ಕಿರಿಕ್ ಪಾರ್ಟಿ ಹಿಂದಿ ರಿಮೇಕ್….! ರಶ್ಮಿಕಾ, ಯಾವ ಕಾರಣಕ್ಕೂ ನಾನು ನಟಿಸಲ್ಲ ಎಂದಿದ್ದ್ಯಾಕೆ ಗೊತ್ತಾ?!

ಸ್ಯಾಂಡಲ್ ವುಡ್ ನಿಂದ ದಕ್ಷಿಣ ಭಾರತದ ಸಿನಿರಂಗದಲ್ಲಿ ಗುರುತಿಸಿಕೊಂಡು, ಅಲ್ಲಿಂದ ಬಾಲಿವುಡ್ ಗೆ ಹಾರಿದ ಬೆಡಗಿ ರಶ್ಮಿಕಾ ಮಂದಣ್ಣ. ಸದ್ಯ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿರೋ ನಟಿಮಣಿ ಕಿರಿಕ್ ಪಾರ್ಟಿ ಹಿಂದಿಗೆ ರಿಮೇಕ್ ಆದ್ರೆ ನಾನು ನಟಿಸೋದಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

https://kannada.newsnext.live/lock-down-vehicle-seize-kundapura/

ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬೆಳಕಿಗೆ ಬಂದ ಪ್ರತಿಭೆ ರಶ್ಮಿಕಾಮಂದಣ್ಣ. ತೆಲುಗು,ತಮಿಳು ಚಿತ್ರದಲ್ಲಿ ಮಿಂಚಿದ ರಶ್ಮಿಕಾ ಸದ್ಯ ಹಿಂದಿಯ ಎರಡೆರಡು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆಗೂ ತೆರೆ ಹಂಚಿಕೊಳ್ಳುತ್ತಿರುವ ರಶ್ಮಿಕಾ ಸದ್ಯ ಬಹುಬೇಡಿಕೆಯ ನಟಿ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಹೈದ್ರಾಬಾದ್ ನಲ್ಲಿ ವಾಸವಾಗಿರೋ ರಶ್ಮಿಕಾ ಫ್ಯಾನ್ಸ್ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸಂವಾದ ನಡೆಸುತ್ತ ಇರುತ್ತಾರೆ. ಇತ್ತೀಚಿಗೆ ಫ್ಯಾನ್ಸ್ ಜೊತೆ ನಡೆಸಿದ ಸಂವಾದದಲ್ಲಿ ಕಿರಿಕ್ ಪಾರ್ಟಿ ಹಿಂದಿಗೆ ರಿಮೇಕ್ ಆಗುತ್ತೆ ಅನ್ನೋ ಮಾತಿದೆ. ಆದರೆ ಅದರಲ್ಲಿ ನೀವು ನಟಿಸುತ್ತೀರಾ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದರು.

ಈ ಪ್ರಶ್ನೆಗೆ ಖಡಕ್ ಉತ್ತರ ನೀಡಿರುವ ರಶ್ಮಿಕಾ, ಮತ್ತೊಮ್ಮೆ ಕಿರಿಕ್ ಪಾರ್ಟಿಯಲ್ಲಿ ನಟಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಒಮ್ಮೆ ಕಿರಿಕ್ ಪಾರ್ಟಿಯಲ್ಲಿ ನಟಿಸಿದ್ದೇನೆ. ಆ ಪಾತ್ರವನ್ನು ಅನುಭವಿಸಿ ಆಗಿದೆ. ಮತ್ತೊಮ್ಮೆ ಆ ಪಾತ್ರದಲ್ಲಿ ನಟಿಸಿದರೇ ನ್ಯಾಯ ಒದಗಿಸಲಾಗುತ್ತದೆ ಎಂದ ನಂಬಿಕೆ ಇಲ್ಲ.

https://kannada.newsnext.live/kodagu-congress-new-president-issues/

ಅಲ್ಲದೇ ಹೊಸ ಹೊಸ ಪಾತ್ರಗಳಲ್ಲಿ ಅವಕಾಶ ಸಿಗ್ತಿರೋವಾಗ ಮತ್ತೆ ಅದೇ ಹಳೆ ಪಾತ್ರದಲ್ಲಿ ನಟಿಸೋದು ಯಾಕೆ ಎಂದು ರಶ್ಮಿಕಾ ಪ್ರಶ್ನಿಸಿದ್ದಾರೆ. ಹೀಗಾಗಿ ಒಂದೊಮ್ಮೆ ಕಿರಿಕ್ ಪಾರ್ಟಿ ಹಿಂದಿಗೆ ರಿಮೇಕ್ ಆದ್ರೂ ಕೊಡಗಿನ ಬೆಡಗಿ ನಟಿಸೋದಿಲ್ಲ ಎನ್ನೋದು ಖಚಿತ.

https://kannada.newsnext.live/kollywood-actor-singer-soundarya-bala-nandkumar-received-bad-message/

ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆದಿದ್ದ ಚಿತ್ರ ಕಿರಿಕ್ ಪಾರ್ಟಿಯ ಹಿಂದಿ ರಿಮೇಕ್ ಹಕ್ಕು  ದಾಖಲೆ ದರಕ್ಕೆ ಮಾರಾಟವಾಗಿದ್ದು, ಸದ್ಯದಲ್ಲೇ ಹಿಂದಿಯಲ್ಲಿ ರಿಮೇಕ್ ಆಗಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈ ಸಿನಿಮಾ ರಿಮೇಕ್ ಆದರೂ ನಾನು ನಟಿಸಲ್ಲ ಎಂಬ ರಶ್ಮಿಕಾ ಉದ್ದೇಶಪೂರ್ವಕವಾಗಿಯೇ ಕಿರಿಕ್ ಪಾರ್ಟಿಯಿಂದ ದೂರ ಉಳಿದಿದ್ದಾರೆ ಎನ್ನಲಾಗ್ತಿದೆ.

Comments are closed.