JP Nadda : ಕರ್ನಾಟಕದಲ್ಲಿ 150 ಸೀಟ್ ಗೆಲ್ಲೋದೇ ಗುರಿ : ಸಭೆಯಲ್ಲಿ ತ್ರೀ ಸೂತ್ರ ಪ್ರಕಟಿಸಿದ ನಡ್ಡಾ

ಬೆಂಗಳೂರು : ಪಂಚ ರಾಜ್ಯ ಚುನಾವಣೆಯ ಗೆಲುವಿನ ಖುಷಿಯಲ್ಲಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿ ಪಾಳಯಕ್ಕೆ ಎರಡು ದಿನದ ಕಾರ್ಯಕಾರಿಣಿ ಬಿಸಿ ಮುಟ್ಟಿಸುವ ವರ್ಕ್ ಶಾಪ್ ಆಗಿ ಬದಲಾಗಿದೆ. ಒಂದೆಡೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕುಟುಂಬ ರಾಜ್ಯಕಾರಣಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಸಿದ ಬೆನ್ನಲ್ಲೇ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ (JP Nadda ) 150 ಸೀಟ್ ಗೆಲ್ಲಲೇ ಬೇಕೆಂದು ವಾರ್ನಿಂಗ್ ಮಾಡಿದ್ದಾರೆ.

ಕಾರ್ಯಕಾರಿಣಿ ಸಭೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉಪಸ್ಥಿತಿಯಲ್ಲಿ ಕಾರ್ಯಕಾರಿಣಿ ನಡೆದ ಸ್ಥಳದಲ್ಲೇ ರಾಜ್ಯ ಬಿಜೆಪಿ ನಾಯಕರ ಜೊತೆ ನಡ್ಡಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದರು.

ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಪಕ್ಷದ ಕಾರ್ಯಚಟುವಟಿಕೆಗಳು, ಮುಂದಿನ ಚುನಾವಣೆಯ ತಂತ್ರಗಾರಿಕೆ ಸಂಬಂಧ ಚರ್ಚೆ ನಡೆಸಿದ ಜೆ.ಪಿ.ನಡ್ಡಾ, ಸಭೆಯಲ್ಲಿ ರಾಜ್ಯ ಬಿಜೆಪಿಗರಿಗೆ ಮೂರು ಪ್ರಮುಖ ಟಾಸ್ಕ್ ನೀಡಿದ್ದಾರಂತೆ.

  • ಕರ್ನಾಟಕದಲ್ಲಿ ಮಿಷನ್ 150 ಗುರಿ ತಲುಪಲು ಭರದ ಸಿದ್ಧತೆ ಮಾಡಿಕೊಳ್ಳಿ ಎಂದು ರಾಜ್ಯ ಬಿಜೆಪಿಗರಿಗೆ ನಡ್ಡಾ ಸೂಚಿಸಿದ್ದಾರೆ.
  • ಕಷ್ಟದ ವಿಧಾನಸಭೆ ಕ್ಷೇತ್ರಗಳನ್ನು ರಿಸ್ಕ್ ಆಧಾರದಲ್ಲಿ ವಿಂಗಡಿಸಿಕೊಂಡು ಫೋಕಸ್ ಮಾಡಿ ಹೆಚ್ಚು ಗಮನ ಹರಿಸಿ ಗೆಲುವು ಪಡೆದುಕೊಳ್ಳಿ.
  • ಕಾಂಗ್ರೆಸ್, ಜೆಡಿಎಸ್ ಭದ್ರ ಕೋಟೆಗಳಲ್ಲಿ ವಿಶೇಷ ಗಮನ ಹರಿಸಿ ಬಿಜೆಪಿಯ ಕ್ಯಾಂಡಿಡೇಟ್ ಗಳನ್ನು ನಿಲ್ಲಿಸಿ ಗೆಲ್ಲಿಸಿ.
  • ಕೇಂದ್ರ ಮತ್ತು ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಿ ಎಂದಿದ್ದಾರಂತೆ.

ಮಾತ್ರವಲ್ಲ ರಾಜ್ಯದ ಸಿಎಂ ರಿಂದ ಹಿಡಿದು ಪದಾಧಿಕಾರಿಗಳವರೆಗೆ ಎಲ್ಲರ ಪಕ್ಷ ಸಂಘಟನೆ ಕಡ್ಡಾಯ. ಸಚಿವರು ತಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲದೇ ಜಿಲ್ಲಾ ಸಂಘಟನೆಯ ಮೇಲೆ ಫೋಕಸ್ ಮಾಡಿ ಎಂದು ಪಕ್ಷದ ನಾಯಕರಿಗೆ ನಡ್ಡಾ ತಾಕೀತು ಮಾಡಿದ್ದಾರೆ.

ಇನ್ನು ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಎರಡು ಸೂತ್ರ ಸೂಚಿಸಿರುವ ಜೆಪಿ ನಡ್ಡಾ, ಪಕ್ಷ ಸಂಘಟನೆ, ಅಭಿವೃದ್ಧಿ‌ ಮತ್ತು ಹಿಂದುತ್ವದ ಅಜೆಂಡಾಗಳ ಸೂತ್ರ ಅನುಸರಿಸಿ. ರಾಜ್ಯದಲ್ಲಿ ನೂರೈವತ್ತು ಸೀಟ್ ಬರಲೇಬೇಕು .ರಾಜ್ಯ ಪ್ರವಾಸಗಳನ್ನು ಮಾಡಲೇಬೇಕು.ಪ್ರತಿ ತಿಂಗಳು ಕೋರ್ ಕಮಿಟಿ ಸಭೆಗಳನ್ನು ಮಾಡಿಕೊಂಡು ಬರಬೇಕು ಸಮಸ್ಯೆಗಳಿದ್ದಲ್ಲಿ ಕೋರ್ ಕಮಿಟಿಯಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ಮಾಡಬೇಕು ನೂರೈವತ್ತು ಸೀಟ್ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರಂತೆ.

ಇದನ್ನೂ ಓದಿ : ಮೋದಿ ಜಪ ಬಿಡಿ : ನಿಮ್ಮ ತಪ್ಪು ತಿದ್ದಿಕೊಂಡು ಎಲೆಕ್ಷನ್ ಸಿದ್ಧವಾಗಿ : ಶಾಸಕರಿಗೆ ಬಿ.ಎಲ್.ಸಂತೋಷ್ ವಾರ್ನಿಂಗ್

ಇದನ್ನೂ ಓದಿ : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪರ ಬ್ಯಾಟ್​ ಬೀಸಿದ ಮಾಜಿ ಸಿಎಂ ಹೆಚ್​ಡಿಕೆ

JP Nadda announces three formula to win 150 seats in Karnataka Election

Comments are closed.