CM Ibrahim persuasion : ಆಪ್ತನ ಬಂಡಾಯಕ್ಕೆ‌ ಬೆದರಿದ ಸಿದ್ದು: ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಮೊರೆ ಹೋದ ಸಿದ್ಧರಾಮಯ್ಯ

ಬೆಂಗಳೂರು : ಸಾಮಾನ್ಯವಾಗಿ ಯಾವ ಬಂಡಾಯಕ್ಕೂ ಹೆದರದ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಸಿ.ಎಂ.ಇಬ್ರಾಹಿಂ ಬಂಡಾಯಕ್ಕೆ (CM Ibrahim persuasion) ಹಾಗೂ ಮುನಿಸಿಗೆ ಹೆದರಿದ್ದು,ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಅರ್ಷದ್ ರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಇಬ್ರಾಹಿಂ ಮುನಿಸು ತೋರಿ ಪಕ್ಷ ಬಿಡುವ ಮಾತನಾಡುತ್ತಿದ್ದಂತೆ ಕಂಗಲಾಗಿರುವ ಸಿದ್ಧರಾಮಯ್ಯ ಸಂಧಾನ‌ ಮಾತುಕತೆಗೆ ಮಧ್ಯಸ್ತಿಕೆಗೆ ವಹಿಸುವಂಗೆ ರಿಜ್ವಾನ್‌ಮೊರೆ ಹೋಗಿದ್ದು ತುರ್ತಾಗಿ ರಿಜ್ವಾನ್ ಮನೆಗೆ ತೆರಳಿದ್ದಾರೆ.

ರಿಜ್ವಾನ್ ಅರ್ಷದ್ ಮನೆಗೆ ತೆರಳಿ ಗಂಟೆಗಳ ಕಾಲ ಮಾತುಕತೆ ನಡೆಸಿರುವ ಸಿದ್ಧರಾಮಯ್ಯ ಸಿ.ಎಂ.ಇಬ್ರಾಹಿಂರನ್ನು ಮನವೊಲಿಸಲು ಹಾಗೂ ಪಕ್ಷ ಬಿಟ್ಟು ಹೋಗದಂತೆ ಕನ್ವಿನ್ಸ್ ಮಾಡುವಂತೆ ರಿಜ್ವಾನ್ ಗೆ ಜವಾಬ್ದಾರಿ ವಹಿಸಿದ್ದಾರೆ ಎನ್ನಲಾಗಿದೆ. ಸಿದ್ಧರಾಮಯ್ಯನವರಿಗೆ ಅಲ್ಪಸಂಖ್ಯಾತರನ್ನು ಒಲೈಸುತ್ತಾರೆ ಎಂಬ ಮಾತು ಯಾವಾಗಲೂ ಇದೆ. ಮಾತಿಗೆ ತಕ್ಕಂತೆ ಸಿದ್ಧರಾಮಯ್ಯನವರು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ನಾಯಕರಾಗಿಯೇ ಇಮೇಜ್ ಉಳಿಸಿಕೊಂಡು ಬಂದಿದ್ದಾರೆ.

ಹೀಗಿರುವಾಗ ಸಿ.ಎಂ.ಇಬ್ರಾಹಿಂ ಅಧಿಕಾರ ಸಿಗದ ಕಾರಣಕ್ಕೆ ಮುನಿಸಿಕೊಂಡು ಪಕ್ಷ ಬಿಟ್ಟರೇ ಅದರಿಂದ ಸಿದ್ದರಾಮಯ್ಯನವರ ಅಲ್ಪಸಂಖ್ಯಾತ ನಾಯಕ ಎಂಬ ಇಮೇಜ್ ಗೆ ಧಕ್ಕೆಯಾಗಲಿದೆ. ಚುನಾವಣೆ ಎದುರಿನಲ್ಲಿ ಇದು ಕಾಂಗ್ರೆಸ್ ಓಟ ಬ್ಯಾಂಕ್ ಗೆ ಬ್ರೇಕ್ ಹಾಕೋ ಸಾಧ್ಯತೆ ಇದೆ. ಈ ಎಲ್ಲ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ಆಗುವ ನಷ್ಟದ ಲೆಕ್ಕಾಚಾರ ಹಾಕಿರೋ ಸಿದ್ದು ಅಲ್ಪಸಂಖ್ಯಾತ ನಾಯಕ ಇಬ್ರಾಹಿಂ ಮನವೊಲಿಕೆಗೆ ಅಲ್ಪಸಂಖ್ಯಾತ ನಾಯಕನನ್ನೇ ಮುಂದಿಟ್ಟು ರಣತಂತ್ರ ಹೂಡಿದ್ದಾರೆ.

