Karnataka Election 2023 Tickets : ಕಾಂಗ್ರೆಸ್‌ ನಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌ ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಬೆಂಗಳೂರು : (Karnataka Election 2023 Tickets) ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ದವಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಂಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಗೆ ಮುನ್ನವೇ ಕಾಂಗ್ರೆಸ್‌ 124 ಕ್ಷೇತ್ರಗಳಿಗೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿರುವ ಕಾಂಗ್ರೆಸ್‌ ಅತೀ ಹೆಚ್ಚು ಟಿಕೆಟ್‌ ಗಳನ್ನು ಲಿಂಗಾಯತ ಸಮುದಾಯಕ್ಕೆ ನೀಡಿದೆ. ಹಾಗಿದ್ದರೆ ಕಾಂಗ್ರೆಸ್‌ ಪಕ್ಷದಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌ ಸಿಕ್ಕಿದೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.

124 ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಒತ್ತು ನೀಡಿರುವ ಕಾಂಗ್ರೆಸ್‌ ಪಕ್ಷ 32 ಕ್ಷೇತ್ರಗಳನ್ನು ಲಿಂಗಾಯತ ಸಮುದಾಯಕ್ಕೆ ನೀಡಿದೆ. ಒಕ್ಕಲಿಗರಿಗೆ 19 ಕ್ಷೇತ್ರ, ಮುಸ್ಲಿಂ ಸಮುದಾಯಕ್ಕೆ 9 ಟಿಕೆಟ್‌, ಕ್ರಿಶ್ಚಿಯನ್‌ ಅಮುದಾಯಕ್ಕೆ ಒಂದು ಟಿಕೆಟ್‌, ಬ್ರಾಹ್ಮಣ ಸಮುದಾಯಕ್ಕೆ 5 ಟಿಕೆಟ್‌, 22 ಎಸ್‌ ಸಿ, 10 ಎಸ್‌ ಟಿ, 19 ಒಕ್ಕಲಿಗ, 5 ರೆಡ್ಡಿ, 5 ಕುರುಬ, 4 ಈಡಿಗ, 2 ಮರಾಠ, 1 ಕುಂಬಾರ, 1 ಬಂಟ, 1 ರಜಪೂತ್‌, 1 ಬೆಸ್ತ ಸಮುದಾಯಗಳಿಗೆ ಟಿಕೆಟ್‌ ನೀಡಿದೆ. ಲಿಂಗಾಯತ ಮತ್ತು ಎಸ್‌ ಸಿ, ಎಸ್‌ ಟಿ ಸಮುದಾಯಕ್ಕೆ ಅತೀ ಹೆಚ್ಚು ಟಿಕೆಟ್‌ ಘೋಷಣೆಯನ್ನು ಕಾಂಗ್ರೆಸ್‌ ಮಾಡಿದೆ.

ಕಾದು ನೋಡುವ ತಂತ್ರಕ್ಕೆ ಮೊರೆಹೋದ ಕಾಂಗ್ರೆಸ್‌, ಯಶವಂತಪುರ, ಚಿಕ್ಕಮಗಳೂರು, ಕೆ.ಆರ್.ಪುರಂ ಕ್ಷೇತ್ರಗಳಲ್ಲಿ ಇನ್ನೂ ಟಿಕೆಟ್‌ ಫೈನಲ್‌ ಮಾಡಿಲ್ಲ. ಇದಲ್ಲದೇ ಕಾಂಗ್ರೆಸ್‌ ಜೆಡಿಎಸ್‌ ಬಿಟ್ಟು ಹೋದವರನ್ನು ಕೂಡ ಕರೆತರುವ ಪ್ರಯತ್ನವನ್ನ ಹೈಕಮಾಂಡ್‌ ಮಾಡುತ್ತಿದ್ದು, ಕೆಲವು ಕ್ಷೇತ್ರಗಳ ಟಿಕೆಟ್‌ ಅನ್ನು ಇನ್ನೂ ಸಸ್ಪೆನ್ಸ್‌ ನಲ್ಲಿರಿಸಿದೆ.

ಇದನ್ನೂ ಓದಿ : Congress ticket : ಯು.ಟಿ.ಖಾದರ್‌, ರಮಾನಾಥ ರೈ, ರಕ್ಷಿತ್‌ ಶಿವರಾಂಗೆ ಕಾಂಗ್ರೆಸ್‌ ಟಿಕೆಟ್‌

ಇದನ್ನೂ ಓದಿ : Karnataka Election : ಕುಂದಾಪುರಕ್ಕೆ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಕಾಪುಗೆ ವಿನಯ್‌ ಕುಮಾರ್‌ ಸೊರಕೆ

ಬಹುತೇಕ ಕ್ಷೇತ್ರಗಳಿಗೆ ಕಾಂಗ್ರೆಸ್‌ ಹೊಸ ಮುಖಗಳನ್ನು ಪರಿಚಯಿಸಿದೆ. ಮೊದಲ ಹಂತದಲ್ಲಿ ಏಕ ಅಭ್ಯರ್ಥಿಗಳಿರುವ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಎರಡನೇ ಹಂತದಲ್ಲಿ ಉಳಿದ ನೂರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಪ್ರಕಟವಾಗುವ ಸಾಧ್ಯತೆಯಿದೆ. ಬಾರೀ ಪೈಪೋಟಿಯಿಂದ ಕೂಡಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಪರಿಶೀಲನೆ ನಡೆಸುತ್ತಿದ್ದು, ಚುನಾವಣಾ ಘೋಷಣೆಯ ನಂತರದಲ್ಲಿ ಅಭ್ಯರ್ಥಿಗಳ ಘೋಷಣೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Karnataka Election 2023 : ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ,124 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

Karnataka Election 2023 Tickets: How many tickets for which community in Congress? Here are complete details

Comments are closed.