ವಿರಾಜಪೇಟೆಗೆ ಎ.ಎಸ್.ಪೊನ್ನಣ್ಣ, ಮಡಿಕೇರಿಗೆ ಡಾ.ಮಂತರ್ ಗೌಡ, ಸುಳ್ಯಕ್ಕೆ ನಂದಕುಮಾರ್ ಕಾಂಗ್ರೆಸ್ ಅಭ್ಯರ್ಥಿ

ಮಡಿಕೇರಿ : ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ (Karnataka MLA Election 2023) ಹಾಗೂ ನೆರೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ (Congress candidates) ಅಭ್ಯರ್ಥಿಗಳ ಪಟ್ಟಿ ಬಹುತೇಕ (A.S. Ponnanna – Dr. Mantar Gowda – Nandakumar) ಅಂತಿಮವಾಗಿದೆ. ವಿರಾಜಪೇಟೆ ಕ್ಷೇತ್ರದಿಂದ ಎ.ಎಸ್.ಪೊನ್ನಣ್ಣ, ಮಡಿಕೇರಿಯಿಂದ ಡಾ.ಮಂತರ್‌ಗೌಡ ಹಾಗೂ ಸುಳ್ಯದಿಂದ ನಂದಕುಮಾರ್‌ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಖಚಿತ.

ಮಡಿಕೇರಿ ಕ್ಷೇತ್ರಕ್ಕೆ ಕೊಡಗಿನಲ್ಲಿ ಅಭಿವೃದ್ಧಿ ಚಿಂತಕ ಎಂಬ ಹೆಸರಿನಿಂದ ಖ್ಯಾತಿ ಹೊಂದಿರುವ ಡಾ. ಮಂತರ್ ಗೌಡ ಹೆಸರು ಅಂತಿಮವಾಗಿದೆ ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ಎಲ್ಲ ಸರ್ವೆಗಳಲ್ಲಿ ಮಂಥರ್ ಗೌಡ ಪರವಾದ ಪ್ರಬಲವಾದ ಅಲೆ ಕೊಡಗು ಜಿಲ್ಲೆಯಲ್ಲಿ ವ್ಯಕ್ತವಾಗಿರುವುದು ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆದಿದೆ. ಅಲ್ಲದೆ ಮಂತರ್ ಗೌಡ ತನ್ನ ಚಿಂತನೆಯಿಂದ ಕೊಡಗಿನ ಹೊರ ಪ್ರದೇಶದಲ್ಲೂ ತನ್ನ ಇಮೇಜ್ ಸೃಷ್ಟಿ ಮಾಡಿರುವುದು ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಬಹುತೇಕ ಅಭ್ಯರ್ಥಿಯಾಗುವುದು ಖಚಿತವಾಗಿದೆ.

ಇನ್ನು ಕಾಂಗ್ರೆಸ್ ಕಾನೂನು ವಿಭಾಗದ ಮುಖ್ಯಸ್ಥರಾಗಿರುವ ವಕೀಲರಾದ ಎಎಸ್ ಪೊನ್ನಣ್ಣ ಹೆಸರು ವಿರಾಜಪೇಟೆ ಕ್ಷೇತ್ರಕ್ಕೆ ಅಂತಿಮವಾಗಿದೆ ಎಂದು ಹೈಕಮಾಂಡ್ ಮೂಲಗಳಿಂದ ತಿಳಿದುಬಂದಿದೆ. ತನ್ನ ಟ್ರಸ್ಟಿನ ಮುಖಾಂತರ ಹಲವಾರು ಜನಪರ ಕಾರ್ಯಗಳನ್ನು ನಡೆಸಿರುವ ಪೊನ್ನನ್ನ ಅವರ ಹೆಸರು ಸರ್ವೆಯಲ್ಲೂ ಉತ್ತಮ ವಾಗಿ ಮೂಡಿ ಬಂದಿರುವ ಕಾರಣ ಈ ಹೆಸರು ಅಂತಿಮವಾಗಿದೆ ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.ಈ ಕ್ಷೇತ್ರದಲ್ಲಿ ಕೆಜಿ ಬೊಪ್ಪಯ್ಯ ಅಭ್ಯರ್ಥಿಯಾಗುವುದು ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ : Karnataka MLA Election 2023 : ಟಿಕೆಟ್‌ಗಾಗಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಪೈಪೋಟಿ

ಇದನ್ನೂ ಓದಿ : Karnataka MLA Election 2023 : ಪ್ರಜಾಕೀಯ ನಾಮನಿರ್ದೇಶನಕ್ಕೆ ಮಾರ್ಚ್ 24 ಕೊನೆಯ ದಿನ

ಇನ್ನು ಸುಳ್ಯ ಕ್ಷೇತ್ರಕ್ಕೆ ನಂದಕುಮಾರ್ ಅವರ ಹೆಸರು ಅಂತಿಮವಾಗಿದೆ ಎಂದು ತಿಳಿದುಬಂದಿದೆ. ಕೆಪಿಸಿಸಿ ಸಂಯೋಜಕರಾದ ನಂದಕುಮಾರ್ ಸುಳ್ಯದಲ್ಲಿ ಜನಪರ ಕೆಲಸಗಳ ಮೂಲಕ ಜನರ ಗಮನವನ್ನು ಸೆಳೆದಿದ್ದರು. ಅಲ್ಲದೆ ಬಹುತೇಕ ಸರ್ವೇಗಳಲ್ಲಿ ಅವರ ಹೆಸರು ಅಂತಿಮವಾಗಿದೆ ಎಂದು ತಿಳಿದುಬಂದಿದೆ. ನಂದಕುಮಾರ್ ಇಡೀ ಸುಳ್ಯ ಕ್ಷೇತ್ರದಲ್ಲಿ ಓಡಾಡಿ ಬಹಳಷ್ಟು ಗಮನ ಸೆಳೆದಿದ್ದರು.ಈ ಕ್ಷೇತ್ರದಲ್ಲಿ ಸಚಿವ ಅಂಗಾರ ಅಥವಾ ಬೇರೆ ಅಭ್ಯರ್ಥಿ ಆಗ ಬಹುದು ಎಂಬುದು ಬಿಜೆಪಿಯ ಮೂಲಗಳಿಂದ ತಿಳಿದು ಬಂದಿದೆ.

Karnataka MLA Election 2023 : A.S. Ponnanna for Virajpet, Dr. Mantar Gowda for Madikeri, Nandakumar for Sullya is the Congress candidates

Comments are closed.