Karnataka Legislative Assembly Opposition Leader : ಬೆಂಗಳೂರು : ಲೋಕಸಭಾ ಚುನಾವಣೆಯ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗುತ್ತಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರ ಹುದ್ದೆಯೂ ಬದಲಾಗಲಿದೆ. ಹಾಗಾದ್ರೆ ಬಿಜೆಪಿ (BJP) ಯಾರಿಗೆ ಮಣೆ ಹಾಕಲಿದೆ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಬಿಜೆಪಿ – ಜೆಡಿಎಸ್ (BJP – JDS) ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಕ್ಲಿಕ್ ಆಗಿತ್ತು. ಅದ್ರಲ್ಲೂ ಹಳೆ ಮೈಸೂರು (Old Mysore) ಭಾಗದಲ್ಲಿ ಎರಡೂ ಪಕ್ಷಗಳು ಕಳೆದ ಚುನಾವಣೆ ಗಳಿಗಿಂತ ಹೆಚ್ಚಿನ ಸ್ಥಾನವನ್ನು ಪಡೆದುಕೊಂಡಿತ್ತು. ಇದೀಗ ಬಿಜೆಪಿ ಹೈಕಮಾಂಡ್ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ಸಲಹೆಯ ಮೇರೆಗೆ ಹಲವು ಬದಲಾವಣೆಗೆ ಕೈ ಹಾಕಿದೆ.
ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಬಿಜೆಪಿ ಸಂಘಟನೆ ಮಾಡುವಲ್ಲಿ ಸಫಲರಾಗಿದ್ದಾರೆ. ಅಷ್ಟೇ ಅಲ್ಲಾ ಪಕ್ಷದಲ್ಲಿನ ಬಣ ರಾಜಕೀಯವನ್ನೂ ದೂರ ಮಾಡಿದ್ದರು. ತಮ್ಮ ವಿರುದ್ದ ಮುನಿಸಿಕೊಂಡ ನಾಯಕರ ಕೋಪ ಶಮನ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗುತ್ತಿದೆ.

ಇನ್ನು ವಿಧಾನ ಪರಿಷತ್ ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojari) ಸದ್ಯ ಚಿಕ್ಕಮಗಳೂರು – ಉಡುಪಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ವಿಧಾನ ಪರಿಷತ್ ಸ್ಥಾನ ಖಾಲಿಯಾಗಿದ್ದು, ಪ್ರತಿಪಕ್ಷ ನಾಯಕನ ಹುದ್ದೆಗೆ ಬಿಜೆಪಿ ಅನಿವಾರ್ಯವಾಗಿ ಬೇರೊಬ್ಬರನ್ನು ಆಯ್ಕೆ ಮಾಡಲೇ ಬೇಕಾಗಿದೆ. ವಿಧಾನ ಪರಿಷತ್ ಮಾತ್ರವಲ್ಲ ವಿಧಾನ ಸಭಾ ಪ್ರತಿಪಕ್ಷ ನಾಯಕನ ಹುದ್ದೆ ಬದಲಾವಣೆಗೂ ಬಿಜೆಪಿ ಸಿದ್ದವಾಗಿದೆ ಎನ್ನಲಾಗುತ್ತಿದೆ.
ಆರ್. ಅಶೋಕ್ (R Ashok) ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದಾರೆ. ಆದರೆ ಪ್ರತಿಪಕ್ಷ ನಾಯಕರಾಗಿ ವಿಧಾನಸಭೆಯ ಒಳಗೆ ಹಾಗೂ ಹೊರಗೆ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ಆರ್. ಅಶೋಕ್ ವಿಫಲರಾಗಿದ್ದಾರೆ ಎಂಬ ಆರೋಪವೂ ಇದೆ. ಹಿರಿಯ ನಾಯಕರಾಗಿದ್ದರೂ ಕೂಡ ಆರ್.ಅಶೋಕ್ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ. ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ.
