Lunar Eclipse: ನಭೋಮಂಡಲದಲ್ಲಿಂದು ರಕ್ತ ಚಂದ್ರ ಗ್ರಹಣದ ಚಮತ್ಕಾರ

ಬೆಂಗಳೂರು  : Lunar Eclipse 2022ರ ವರ್ಷದ ನಭೋಮಂಡಲದ ಕೊನೆಯ ಚಮತ್ಕಾರಕ್ಕೆ ಕ್ಷಣಗಣನೆ ಶುರುವಾಗಿದೆ. ನಭೋಮಂಡಲ್ಲಿ ಇಂದು ಚಂದ್ರಗ್ರಹಣದ ನಡೆಯಲಿದೆ. ಹೀಗಾಗಿ ಚಂದ್ರಗ್ರಹಣದ ವಿಚಾರವಾಗಿ ಸಾಮಾನ್ಯರಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಲೆಕ್ಕಾಚಾರಗಳು ನಡೀತಿವೆ.

ರಕ್ತ ಚಂದ್ರ ಗ್ರಹಣ :  ಎರಡು ವಾರದ ಹಿಂದಷ್ಟೇ ಅಂದ್ರೆ ದೀಪಾವಳಿ ಅವಮಾಸ್ಯೆಯಂದೇ ಸೂರ್ಯಗ್ರಹಣ ಗೋಚರವಾಗಿತ್ತು. ಇಂದು ಚಂದ್ರನಿಗೆ ಗ್ರಹಣ ತಟ್ಟಲಿದೆ. ಶಕ್ತಿಶಾಲಿ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಅಡ್ಡ ಬರಲಿದ್ದು, ಈ ಹೊತ್ತಲ್ಲಿ ಚಂದ್ರ ಮರೆಯಾಗಲಿದ್ದಾನೆ. ಇಂದು ಸಂಭವಿಸಲಿರೋ ಚಂದ್ರಗ್ರಹಣವನ್ನ ರಾಹುಗ್ರಸ್ತ ಚಂದ್ರ ಗ್ರಹಣ ಅಥವಾ ರಕ್ತ ಚಂದ್ರ ಗ್ರಹಣ ಅಂತಲೂ ಕರೆಯಲಾಗುತ್ತೆ. ಭೂಮಿಯ ನೆರಳು ಚಂದಿರನ ಮೇಳೆ ಬೀಳಲಿದ್ದು, ಇದರ ಪ್ರಭಾವದಿಂದ ಶಶಿಯ ಬಣ್ಣ ಕೆಂಪಾಗಲಿದೆ. ಗ್ರಹಣ ಹಿನ್ನೆಲೆ ಇಂದು ರಾಜ್ಯದ ವಿವಿಧೆಡೆ ಅನೇಕ ದೇಗುಲಗಳ ಬಾಗಿಲು ಮುಚ್ಚಿರಲಿದ್ದು ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಗ್ರಹಣದ ಸಮಯ :  ಚಂದ್ರಗ್ರಹಣ ಮಧ್ಯಾಹ್ನ 2 ಗಂಟೆ 37 ನಿಮಿಷಕ್ಕೆ ಆರಂಭವಾಗಲಿದೆ. ಸಂಜೆ 4 ಗಂಟೆ 28 ನಿಮಿಷಕ್ಕೆ ಗ್ರಹಣ ಮಧ್ಯಕಾಲ ತಲುಪಲಿದ್ದು, ಸಂಜೆ 6 ಗಂಟೆ 17 ನಿಮಿಷ ಚಂದ್ರಗ್ರಹಣ ಅಂತ್ಯವಾಗಲಿದೆ.

