಪು ತಿದ್ದಿಕೊಂಡು ಎಲೆಕ್ಷನ್...

BL Santosh Warning : ಮೋದಿ ಜಪ ಬಿಡಿ : ನಿಮ್ಮ ತಪ್ಪು ತಿದ್ದಿಕೊಂಡು ಎಲೆಕ್ಷನ್ ಸಿದ್ಧವಾಗಿ : ಶಾಸಕರಿಗೆ ಬಿ.ಎಲ್.ಸಂತೋಷ್ ವಾರ್ನಿಂಗ್

- Advertisement -

ಬೆಂಗಳೂರು : ಕೇವಲ ಮೋದಿ ಹೆಸರಿನ ಜಪ ಮಾಡುತ್ತ ಚುನಾವಣೆ (Karnataka Election 2023) ಗೆಲ್ಲೋ ಕನಸಿನಲ್ಲಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಹಾಗೂ ಶಾಸಕರುಗಳಿಗೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santosh Warning ) ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಕಾರಿಣಿ ವೇಳೆ ಚುನಾವಣಾ ಪೂರ್ವಸಿದ್ಧತೆ ನಡೆಸುವಂತೆ ಕಿವಿಮಾತು ಹೇಳಿದ ಬಿ.ಎಲ್.ಸಂತೋಷ್ ಶಾಸಕರು,ಸಚಿವರನ್ನು ಅಲರ್ಟ್ ಮಾಡಿ ಬಿಸಿ ಮುಟ್ಟಿಸಿದ್ದಾರೆ.

ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಚುನಾವಣೆಗೆ ತಯಾರಾಗಿ.ಲೋಪ ಸರಿಪಡಿಸಿಕೊಂಡು ಚುನಾವಣೆಗೆ ತಯಾರಾಗಿ.ಆಡಳಿತ ವಿರೋಧಿ ಅಲೆ ಎದುರಿಸಲು ಸಜ್ಜಾಗಿ. ಪಂಚ ರಾಜ್ಯಗಳ ಚುನಾವಣೆ ಯಲ್ಲೂ ಸಾಕಷ್ಟು ಆಡಳಿತ ವಿರೋಧಿ ಅಲೆ ಇತ್ತು.ಆದರೆಅದನ್ನು ಗೆಲುವಾಗಿ ಪರಿವರ್ತಿಸುವಲ್ಲಿ ಪಕ್ಷ ಯಶಸ್ವಿ ಯಾಗಿದೆ. ಅದೇ ರೀತಿ ಇಲ್ಲೂ ಆಡಳಿತ ವಿರೋಧಿ ಅಲೆ ಎದುರಿಸಿ, ಪಕ್ಷ ಗೆಲ್ಲುವ ರೀತಿ ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದ್ದಾರೆ . ಮಾತ್ರವಲ್ಲ ಕೇವಲ ಚುನಾವಣೆಗೆ ಕೇವಲ ಮೋದಿ ಹೆಸರು ಜಪ ಮಾಡ್ತಿದ್ರೇ ಸಾಲದು, ಚುನಾವಣೆಗೆ ಗೆಲ್ಲಲು ನಿಮ್ಮ ಲೋಪ ಸರಿಪಡಿಸಿಕೊಳ್ಳಿ. ಅದನ್ನು ಸರಿಪಡಿಸಲು ಈಗಿನಿಂದಲೇ ಮಾರ್ಗಗಳನ್ನು ಪತ್ತೆ ಹಚ್ಚಿ ಪಕ್ಷದ ಪ್ರಭಾರಿಗಳು ಮತ್ತು ಸಹ ಪ್ರಭಾರಿಗಳು ವಿಧಾನಸಭೆ ಕ್ಷೇತ್ರದಲ್ಲಿನ ವೀಕ್ ಪತ್ತೆ ಹಚ್ಚಿ ಅದರ ಬಗ್ಗೆ ರಾಜ್ಯಾಧ್ಯಕ್ಷರಿಗೆ ವರದಿ ನೀಡಿ ಎಂದು ಸೂಚಿಸಿದ್ದಾರೆ.

ಮಾತ್ರವಲ್ಲ ವಿಶ್ವದಲ್ಲಿ ಭಾರತದ ಕುರಿತು ಒಳ್ಳೆಯ ಅಭಿಪ್ರಾಯ ಇದೆ.ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವವೇ ಕಾರಣ.ಅವರ ವಿದೇಶಾಂಗ ನೀತಿಯಿಂದ ವಿಶ್ಚವೇ ಭಾರತ ವನ್ನು ತಿರುಗಿ ನೋಡುವಂತೆ ಮಾಡಿದೆ. ಹೀಗಾಗಿ ಪ್ರಧಾನಿಗಳ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ.ಅಭಿವೃದ್ಧಿ ಕಾರ್ಯಗಳ ಮೂಲಕ ಮತದಾರರ ಸೆಳೆಯುವ ಪ್ರಯತ್ನ ಮಾಡಿ ಎಂದು ಅಲರ್ಟ್ ಮಾಡಿದ್ದಾರೆ.

ಇನ್ನೂ ತಮ್ಮ ಮಾತಿನುದ್ದಕ್ಕೂ ಬಿ.ಎಲ್.ಸಂತೋಷ್, ಇನ್ಮುಂದೆ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ‌ ಅಲ್ಲದೇ ಶಿಸ್ತು ಮೀರಿದರೆ ಸಹಿಸುವುದಿಲ್ಲ. ಪಕ್ಷದಲ್ಲಿ ಅಶಿಸ್ತು ಉಂಟು ಮಾಡುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು, ಶಾಸಕರು, ಸಚಿವರು, ಮುಖ್ಯಮಂತ್ರಿ ಯಾರೇ ಆಗಿದ್ದರೂ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವಂತೆ ನಡೆದುಕೊಂಡರೆ ಪಕ್ಷ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಸಹ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಸಿದ್ದರು.

ಇದನ್ನೂ ಓದಿ : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪರ ಬ್ಯಾಟ್​ ಬೀಸಿದ ಮಾಜಿ ಸಿಎಂ ಹೆಚ್​ಡಿಕೆ

ಇದನ್ನೂ ಓದಿ : ಈಶ್ವರಪ್ಪ ಪ್ರಾಮಾಣಿಕನೆಂದು ಪ್ರಮಾಣ ಮಾಡಲಿ : ಹಿಂದೂ ಮಹಾಸಭಾ ಸವಾಲ್​

Karnataka Election 2023 : BL Santosh warning for BJP MLA

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular