Karnataka Election : ಕುಂದಾಪುರಕ್ಕೆ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಕಾಪುಗೆ ವಿನಯ್‌ ಕುಮಾರ್‌ ಸೊರಕೆ

ಉಡುಪಿ : (Karnataka Election ) ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಘೋಷಣೆಗೆ ಮುನ್ನವೇ ಕಾಂಗ್ರೆಸ್‌ 124 ಕ್ಷೇತ್ರಗಳಿಗೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕ್ಷೇತ್ರ ಹುಡುಕಾಟ ನಡೆಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಗೂ ವರುಣಾ ಕ್ಷೇತ್ರದಿಂದಲೇ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಹುತೇಕ ಕ್ಷೇತ್ರಗಳಿಗೆ ಕಾಂಗ್ರೆಸ್‌ ಹೊಸ ಮುಖಗಳನ್ನು ಪರಿಚಯಿಸಿದ್ದು, ಮೊದಲ ಹಂತದಲ್ಲಿ ಏಕ ಅಭ್ಯರ್ಥಿಗಳಿರುವ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇದೀಗ ಕುಂದಾಪುರ ಕ್ಷೇತ್ರಕ್ಕೆ ದಿನೇಶ್‌ ಹೆಗ್ಡೆ ಮೊಳಹಳ್ಳಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ಕಾಪು ಕ್ಷೇತ್ರಕ್ಕೆ ವಿನಯ್‌ ಕುಮಾರ್‌ ಸೊರಕೆ ಆಯ್ಕೆಯಾಗಿದ್ದಾರೆ.

೧೯೯೮ ರಿಂದ ನಿರಂತರವಾಗಿ ಕುಂದಾಪುರ ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಕಾಣುತ್ತಲೇ ಬಂದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ಬಿಜೆಪಿಯ ಟ್ರಂಪ್‌ ಕಾರ್ಡ್‌ ಇದ್ದಂತೆ. ಕಾಂಗ್ರೆಸ್‌ ನಲ್ಲಿ ಹಾಲಾಡಿ ಎದುರು ಯಾರು ಎಂಬ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದ್ದು, ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಹೆಗ್ಡೆ ಮೊಳಹಳ್ಳಿ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿದ್ದಾರೆ. ದಿನೇಶ್‌ ಹೆಗ್ಡೆ ಹೆಚ್ಚು ಸಕ್ರೀಯರಾಗಿದ್ದ ಅಭ್ಯರ್ಥಿಯಾಗಿದ್ದು, ಹಾಲಾಡಿ ಎದುರಲ್ಲಿ ನಿಂತು ಸ್ಪರ್ದಿಸಲಿದ್ದಾರೆ. ಇನ್ನೂ ಕಾಪು ಕ್ಷೇತ್ರಕ್ಕೆ ವಿನಯ್‌ ಕುಮಾರ್‌ ಸೊರಕೆ ಆಯ್ಕೆಯಾಗಿದ್ದಾರೆ.

ಬಹುತೇಕ ಕ್ಷೇತ್ರಗಳಿಗೆ ಕಾಂಗ್ರೆಸ್‌ ಹೊಸ ಮುಖಗಳನ್ನು ಪರಿಚಯಿಸಿದೆ. ಮೊದಲ ಹಂತದಲ್ಲಿ ಏಕ ಅಭ್ಯರ್ಥಿಗಳಿರುವ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಎರಡನೇ ಹಂತದಲ್ಲಿ ಉಳಿದ ನೂರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಪ್ರಕಟವಾಗುವ ಸಾಧ್ಯತೆಯಿದೆ. ಬಾರೀ ಪೈಪೋಟಿಯಿಂದ ಕೂಡಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಪರಿಶೀಲನೆ ನಡೆಸುತ್ತಿದ್ದು, ಚುನಾವಣಾ ಘೋಷಣೆಯ ನಂತರದಲ್ಲಿ ಅಭ್ಯರ್ಥಿಗಳ ಘೋಷಣೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Karnataka Election 2023 : ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ,124 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಇದನ್ನೂ ಓದಿ : Pushpa Amar Nath: ಉರಿಗೌಡ ನಂಜೇಗೌಡ ತಮಿಳುನಾಡು ಮೂಲದವರು: ಅವರ ಹೆಸರಲ್ಲಿ ಬಿಜೆಪಿ ರಾಜಕೀಯ ನಾಚಿಕೆಗೇಡು ; ಪುಷ್ಪಾ ಅಮರ್‌ ನಾಥ್‌

ಇದನ್ನೂ ಓದಿ : Rahul Gandhi sacked : ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ವಜಾ

Karnataka Election 2023: Dinesh Hegde Molahalli for Kundapur, Vinay Kumar Sorake for Kapu

Karnataka Election: Dinesh Hegde Molahalli for Kundapur, Vinay Kumar Sorake for Kapu

Comments are closed.