ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಹೇಳಿಕೆ ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
200 ರಿಂದ 300 ಕೇಸುಗಳು ದಾಖಲಾಗುತ್ತಿದ್ದು, ಇದೀಗ ಕೇಸುಗಳ ಸಂಖ್ಯೆ ಸಾವಿರದ ಸನಿಹಕ್ಕೆ ಬಂದು ತಲುಪಿದೆ. ಪರಿಸ್ಥಿತಿ ಹೀಗೆಯೆ ಮುಂದುವರಿದರೆ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಬಂದರೂ ಬರಬಹುದು. ಜನರು ಹುಷಾರಿಗರಬೇಕು ಎಂದಿದ್ದಾರೆ.
ನಾನು ಪ್ರವಾಸ ಮಾಡುವ ಸಂದರ್ಭದಲ್ಲಿ ಜನರು ಬಂದು ಮುತ್ತಿಕೊಳ್ಳುತ್ತಿದ್ದಾರೆ. ನಾನು ಜನರಲ್ಲಿ ಮಾಸ್ಕ್ ಧರಿಸುವಂತೆ ಮನವಿ ಮಾಡುತ್ತಿದ್ದೇನೆ. ನಾನು ದೇವರ ಮೇಲೆ ಭಾರ ಹಾಕಿ ಓಡಾಡುತ್ತಿದ್ದೇನೆ. ಸೋಂಕು ಸಂಪೂರ್ಣ ಹೋಗಬೇಕು. ನಾವು ಜಾಗೃತರಾಗಿರಬೇಕು. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸಿ ಎಂದು ಮನವಿ ಮಾಡಿಕೊಂಡರು.