ಸಿದ್ಧರಾಮಯ್ಯನವರ ಭೇಟಿ ಬಳಿಕ ಮಾತನಾಡಿದ ರಿಜ್ವಾನ್ ಅರ್ಷದ್, ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ಆಗಿ ಇಬ್ರಾಹಿಂ ಪಕ್ಷದಿಂದ ಹೊರಬರುವ ಮಾತನ್ನಾಡಿದ್ದಾರೆ. ಆದರೆ ಈಗ ಅಧಿಕಾರಕ್ಕಾಗಿ ಹೋರಾಟ ಮಾಡುವ ಸಮಯವಲ್ಲ.ಸೈದ್ಧಾಂತಿಕವಾಗಿ ಹೋರಾಟ ಮಾಡಬೇಕಿದೆ.ಇಬ್ರಾಹಿಂ ತಾಳ್ಮೆ ಕಳೆದು ಕೊಳ್ಳುವುದು ಬೇಡ. ಪದೇ ಪದೇ ಪಕ್ಷದ ವಿರುದ್ಧ ಮಾತನಾಡುವುದು ತಪ್ಪುಪಕ್ಷ ಮತ್ತು ಹೈಕಮಾಂಡ್ ಗೆ ತಪ್ಪು ಸಂದೇಶ ರವಾನೆ ಆಗುತ್ತೆ ನಾವು ನೀವು ಸೇರಿ ಬಿಜೆಪಿ ವಿರುದ್ಧ ಹೋರಾಟ ಮಾಡೋಣ ಎಂದಿದ್ದಾರೆ. ಮಾತ್ರವಲ್ಲ ಅಲ್ಪಸಂಖ್ಯಾತ ನಾಯಕರು ಗೇಣಿದಾರರು ಎಂಬ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಿಜ್ವಾನ್, ನಾವು ಯುವಕರಾದ್ರು ನಮಗೆ ಅವಕಾಶಗಳು ಕೊಟ್ಟಿದ್ದಾರೆ. ಕಾಂಗ್ರೆಸ್ ಆ ರೀತಿ ನಡೆಸಿಕೊಂಡಿಲ್ಲ. ಇಬ್ರಾಹಿಂ ನೋವಿನಲ್ಲಿ ಆಡಿದ ಮಾತಿಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ. ನಾನು ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.

ಹೀಗಾಗಿ ಸಿದ್ಧರಾಮಯ್ಯ ಪರವಾಗಿ ಸಿ.ಎಂ.ಇಬ್ರಾಹಿಂ ಬಳಿ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಮಧ್ಯಸ್ತಿಕೆ ಮನವೊಲಿಕೆ ಮಾತುಕತೆ ನಡೆಸೋದು ಬಹುತೇಕ‌ ಖಚಿತವಾಗಿದೆ. ಇನ್ನು ರಿಜ್ವಾನ್ ಮನೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಈ ವಿಚಾರಕ್ಕೆ ನಾನೇನೂ ಹೇಳುವುದಿಲ್ಲ. ರಿಜ್ವಾನ್ ಊಟಕ್ಕೆ ಕರೆದಿದ್ದ, ಬಂದಿದ್ದೆ. ಈ ಹಿಂದೆಯೂ ಪಕ್ಷ ಬಿಡ್ತಿನಿ ಅಂದಿದ್ದ ಈಗಲೂ ಹೇಳ್ತಿದ್ದಾನೆ. ನಾನು ಮಾತಾಡ್ತಿನಿ ಎಂದಿದ್ದಾರೆ.

ಇದನ್ನೂ ಓದಿ : ಸಿದ್ಧರಾಮಯ್ಯರನ್ನು ವಲಸಿಗರಾಮಯ್ಯ ಎಂದ ಬಿಜೆಪಿ : ಮತ್ತೆ ಶುರುವಾಯ್ತು ಟ್ವೀಟ್ ವಾರ್

ಇದನ್ನೂ ಓದಿ : ವಿಧಾನ ಪರಿಷತ್ ವಿಪಕ್ಷ ಸ್ಥಾನ ನೀಡದ್ದಕ್ಕೆ ಸಿ.ಎಂ.ಇ್ರಬಾಹಿಂ ಮುನಿಸು : ಕಾಂಗ್ರೆಸ್‌ ಮೊದಲ ವಿಕೆಟ್‌ ಪತನ

( MLC Rizwan Support to EX CM Siddaramaiah for senior congress leader CM Ibrahim persuasion )

Comments are closed.