ಬೆಂಗಳೂರು : ಬಿಜೆಪಿ ಸೇರಿದಂತೆ ತಮ್ಮ ರಾಜಕೀಯ ವಿರೋಧಿಗಳನ್ನು ಟೀಕಿಸಲು ಸಮರ್ಥವಾಗಿ ಟ್ವಿಟರ್ ಬಳಸುತ್ತಿದ್ದ ಕಾಂಗ್ರೆಸ್ ಗೆ ನ್ಯಾಯಾಲಯ ಶಾಕ್ ನೀಡಿದ್ದು, ಸಿನಿಮಾ ಹಾಡನ್ನು ಅಕ್ರಮವಾಗಿ ಬಳಸಿಕೊಂಡ ಕಾರಣಕ್ಕೆ ದಾಖಲಾದ ಪ್ರಕರಣದ ವಿಚಾರಣೆ ವೇಳೆ ಕರ್ನಾಟಕ ಕಾಂಗ್ರೆಸ್ ನ ಟ್ವಿಟರ್ ಅಕೌಂಟ್ ನ್ನು (Congress Twitter Account Ban) ತಾತ್ಕಾಲಿಕವಾಗಿ ನಿರ್ಭಂದಿಸುವಂತೆ ಬೆಂಗಳೂರು ನ್ಯಾಯಾಲಯ ಆದೇಶಿಸಿದೆ.
ಕೆಜಿಎಫ್ ಸಿನಿಮಾದ ಸುಲ್ತಾನಾ ಹಾಡನ್ನು ಅಕ್ರಮವಾಗಿ ಬಳಸಿಕೊಂಡ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಭಾರತ ಜೋಡೋ ಯಾತ್ರೆಯ ಆಯೋಜಕರು ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಎಂಅರ್ ಟಿ ಸಂಸ್ಥೆ ಕಾನೂನು ಸಮರಕ್ಕೆ ಮುಂದಾಗಿತ್ತು. ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಹಾಗೂ ಭಾರತ ಜೋಡೋ ಯಾತ್ರೆಯ ಟ್ವಿಟರ್ ಅಕೌಂಟ್ ನ್ನು ತಾತ್ಕಾಲಿಕವಾಗಿ ನಿರ್ಭಂದಿಸುವಂತೆ ನ್ಯಾಯಾಲಯವು ಟ್ವಿಟರ್ ಗೆ ಸೂಚಿಸಿದೆ.
ಇತ್ತೀಚಿಗೆ ಭಾರತ ಜೋಡೋ ಯಾತ್ರೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಂಚರಿಸಿತ್ತು. ಈ ವೇಳೆ ರಾಹುಲ್ ಗಾಂಧಿಯನ್ನು ವೈಭವಿಕರಿಸಲು ಕೆಜಿಎಫ್-2 ಸಿನಿಮಾದ ಸುಲ್ತಾನಾ ಹಾಡನ್ನು ಬಳಸಿ ವಿಡಿಯೋಗಳನ್ನು ಎಡಿಟ್ ಮಾಡಲಾಗಿತ್ತು. ಈ ಕಾರಣಕ್ಕಾಗಿ ಕಾಂಗ್ರೆಸ್ ಹಾಗೂ ಭಾರತ ಜೋಡೋ ಆಯೋಜಕರಾದ ಜೈರಾಂ ರಮೇಶ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಇನ್ ಚಾರ್ಜ್ ಸುಪ್ರಿಯಾ ವಿರುದ್ಧ ಕೆಜಿಎಫ್ ಮ್ಯೂಸಿಕ್ ರೈಟ್ಸ್ ಹೊಂದಿರೋ ಎಂಅರ್ ಟಿ ಸಂಸ್ಥೆ ಪೋರ್ಜರಿ ಪ್ರಕರಣ ದಾಖಲಿಸಿತ್ತು
ಬೆಂಗಳೂರಿನ ಯಶ್ವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಬೆಂಗಳೂರಿನ ವಾಣಿಜ್ಯ ಕೋರ್ಟ್ ನಲ್ಲಿ ವಿಚಾರಣೆಗೆ ಬಂದಿದೆ. ಈ ವೇಳೆ ದೂರುದಾರರು ನೀಡಿದ ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಾಲಯ ನವೆಂಬರ್ 21 ರವರೆಗೆ ಕಾಂಗ್ರೆಸ್ ಟ್ವಿಟರ್ ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಈಗಾಗಲೇ ಹಲವು ಭಾರಿ ಟೀಕೆಗೆ ಗುರಿಯಾಗಿತ್ತು. ಈಗ ಟ್ವಿಟರ್ ಅಕೌಂಟ್ ನಿರ್ಬಂಧಕ್ಕೊಳಗಾಗಿರೋದು ತೀವ್ರ ಟೀಕೆಗೆ ಗುರಿಯಾಗಿದ್ದು, ಕಾಪಿ ರೈಟ್ ವಿಚಾರಕ್ಕೆ ಟ್ವಿಟರ್ ಅಕೌಂಟ್ ಬ್ಲಾಕ್ ಆಗಿರೋದಿಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕಮೆಂಟ್ ಹರಿದಾಡುತ್ತಿದೆ. ಟ್ವಿಟರ್ ಅಕೌಂಟ್ ಹ್ಯಾಂಡಲ್ ಮಾಡೋಕೆ ಆಗದೇ ಇರೋ ಕೈಗೆ ದೇಶ, ರಾಜ್ಯ ಕೊಟ್ಟರೇನು ಗತಿ ಎಂದು ಬಿಜೆಪಿಗರು ಕಮೆಂಟ್ ಮಾಡ್ತಿದ್ದಾರೆ.
ಇದನ್ನೂ ಓದಿ : Bank Holiday : ಬ್ಯಾಂಕ್ ಕೆಲಸವಿದ್ದರೆ ಇವತ್ತೆ ಮುಗಿಸಿಕೊಳ್ಳಿ, ನಾಳೆಯಿಂದ 4 ದಿನ ಬ್ಯಾಂಕ್ ರಜೆ
ಇದನ್ನೂ ಓದಿ : Anushka Shetty: ಬರ್ತ್‍ಡೇ ದಿನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ..
KGF Effect Congress Twitter Account Ban