ಎಲ್ಲೆಲ್ಲಿ ಗೋಚರವಾಗುತ್ತೆ ಗ್ರಹಣ : ಇದು ಸಂಪೂರ್ಣ ಚಂದ್ರಗ್ರಹಣವಾಗಿದೆ. ದೇಶದ ಹಲವು ಪ್ರದೇಶಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಖಗೋಳಶಾಸ್ತ್ರಜ್ಞರ ಪ್ರಕಾರ, 2022 ರ ಸೂರ್ಯಗ್ರಹಣದ ನಂತರ ಹದಿನೈದು ದಿನಗಳ ನಂತರ ನಡೆಯುತ್ತಿರುವ ಚಂದ್ರಗ್ರಹಣ ನವೆಂಬರ್ 8 ರಂದು ದೇಶ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಸಂಪೂರ್ಣ ಚಂದ್ರಗ್ರಹಣವಾಗಿ ಗೋಚರಿಸುತ್ತದೆ. ಕರ್ನಾಟಕದಲ್ಲಿ ಪಾರ್ಶ್ವ ಚಂದ್ರಗ್ರಹಣ ಗೋಚರ ಆಗಲಿದ್ದು, ಇದೇ ಹೊತ್ತಲ್ಲಿ ಬಹುತೇಕ ದೇವಾಲಯಗಳು ಬಂದ್​​​​ ಆಗಲಿವೆ.

ಮಹಾಭಾರತಕ್ಕಿದೆ ಈ ಗ್ರಹಣದ ನಂಟು : 2022 ರ ಅಕ್ಟೋಬರ್ 25 ರಂದು ಸಂಭವಿಸಿದ ಸೂರ್ಯಗ್ರಹಣದ ನಂತರ, 15 ದಿನಗಳ ಮಧ್ಯಂತರದಲ್ಲಿ, ಚಂದ್ರಗ್ರಹಣ ನಾಳೆ ನಡೆಯುತ್ತಿದೆ. ಇದಕ್ಕೂ ಮೊದಲು ಒಂದೇ ತಿಂಗಳ ಅಂತರದಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣವೂ ಮಹಾಭಾರತದ ಕುರುಕ್ಷೇತ್ರದ ಯುದ್ಧ ಕಾಲದಲ್ಲಿ ಸಂಭವಿಸಿತ್ತು ಎಂದು ಹೇಳಲಾಗುತ್ತಿದೆ. ಮಹಾಭಾರತ ಅವಧಿಯ ನಂತರ ಇದೇ ಮೊದಲು ಈ ಚಂದ್ರ ಗ್ರಹಣ ಸಂಭವಿಸುತ್ತಿದೆ. ಈ ಚಂದ್ರ ಗ್ರಹಣದ ಸೂತಕ ಅವಧಿಯು ನಾಳೆ ಅಂದ್ರೆ ಮಂಗಳವಾರ ಬೆಳಗ್ಗೆ 9.21ಕ್ಕೆ ಆರಂಭವಾಗಿ ಸಂಜೆ 6.18ಕ್ಕೆ ಮುಕ್ತಾಯವಾಗುತ್ತದೆ.

​ಚಂದ್ರ ಗ್ರಹಣದ ದುಷ್ಪರಿಣಾಮ: ಈ ಬಾರಿಯ ಚಂದ್ರಗ್ರಹಣದಿಂದ ಗುಡುಗು, ಭೂಕಂಪ ಅಥವಾ ಭೂಕುಸಿತದ ಸಾಧ್ಯತೆಯ ನಡುವೆ, ಘಟನೆಗಳು ಮತ್ತು ಅಪಘಾತಗಳು ಹೆಚ್ಚಾಗಲಿದ್ದು, ಇದರಿಂದಾಗಿ ದೇಶದಲ್ಲಿ ಉದ್ವಿಗ್ನತೆ ಮತ್ತು ಭಯದ ವಾತಾವರಣ ಉಂಟಾಗುವುದು ಎನ್ನುವ ನಂಬಿಕೆಯಿದೆ. ದೇಶದಲ್ಲಿ ಕೈಗಾರಿಕಾ ಕೆಲಸಗಳ ಕುಸಿತದಿಂದಾಗಿ, ಉತ್ಪಾದನೆಯು ಪರಿಣಾಮ ಬೀರುತ್ತದೆ, ಇದರಿಂದಾಗಿ ಮುಂಬರುವ ದಿನಗಳಲ್ಲಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Congress Twitter Account Ban : ಕೆಜಿಎಫ್ ಎಫೆಕ್ಟ್: ಕಾಂಗ್ರೆಸ್ ಟ್ವಿಟರ್ ಅಕೌಂಟ್ ಬ್ಯಾನ್

ಇದನ್ನೂ ಓದಿ : Anushka Shetty: ಬರ್ತ್‍ಡೇ ದಿನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ..

Lunar Eclipse Spectacle of blood moon eclipse in the nebula

Comments are closed.