ವಿಧಾನ ಪರಿಷತ್ ಪ್ರತಿಪಕ್ಷ ಸ್ಥಾನಕ್ಕೆ ಸಿಟಿ ರವಿ (CT Ravi) ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಒಕ್ಕಲಿಗ ಸಮುದಾಯದ ಸಿಟಿ ರವಿ ಅವರು ಆಯ್ಕೆಯಾದ್ರೆ, ವಿಧಾನ ಸಭಾ ಪ್ರತಿಪಕ್ಷ ನಾಯಕನ ಸ್ಥಾನವನ್ನು ಆರ್. ಅಶೋಕ್ ತ್ಯೆಜಿಸಲೇ ಬೇಕಾಗಿದೆ. ಒಕ್ಕಲಿಗ ಸಮುದಾಯದ ಎಚ್‌ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ( Shobha Karndlaje) ಅವರು ಸದ್ಯ ಕೇಂದ್ರದ ಸಚಿವರಾಗಿದ್ದಾರೆ.

ವಿಧಾನ ಸಭೆ ಹಾಗೂ ವಿಧಾನ ಪರಿಷತ್ ನಾಯಕನ ಸ್ಥಾನವೂ ಒಕ್ಕಲಿಗ ಸಮುದಾಯಕ್ಕೆ ನೀಡಲು ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಒಪ್ಪಿಗೆ ಇಲ್ಲ. ಹೀಗಾಗಿಯೇ ಆರ್. ಅಶೋಕ್ ಬದಲಾವಣೆ ಖಚಿತ ಎನ್ನಲಾಗುತ್ತಿದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ರೆ, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಒಕ್ಕಲಿಗ ಸಮುದಾಯದವರು.
ಇದನ್ನೂ ಓದಿ : HSRP Number Plate Deadline : ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಅವಧಿ ಸೆಪ್ಟೆಂಬರ್ 15ರ ವರೆಗೆ ವಿಸ್ತರಣೆ
ಇನ್ನು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಿಂದುಳಿದ ವರ್ಗಕ್ಕೆ ಸೇರಿದವರು ಆಗಿದ್ದಾರೆ. ಹೀಗಾಗಿ ಹಿಂದೆ ಪಾಲಿಸಿಕೊಂಡು ಬಂದಿರುವ ಲಿಂಗಾಯಿತ, ಒಕ್ಕಲಿಗ ಹಾಗೂ ಹಿಂದುಳಿದ ವರ್ಗದ ಲೆಕ್ಕಾಚಾರದಲ್ಲಿಯೇ ಅಧಿಕಾರ ಹಂಚಿಕೆಗೆ ಸೂತ್ರ ಸಿದ್ದವಾಗಿದೆ. ಲಿಂಗಾಯಿತ ಸಮುದಾಯದ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಸಿಟಿ ರವಿ ಆಯ್ಕೆಯಾದ್ರೆ, ವಿಧಾನ ಸಭಾ ಪ್ರತಿಪಕ್ಷ ನಾಯಕನ ಹುದ್ದೆ ಹಿಂದುಳಿದ ವರ್ಗದ ಪಾಲಾಗುವ ಸಾಧ್ಯತೆಯಿದೆ.

ಕಳೆದ ಬಾರಿ ವಿಧಾನ ಸಭಾ ಪ್ರತಿಪಕ್ಷ ನಾಯಕನ ಹುದ್ದೆಯ ರೇಸ್‌ನಲ್ಲಿ ಆರ್.ಅಶೋಕ್, ಸುನಿಲ್ ಕುಮಾರ್ ( Karkala Sunil Kumar) ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನ ಪರಿಷತ್ ಪ್ರತಿಪಕ್ಷ ನಾಯಕನಾಗಿರುವ ಕಾರಣಕ್ಕೆ ಸುನಿಲ್ ಕುಮಾರ್ ಅವರಿಗೆ ಅವಕಾಶ ಕೈತಪ್ಪಿತ್ತು. ಹೀಗಾಗಿ ಮತ್ತೆ ಸುನಿಲ್ ಕುಮಾರ್ ಹೆಸರು ಮುನ್ನೆಲೆಗೆ ಬಂದಿದೆ. ಸದ್ಯ ಹಿಂದುಳಿದ ವರ್ಗ ಹಾಗೂ ಈಡಿಗ ಸಮುದಾಯದ ಪ್ರಭಾವಿ ನಾಯಕ ಎನಿಸಿಕೊಂಡಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಈ ಬಾರಿ ಉನ್ನತ ಹುದ್ದೆಗೆ ಏರಬೇಕು ಅನ್ನೂ ಮಾತು ಪಕ್ಷದಲ್ಲಿಯೇ ಕೇಳಿಬಂದಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ಸರಕಾರದಿಂದ ಹೊಸ ರೂಲ್ಸ್: ಇನ್ಮುಂದೆ ಈ ಮಹಿಳೆಯರಿಗೆ ಸಿಗೋದೆ ಇಲ್ಲ ಹಣ
ಈ ಹಿಂದೆ ಸಂಘ ಪರಿವಾರದಿಂದಲೇ ಗುರುತಿಸಿಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಸುನಿಲ್ ಕುಮಾರ್ ಬಗ್ಗೆ ಸಂಘ ಪರಿವಾರದ ನಾಯಕರು, ಆರ್‌ಎಸ್‌ಎಸ್ ನಾಯಕರಿಂದಲೂ ಉತ್ತಮ ಅಭಿಪ್ರಾಯವಿದೆ. ಸುನಿಲ್ ಕುಮಾರ್ ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಉತ್ತಮ ಪ್ರಭಾವ ಹೊಂದಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅತೀ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಶಾಸಕರಿದ್ದು, ಸುನಿಲ್ ಕುಮಾರ್‌ಗೆ ಪಟ್ಟಕಟ್ಟುವ ಮೂಲಕ ಕರಾವಳಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡುವ ಜೊತೆಗೆ ಹಿಂದುಳಿದ ವರ್ಗಕ್ಕೆ ಪ್ರಾತಿನಿದ್ಯ ನೀಡುವುದು ಬಿಜೆಪಿ ಲೆಕ್ಕಾಚಾರ.

ಇದನ್ನೂ ಓದಿ : ಪರಶುರಾಮ ಥೀಮ್ ಪಾರ್ಕ್ ಸುನಿಲ್ ಕುಮಾರ್ ಆಸ್ತಿಯಲ್ಲ, ಕಾರ್ಕಳದ ಆಸ್ತಿ, ಜನರೇ ತೀರ್ಮಾನ ಕೈಗೊಳ್ಳಿ : ಶಾಸಕ ಸುನಿಲ್ ಕುಮಾರ್
ವಿಧಾನಸಭೆಯಲ್ಲಿ ಆರ್. ಅಶೋಕ್ ಪ್ರತಿಪಕ್ಷ ನಾಯಕ ಆಗಿದ್ದರೂ ಕೂಡ ಸುನಿಲ್ ಕುಮಾರ್ ಸದನದಲ್ಲಿ ಪಕ್ಷವನ್ನು ಸಮರ್ಥನೆ ಮಾಡಿಕೊಂಡು, ರಾಜ್ಯ ಸರಕಾರಕ್ಕೆ ಮಾತಿನ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಇದೇ ಕಾರಣಕ್ಕೆ ಮತ್ತೆ ಬಿಲ್ಲವ ಸಮುದಾಯ ಸುನಿಲ್ ಕುಮಾರ್ ಹೆಸರು ಬಲವಾಗಿ ಕೇಳಿಬರುತ್ತಿದ್ದು, ಪಕ್ಷದ ಹೈಕಮಾಂಡ್ ಕೂಡ ಆಸಕ್ತಿ ಹೊಂದಿದೆ ಎನ್ನಲಾಗುತ್ತಿದೆ.
Karnataka Legislative Assembly Opposition Leader Karkala Sunil Kumar Replace R Ashok