ತಮಿಳುನಾಡಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್….! ಖುಷ್ಬು ಎಲ್ಲಿಂದ ಕಣಕ್ಕಿಳಿತಾರೆ ಗೊತ್ತಾ…?!

ತಮಿಳುನಾಡು ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ತಮಿಳುನಾಡಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬು ಸ್ಥಾನ ಪಡೆದಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿಗೆ ಶಕ್ತಿ ಹೆಚ್ಚಿಸುವ ಹಲವು ಮುಖಗಳು ಸೇರ್ಪಡೆಗೊಂಡಿದ್ದು ಈ ಪೈಕಿ ಖುಷ್ಬು ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ಒಬ್ಬರು. ಈ ಪೈಕಿ ಖುಷ್ಬು ಬಿಜೆಪಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಅಧಿಕೃತವಾಗಿ ಟಿಕೇಟ್ ಪಡೆದುಕೊಂಡಿದ್ದಾರೆ.

ಖುಷ್ಬು ತಮಿಳುನಾಡಿನ ರಾಜಧಾನಿ ಚೈನೈನ ತೌಸಂಡ್ಸ್ ಲೈಟ್ಸ್ ಕ್ಷೇತ್ರದಿಂದ  ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಖಷ್ಬು ಎದುರು ಡಿಎಂಕೆಯ ಅಭ್ಯರ್ಥಿಯಾಗಿ ಡಾ.ಎಳಿಲನ್ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಇದುವರೆಗೂ ಅತಿ ಹೆಚ್ಚು ಭಾರಿ ಗೆದ್ದ ಖ್ಯಾತಿ ಡಿಎಂಕೆಗಿದೆ.

 ಈ ಕ್ಷೇತ್ರಕ್ಕೆ ಇದುವರೆಗೂ ನಡೆದಿರುವ 15  ವಿಧಾನಸಭಾ ಚುನಾವಣೆಗಳಲ್ಲಿ  ಏಳು ಬಾರಿ ಡಿಎಂಕೆ ಅಭ್ಯರ್ಥಿ ಗೆಲುವು ಸಾಧಿಸಿದ್ದರೇ, ನಾಲ್ಕು ಬಾರಿ ಎಐಡಿಎಂಕೆ ಹಾಗೂ ಒಂದು ಬಾರಿ ಪಕ್ಷೇತರ ಮತ್ತು ಒಂದು ಭಾರಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ.

ಕಳೆದ ವರ್ಷ ಕಾಂಗ್ರೆಸ್ ತ್ಯಜಿಸಿದ್ದ ಖುಷ್ಬುಸುಂದರ್ ಬಿಜೆಪಿ ಸೇರ್ಪಡೆಗೊಂಡಿದ್ದು, ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನವಿಲ್ಲ ಎಂದು ಖುಷ್ಬು ಆರೋಪಿಸಿದ್ದರು. ಇದೀಗ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ.

ತಮಿಳುನಾಡಿನಲ್ಲಿ ಮಾರ್ಚ್ 19 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯದಿನವಾಗಿದ್ದು, ಏಪ್ರಿಲ್ 6 ರಂದು ಮತದಾನ ಹಾಗೂ ಮೇ 2 ರಂದು ಮತ ಎಣಿಕೆ ನಡೆಯಲಿದೆ.

Comments are closed.