ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ 29 ಮಂದಿಯ ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಿದೆ. ಹಾಲಿ ಸಚಿವರ ಜೊತೆಗೆ ಹೊಸ ಶಾಸಕರಿಗೂ ಮಣೆ ಹಾಕಲಾಗಿದೆ. ಆದರೆ ಆರು ಮಂದಿ ಹಿರಿಯರಿಗೆ ಸಂಪುಟದಿಂದ ಕೋಕ್ ನೀಡಲಾಗಿದೆ.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ 29 ಮಂದಿ ಶಾಸಕರು ನೂತನ ಸಚಿವರಾಗಿ ಕೆ.ಎಸ್.ಈಶ್ವರಪ್ಪ ( ಶಿವಮೊಗ್ಗ), ಆರ್.ಅಶೋಕ್ (ಪದ್ಮನಾಭ ನಗರ ), ಡಾ.ಸಿ.ಎನ್.ಅಶ್ವತ್ಥ ನಾರಾಯಣ (ಮಲ್ಲೇಶ್ವರಂ), ಉಮೇಶ್ ಕತ್ತಿ ( ಹುಕ್ಕೇರಿ ), ಎಸ್.ಟಿ.ಸೋಮಶೇಖರ್ (ಯಶವಂತಪುರ ), ಕೋಟಾ ಶ್ರೀನಿವಾಸ ಪೂಜಾರಿ ( ಎಂಎಲ್‍ಸಿ ಉಡುಪಿ- ದಕ್ಷಿಣ ಕನ್ನಡ), ಪ್ರಭು ಚೌವ್ಹಾಣ್ (ಔರಾದ್), ವಿ. ಸೋಮಣ್ಣ ( ಗೋವಿಂದ ರಾಜನಗರ), ಎಸ್.ಅಂಗಾರ (ಸುಳ್ಯ), ಆನಂದ್ ಸಿಂಗ್ (ಹೊಸಪೇಟೆ), ಸಿ.ಸಿ.ಪಾಟೀಲ್ (ನರಗುಂದ), ಬಿ.ಸಿ.ನಾಗೇಶ್ (ತಿಪಟೂರು), ಬಿ.ಶ್ರೀ ರಾಮುಲು (ಮೊಳಕಾಲ್ಮೂರು), ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಬೈರತಿ ಬಸವರಾಜ ( ಕೆ ಆರ್ ಪುರಂ ) ಮುರುಗೇಶ್ ನಿರಾಣಿ (ಬೀಳಗಿ ) ಶಿವರಾಂ ಹೆಬ್ಬಾರ್ (ಯಲ್ಲಾಪುರ ), ಶಶಿಕಲಾ ಜೊಲ್ಲೆ (ನಿಪ್ಪಾಣಿ), ಕೆಸಿ ನಾರಾಯಣಗೌಡ (ಕೆಆರ್ ಪೇಟೆ), ಸುನೀಲ್ ಕುಮಾರ್ (ಕಾರ್ಕಳ), ಅರಗ ಜ್ಞಾನೇಂದ್ರ (ತೀರ್ಥಹಳ್ಳಿ), ಗೋವಿಂದ ಕಾರಜೋಳ (ಮುಧೋಳ), ಮುನಿರತ್ನ (ಆರ್ ಆರ್ ನಗರ), ಎಂ.ಟಿ.ಬಿ ನಾಗರಾಜ್ ( ಎಂಎಲ್‍ಸಿ ಹೊಸಕೋಟೆ), ಗೋಪಾಲಯ್ಯ ( ಮಹಾಲಕ್ಷ್ಮಿ ಲೇಔಟ್ ), ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ), ಹಾಲಪ್ಪ ಆಚಾರ್ (ಯಲ್ಬುರ್ಗ), ಶಂಕರ್ ಪಾಟೀಲ್ ಮುನೇನಕೊಪ್ಪ ( ನವಲುಗುಂದ) ಅವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಒಂದೆಡೆ ನೂತನ ಸಚಿವರ ಪದಗ್ರಹಣ ಸಮಾರಂಭ ನಡೆಯುತ್ತಿದ್ರೆ, ಇನ್ನೊಂದೆಡೆಯಲ್ಲಿ ಸಚಿವ ಸ್ಥಾನ ಆಕಾಂಕ್ಷಿತರ ಬೆಂಬಲಿಗರು ಪ್ರತಿಭಟನೆಯನ್ನು ನಡೆಸಿದ್ರು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕೊನೆಯ ಹಂತದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು, ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಶಾಸಕ ನೆಹರೂ ಓಲೆಕಾರ್ ಹಾಗೂ ರಾಜುಗೌಡ ಬೆಂಬಲಿಗರೂ ಕೂಡ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಹಿರಿಯ ಸಚಿವರಾಗಿದ್ದಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಶ್ರೀಮಂತ ಪಾಟೀಲ್, ಆರ್.ಶಂಕರ್ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ. ಅಲ್ಲದೇ ಯಡಿಯೂರಪ್ಪ ವಿರುದ್ದ ತೊಡೆತಟ್ಟಿದ್ದ ಯೋಗೀಶ್ವರ್, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಧಕ್ಕಿಲ್ಲ.