ಸೋಮವಾರ, ಏಪ್ರಿಲ್ 28, 2025
HomekarnatakaBJP : ಕಾಮಗಾರಿಗೆ 40% ಕಮಿಷನ್‌ : ಈಶ್ವರಪ್ಪ ಭ್ರಷ್ಟಾಚಾರ, ಹೈಕಮಾಂಡ್‌ಗೆ ದೂರು

BJP : ಕಾಮಗಾರಿಗೆ 40% ಕಮಿಷನ್‌ : ಈಶ್ವರಪ್ಪ ಭ್ರಷ್ಟಾಚಾರ, ಹೈಕಮಾಂಡ್‌ಗೆ ದೂರು

- Advertisement -

ಬೆಂಗಳೂರು : ರಾಜ್ಯ ಸಚಿವ ಸಂಪುಟದಲ್ಲಿ ಹಿರಿಯ ಸಚಿವರಾಗಿರೋ ಈಶ್ವರಪ್ಪ (KS Eshwarappa) ಪಾಲಿಗೆ ಅದೃಷ್ಟ ಕೈಕೊಟ್ಟಂತಿದೆ. ಕುಟುಂಬ ರಾಜಕಾರಣಕ್ಕೆ ಸಿದ್ಧತೆ ಮಾಡಿಕೊಂಡು ಮಗನನ್ನು ತಮ್ಮ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿರೋ ಈಶ್ವರಪ್ಪನವರಿಗೆ ಕಾಮಗಾರಿ ಕಮೀಷನ್ ದಂಧೆಯೇ ಮುಳುವಾಗುವಂತಿದ್ದು, ಈಶ್ವರಪ್ಪನವರ ದೂರು ಮತ್ತೊಮ್ಮೆ ಹೈಕಮಾಂಡ್ (BJP) ಅಂಗಳ ತಲುಪಿದೆ.

ಈಗಾಗಲೇ ನಿರಾಣಿ ಸಿಎಂ ಆಗ್ತಾರೇ ಎಂಬ ಹೇಳಿಕೆ, ರಾಷ್ಟ್ರಧ್ವಜ ಬದಲಾಯಿಸುವ ಹೇಳಿಕೆ,ಡಿಕೆಶಿ ವಿರುದ್ಧ ಅವಹೇಳನಕಾರಿ ಮಾತು ಸೇರಿದಂತೆ ನಾನಾ ಕಾರಣಕ್ಕೆ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿರೋ ಸಚಿವ ಈಶ್ವರಪ್ಪ ಈ ಭಾರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರ ಕಮೀಷನ್ ದಂಧೆಯಿಂದ ನೊಂದಿರುವ ಗುತ್ತಿಗೆದಾರನೊಬ್ಬ ದೆಹಲಿ ರಾಷ್ಟ್ರೀಯ ಮುಖಂಡರ ಬಾಗಿಲು ತಟ್ಟಿದ್ದು ಬಿಜೆಪಿ ಪಾಲಿಗೆ ತೀವ್ರ ಮುಜುಗರ ತಂದಿದೆ. ಬೆಳಗಾವಿ ಹಿಂಡಲಗಾ ಮೂಲದ ಸಂತೋಷ್ ಪಾಟೀಲ್ ಎಂಬುವವರು ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಈಶ್ವರಪ್ಪನವರನ್ನು ನಂಬಿ ಹಲವು ಕಾಮಗಾರಿ ಮಾಡಿದ್ದೇವೆ.‌ಆದರೆ ಅವರ ಪುತ್ರ ಕಾಮಗಾರಿಯ ಅನುದಾನದಲ್ಲಿ ಶೇಕಡಾ 40 ರಷ್ಟು ಕಮೀಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈಶ್ವರಪ್ಪನವರ (KS Eshwarappa) ಕಮೀಷನ್ ದಂಧೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರೋ ಸಂತೋಷ್ ಪಾಟೀಲ್, ಸಚಿವ ಈಶ್ವರಪ್ಪ ಮೇಲೆ ಭರವಸೆಯ ಇಟ್ಟು ನಮ್ಮ ಗ್ರಾಮದಲ್ಲಿ ಕಾಮಗಾರಿ ಗಳನ್ನು ಮಾಡಿದ್ದೇವೆ. 4 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ. ಮಹಾಲಕ್ಷ್ಮೀದೇವಿ ಜಾತ್ರೆ ಹಿನ್ನಲೆಯಲ್ಲಿ ಅಗತ್ಯ ಕಾಮಗಾರಿ ಮಾಡಿದ್ದೇವೆ. ಆದರೆ ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ನಮಗೆ ಬಿಲ್ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮಾತ್ರವಲ್ಲ ಮಾಡಿರುವ ಕೆಲಸಕ್ಕೆ ವಕ್೯ ಆರ್ಡರ್ ಕೊಡುತ್ತಿಲ್ಲ. ಈಶ್ವರಪ್ಪ ಅವರನ್ನು ಕೇಳಿದರೆ ಪ್ರತಿಸಲ ‘ನಾಳೆ ಬಾ’ ಎನ್ನುತ್ತಿದ್ದಾರೆ. ಗುತ್ತಿಗೆದಾರರು ಹೇಳುವಂತೆ 40% ಕಮೀಷನ್ ಕೊಡದಿದ್ದರೆ ಬಿಲ್ ಕೊಡಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ಇದರಿಂದ ಬೇಸತ್ತು ಈ ಕಮೀಷನ್ ದಂಧೆಯ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಸಂತೋಷ್ ಹೇಳಿದ್ದಾರೆ.

ಕೇವಲ ಸಂತೋಷ ಪಾಟೀಲ್ ಮಾತ್ರವಲ್ಲ ರಾಜ್ಯದ ಹಲವು ಬಿಜೆಪಿ (BJP) ಶಾಸಕರೂ ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಡುಗಡೆಯಾಗಿರೋ 300 ಕೋಟಿ ರೂಪಾಯಿ ಅನುದಾನದಲ್ಲೂ ಕಮಿಷನ್ ಬಯಸುತ್ತಿದ್ದಾರೆ. ಅದಕ್ಕಾಗಿಯೇ ಅನುದಾನ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದಾರೆ. ಆರ್ಥಿಕ ಇಲಾಖೆ ಅನುಮೋದನೆ ನೀಡಿದರೂ ಅನುದಾನ ಸಿಗುತ್ತಿಲ್ಲ ಎಂದು ಹಲವು ಶಾಸಕರು ಸಿಎಂ ಬಳಿ ದೂರಿದ್ದಾರಂತೆ‌. ಒಟ್ಟಿನಲ್ಲಿ ಈಶ್ವರಪ್ಪ ಸಚಿವ ಸಂಪುಟದಿಂದ ಕೈಬಿಡಲು ಆಗಲೇ ಸಿದ್ಧತೆ ನಡೆದಿದ್ದು, ಅದಕ್ಕೆ ಈಗ ಈ ಆರೋಪಗಳು ಮತ್ತಷ್ಟು ಬಲ ತುಂಬುತ್ತಿವೆ.

ಇದನ್ನೂ ಓದಿ : ಚುನಾವಣೋತ್ತರ ಸಮೀಕ್ಷೆ: ಯುಪಿಯಲ್ಲಿ ಅರಳಿದ ಕಮಲ

ಇದನ್ನೂ ಓದಿ : ಗೋವಾದಲ್ಲಿ ಅಧಿಕಾರಕ್ಕೆ ಕೈ ಸರ್ಕಸ್ : ಸಹಾಯಕ್ಕೆ ಧಾವಿಸಿದ ಡಿ.ಕೆ.ಶಿವಕುಮಾರ್‌

( KS Eshwarappa Corruption 40% Commission Complaint to BJP High Command)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular