ಸೋಮವಾರ, ಏಪ್ರಿಲ್ 28, 2025
HomeBreakingಕೊಡಗು ಕಾಂಗ್ರೆಸ್ ಗೆ ಯಾರು ನೂತನ ಸಾರಥಿ ? ಮುಂಚೂಣಿಯಲ್ಲಿದೆ ಹರೀಶ್, ಸರಿತಾ, ಧರ್ಮಜ, ರಮಾನಾಥ್...

ಕೊಡಗು ಕಾಂಗ್ರೆಸ್ ಗೆ ಯಾರು ನೂತನ ಸಾರಥಿ ? ಮುಂಚೂಣಿಯಲ್ಲಿದೆ ಹರೀಶ್, ಸರಿತಾ, ಧರ್ಮಜ, ರಮಾನಾಥ್ ಹೆಸರು

- Advertisement -

ಮಡಿಕೇರಿ : ಕಾಫಿನಾಡನ ಕಾಂಗ್ರೆಸ್ ಪಕ್ಷಕ್ಕೆ ನೂತನ ಸಾರಥಿ ಯಾರಾಗ್ತಾರೆ ಅನ್ನೋ ಚರ್ಚೆ ಜೋರಾಗಿದೆ. ನಗರಸಭೆಯ ಚುನಾವಣೆಯ ಬೆನ್ನಲ್ಲೇ ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ ಕುಮಾರ್ ರಾಜೀನಾಮೆ ಸಲ್ಲಿಸಿದ್ದು, ಕೆಪಿಸಿಸಿ ಹೊಸ ಅಧ್ಯಕ್ಷರ ಹುಡುಕಾಟ ಆರಂಭಿಸಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ನಡುವಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಹರೀಶ್ ಬೋಪ್ಪಣ್ಣ, ಸರಿತಾ, ಧರ್ಮಜ ಹಾಗೂ ರಮಾನಾಥ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

ಕಳೆದ ಕೆಲ ವರ್ಷಗಳಿಂದ ಕೊಡಗು ಜಿಲ್ಲಾ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಲ್ಲ ಅನ್ನೋ ಬಟಾಬಯಲಾಗಿದೆ. ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಬೇಕೆಂದು ಹಲವರು ರಾಜ್ಯ ನಾಯಕರಿಗೆ ಮನವಿಯನ್ನು ಮಾಡಿದ್ದಾರೆ. ಜೊತೆಗೆ ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಕೈ ಪಾಳಯ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಜೊತೆಗೆ ಕಾರ್ಯಕರ್ತರು ಹಲವು ಸಭೆಗಳಲ್ಲಿಯೂ ಜಿಲ್ಲಾಧ್ಯಕ್ಷರ ವಿರುದ್ದ ಬಹಿರಂಗವಾಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈ ನಡುವಲ್ಲೇ ಜಿಲ್ಲಾಧ್ಯಕ್ಷರು ಕೆಪಿಸಿಸಿ ಅಧ್ಯಕ್ಷರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಜಿಲ್ಲಾಧ್ಯಕ್ಷರ ಹುದ್ದೆ ತೆರವಾಗಿದೆ ಅನ್ನೋ ಮಾತು ಹರಿದಾಡಿದ ಬೆನ್ನಲ್ಲೇ ಹಲವರು ಕಾಂಗ್ರೆಸ್ ಚುಕ್ಕಾಣಿ ಹಿಡಿಯಲು ತೆರೆ ಮರೆಯಲ್ಲಿಯೇ ಕಸರತ್ತು ಆರಂಭಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು ಕೂಡ ಜಿಲ್ಲಾಧ್ಯಕ್ಷ ಹುದ್ದೆಗೆ ಯಾರು ಏರ ಬಹುದು ಅನ್ನೋ ಲೆಕ್ಕಾಚಾರದಲ್ಲಿಯೂ ತೊಡಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಲ ನಾಯಕರ ಪ್ರಕಾರ ಹರೀಶ್ ಬೋಪಣ್ಣ ಹೆಸರು ಬಲವಾಗಿಯೇ ಕೇಳಿಬರುತ್ತಿದೆ. ರಾಜ್ಯ ಸರಕಾರದ ಹಲವು ಯೋಜನೆಗಳನ್ನು ಕೊಡಗಿಗೆ ತರುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಪಕ್ಷ ಸಂಘಟನೆಯ ನಿಟ್ಟಿನಲ್ಲಿಯೂ ಸರಿಯಾದ ಅಭ್ಯರ್ಥಿ ಅನ್ನೋದು ಕಾರ್ಯಕರ್ತರ ಅಭಿಪ್ರಾಯ.

ಜಿಲ್ಲಾ ಪಂಚಾಯತ್ ಸದಸ್ಯರಾದ ಸರಿತಾ ಪೂಣಚ್ಚ ಹೆಸರು ಕೂಡಾ ಮುಂಚೂಣಿಯಲ್ಲಿಯೇ ಕೇಳಿಬರುತ್ತಿದೆ. ಹೋರಾಟಗಾರ್ತಿಯಾಗಿರುವ ಸರಿತಾ ಪೂಣಚ್ಚ ಅವರ ಕಡೆಗೆ ಕಾರ್ಯಕರ್ತರು ಹೆಚ್ಚು ಒಲವನ್ನು ಹೊಂದಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವಹಿಸಿಕೊಂಡ್ರೆ ಮಹಿಳೆಯರನ್ನು ಹೆಚ್ಚಾಗಿ ಪಕ್ಷದ ಕಡೆಗೆ ಸೆಳೆಯ ಬಹುದು ಅನ್ನೋದು ಸದ್ಯದ ಲೆಕ್ಕಾಚಾರ. ಇನ್ನು ಮಾಜಿ ಬ್ಲಾಕ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ರವರ ಹೆಸರು ಕೂಡ ಚಾಲ್ತಿಯಲ್ಲಿದ್ದು, ಸಜ್ಜನ ಸ್ವಭಾವದ ಧರ್ಮಜ ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿದ್ದಾರೆ. ಒಂದೊಮ್ಮೆ ಜಿಲ್ಲಾಧ್ಯಕ್ಷರಾದ್ರೆ ಪಕ್ಷದಲ್ಲಿನ ಬಿರುಕುಗಳನ್ನು ಸರಿ ಪಡಿಸಬಹುದು. ಅಲ್ಲದೇ ಕಾರ್ಯಕರ್ತರು ಕೂಡ ಹೆಚ್ಚು ಒಲವು ಹೊಂದಿದ್ದಾರೆ.

https://kannada.newsnext.live/good-news-auto-taxi-drivers-3000-corona-gift-cm-yediyurappa/

ಅಷ್ಟೇ ಅಲ್ಲಾ ಮಾಜಿ ಬ್ಲಾಕ್ ಅಧ್ಯಕ್ಷರಾದ ರಮಾನಾಥ್ ಬೇಕಲ್ ಹೆಸರು ಚಾಲ್ತಿಯಲ್ಲಿದೆ. ಸಂಪಾಜೆ ಪೂಯಿಯ೦ತಹ ರಾಜ್ಯ ಗಮನಸೆಳೆದ ಹಲವಾರು ಕಾರ್ಯಕ್ರಮಗಳನ್ನು ಅಧ್ಯಕ್ಷತೆಯ ಅವಧಿಯಲ್ಲಿ ಸಂಘಟಿಸಿದ ಇವರ ಬಗ್ಗೆ ಕಾರ್ಯಕರ್ತರಲ್ಲಿ ಬಹಳಷ್ಟು ಒಲವಿದೆ. ಹಿರಿಯ ನಾಯಕ, ಗಟ್ಟಿಯಾಗಿ ಮಾತನಾಡಬಲ್ಲ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿಪಿ ಶಶಿಧರ್ ಬಗ್ಗೆ ಒಂದು ವರ್ಗದ ಕಾರ್ಯಕರ್ತರು ಪ್ರಬಲವಾಗಿ ಅಧ್ಯಕ್ಷ ಸ್ಥಾನಕ್ಕೆ ಒಲವನ್ನು ತೋರಿಸುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೆ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್ ತನ್ನ ನೇರ ನುಡಿಯಿಂದ ಕಾರ್ಯಕರ್ತರ ಒಲವನ್ನ ಗಳಿಸಿಕೊಂಡವರು ಇವರ ಬಗ್ಗೆ ಒಂದು ವರ್ಗದ ಕಾರ್ಯಕರ್ತರಲ್ಲಿ ಒಲವಿದೆ ಎನ್ನಲಾಗಿದೆ. ಇದು ಅಲ್ಲದೆ ಮಾಜಿ ಬ್ಲಾಕ್ ಅಧ್ಯಕ್ಷ ಸುಜು ತಿಮ್ಮಯ್ಯ ಸಹ ಅಧ್ಯಕ್ಷ ಯಾದಿಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ.

ಆದರೆ ಕೊಡಗು ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನದ ಆಯ್ಕೆ ಅಷ್ಟು ಸುಲಭವಾದದ್ದಲ್ಲ. ಕಳೆದ ಹಲವಾರು ವರ್ಷಗಳಿಂದ ಕೊಡಗಿನಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದೆ ಹೋಗಿ ಪಕ್ಷ ಸೊರಗಿ ಹೋಗಿದೆ. ಹೀಗಾಗಿ ಕೆಪಿಸಿಸಿ ಸಮರ್ಥ ಅಭ್ಯರ್ಥಿಯನ್ನೇ ಜಿಲ್ಲಾಧ್ಯಕ್ಷ ಹುದ್ದೆಗೇರಿಸಲು ಚಿಂತನೆ ನಡೆಸಿದೆ. ಕೆಪಿಸಿಸಿ ಹಲವು ಹೆಸರುಗಳನ್ನು ಪಟ್ಟಿ ಮಾಡಿಟ್ಟುಕೊಂಡಿದ್ದರೂ ಕೂಡ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ. ಒಟ್ಟಿನಲ್ಲಿ ಕೆಪಿಸಿಸಿಯ ಮುಂದಿನ ನಿರ್ಧಾರ ಕೊಡಗಿನಲ್ಲಿ ಕುತೂಹಲ ಕೆರಳಿಸಿದೆ.

https://kannada.newsnext.live/big-relief-for-loan-emi-payment-karnataka/
https://kannada.newsnext.live/kollywood-actor-singer-soundarya-bala-nandkumar-received-bad-message/
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular