ಬೆಂಗಳೂರು : ರಾಜ್ಯ ಬಿಜೆಪಿ ಗೆ ಈಶ್ವರಪ್ಪ ಮಾತೇ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಈಶ್ವರಪ್ಪ (Ishwarappa statement) ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್ ಉಭಯ ಸದನಗಳಲ್ಲಿ ಪ್ರತಿಭಟನೆ ಆರಂಭಿಸಿದೆ. ಅಹೋರಾತ್ರಿ ಧರಣಿ ಕೂಡ ನಡೆಸುತ್ತಿದೆ. ಕಾಂಗ್ರೆಸ್ ಅಹೋರಾತ್ರಿ ಧರಣಿಯಿಂದ ಹಾಗೂ ಇದರಿಂದ ಉಂಟಾಗೋ ಡ್ಯಾಮೇಜ್ ತಡೆಯಲು ಬಿಜೆಪಿ ಕೂಡ ಹರಸಾಹಸ ನಡೆಸಿದೆ. ಇದೆಲ್ಲದರ ಮಧ್ಯೆ ರಾಜ್ಯ ಕಾಂಗ್ರೆಸ್ ಹೋರಾಟಕ್ಕೆ ಹೈಕಮಾಂಡ್ ಬೆಂಬಲವೂ ಸಿಕ್ಕಿದೆ ಎನ್ನಲಾಗಿದ್ದು ಇದು ಕೈಪಾಳಯದ ಉತ್ಸಾಹ ಇಮ್ಮಡಿಗೊಳಿಸಿದೆ.
ಸಚಿವ ಕೆ ಎಸ್ ಈಶ್ವರಪ್ಪ ರಾಷ್ಟ್ರಧ್ವಜ ಅಪಮಾನ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಕೈ ಪಡೆ ವಿಧಾನಸಭೆಯಲ್ಲಿ ಸಿದ್ಧರಾಮಯ್ಯ ಹಾಗೂ ವಿಧಾನಪರಿಷತ್ ನಲ್ಲಿ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಪ್ರತಿಭಟನೆ,ಹೋರಾಟ ಹಾಗೂ ಧರಣಿ ಆರಂಭಿಸಿದೆ. ಕೈಪಡೆಯ ಈ ಹೋರಾಟಕ್ಕೆ ಈಗ ಕಾಂಗ್ರೆಸ್ ಹೈಕಮಾಂಡ್ ಇದೀಗ ಎಂಟ್ರಿ ಕೊಟ್ಟಿದ್ದು,ಹೈಕಮಾಂಡ್ ನಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸ್ಪಷ್ಟ ಸೂಚನೆ ರವಾನೆಯಾಗಿದೆಯಂತೆ.
ಒಂದು ಒಳ್ಳೆಯ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಆರಂಭಿಸಿದ್ದೀರಿ. ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯೋದು ಬೇಡ. ಸದನದ ಒಳಗೂ ಹೊರಗೂ ಹೋರಾಟ ಮಾಡಿ ಎಂದಿದ್ದಾರಂತೆ. ಮಾತ್ರವಲ್ಲ ಈ ಪಂಚ ರಾಜ್ಯದ ಚುನಾವಣೆಯ ಹೊತ್ತಿನಲ್ಲಿ ಈಶ್ವರಪ್ಪ ವಿಚಾರ ರಾಷ್ಟ್ರಮಟ್ಟದಲ್ಲಿ ಮುನ್ನೆಲೆಗೆ ಬರಬೇಕು.
ದೇಶಾದ್ಯಂತ ಬಿಜೆಪಿ ಸಚಿವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂಬುದು ಗೊತ್ತಾಗಬೇಕು. ಪಕ್ಷದ ವತಿಯಿಂದಲೂ ರಾಜ್ಯದ್ಯಂತ ಹೋರಾಟ ಮಾಡಿ ಎಂದು ಸೂಚನೆ ನೀಡಿದ್ದಾರಂತೆ. ಸ್ವತಃ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ್ ಡಿ.ಕೆ.ಶಿವಕುಮಾರ್ ಹಾಗೂ ಸಿದ್ಧರಾಮಯ್ಯನವರ ಜೊತೆ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಅಹೋರಾತ್ರಿ ಧರಣಿ ಕೈ ಬಿಡದಂತೆಯೂ ಸೂಚನೆ ನೀಡಿದ್ದಾರಂತೆ.
ಈಶ್ವರಪ್ಪನವರ ಹೇಳಿಕೆಯನ್ನು ಈಗಾಗಲೇ ದೇಶದ್ರೋಹವೆಂದು ಬಣ್ಣಿಸಲು ಕಾಂಗ್ರೆಸ್ ಈಗಾಗಲೇ ಸಜ್ಜಾಗಿದ್ದು, ಅದಕ್ಕಾಗಿಯೇ ಸಿಎಂ, ಸ್ಪೀಕರ್ ಹಾಗೂ ಬಿಎಸ್ವೈ ಮನವೊಲಿಕೆಗೂ ಬಗ್ಗದೇ ಅಹೋರಾತ್ರಿ ಧರಣಿ ಮುಂದುವರೆಸಿದೆ. ಬಿಜೆಪಿ ವಿರುದ್ಧ ರಾಜಕೀಯ ಅಸ್ತ್ರವಾಗಿ ಈಶ್ವರಪ್ಪ ಹೇಳಿಕೆ ಬಳಸಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್ ಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೂಚನೆ ಮತ್ತಷ್ಟು ಹುಮ್ಮಸ್ಸು ತುಂಬಿದ್ದು ಈಶ್ವರಪ್ಪ ವಿರುದ್ಧ ಸದನದ ಹೊರಗೂ ಉಗ್ರ ಹೋರಾಟಕ್ಕೆ ಕಾಂಗ್ರೆಸ್ ಕಾರ್ಯಸೂಚಿ ಸಿದ್ಧಪಡಿಸಲು ಆರಂಭಿಸಿದೆ ಒಟ್ಟಿನಲ್ಲಿ ಚುನಾವಣೆ ಎದುರಿನಲ್ಲಿ ಈಶ್ವರಪ್ಪ ಪಕ್ಷಕ್ಕೆ ಮುಜುಗರ ತರೋ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ : ಪುನೀತ್ ರಾಜ್‍ಕುಮಾರ್ ಬಯೋಗ್ರಫಿ; ಆರ್ಡರ್ ಮಾಡುವುದು ಹೇಗೆ?
ಇದನ್ನೂ ಓದಿ : Online Fraud: ನಿಗೂಢ ರೀತಿಯಲ್ಲಿ ಆನ್‌ಲೈನ್‌ನಲ್ಲಿ 64 ಲಕ್ಷ ಕಳೆದುಕೊಂಡ ವ್ಯಕ್ತಿ
( minister KS Ishwarappa statement of traitor to the country, protest continue congress high command green signal)