Body Worn Camera : ಟ್ರಾಫಿಕ್ ಪೊಲೀಸರಿಗೆ ಬಂತು ಕಡ್ಡಾಯ ಬಾಡಿ ವೋರ್ನ್ ಕ್ಯಾಮರಾ

ಬೆಂಗಳೂರಿನಲ್ಲಿ ಟ್ರಾಫಿಕ್ ನಷ್ಟೇ ತಲೆನೋವಿನ ಸಂಗತಿ ಟ್ರಾಫಿಕ್ ಪೊಲೀಸರು ಮತ್ತು ಜನರ ನಡುವಿನ ವಾಗ್ವಾದ.‌ ನೊರೆಂಟು ಗಲಾಟೆ, ಅವಾಚ್ಯಶಬ್ದಗಳಿಂದ ನಿಂದನೆ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡೋ ವಿಡಿಯೋಗಳು. ಆದರೆ ಈ ಎಲ್ಲ ಕಿರಿಕಿರಿಯಿಂದ ಬೇಸತ್ತ ಬೆಂಗಳೂರು ಪೊಲೀಸರು ಈಗ ದಂಡದ ಕಿರಿಕಿರಿಗೆ ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ. ಹೌದು ನಗರ ಸಂಚಾರಿ ಪೊಲೀಸರು (Bangalore police ) ಬಾಡಿ ವೋರ್ನ್ ಕ್ಯಾಮರಾ ( Body Worn Camera) ಬಳಸಿ ಯಶಸ್ಸು ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಸಾವಿರಾರು ಜನರು ಪ್ರತಿನಿತ್ಯ ಸಂಚಾರಿ ನಿಯಮ ಉಲ್ಲಂಘನೆ ಮಾಡ್ತಿದ್ದರು. ಇದಕ್ಕೆ ದಂಡ ವಿಧಿಸೋ ವೇಳೆಗೆ ಪ್ರತಿನಿತ್ಯ ಪೊಲೀಸರು ಹಾಗೂ ಜನರ ನಡುವೆ ಗಲಾಟೆ ನಡೆಯುತ್ತಿತ್ತು. ‌ಪೊಲೀಸರು ನಿಂದಿಸಿದ್ರು ಅಂತ ಜನರು, ಜನ ನಿಂದಿಸಿದ್ರು ಅಂತ ಪೊಲೀಸರು. ಫಲವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಟ್ರಾಫಿಕ್ ಪೊಲೀಸ್ ವರ್ಸಸ್ ಕಾಮನ್ ಪೀಪಲ್ ವಿಡಿಯೋಗಳು ಹರಿದಾಡುತ್ತಲೇ ಇರುತ್ತಿದ್ದವು.

ಈಗ ಇದಕ್ಕೆ ಕಡಿವಾಣ ಹಾಕುವ ಪ್ಲ್ಯಾನ್ ಸಕ್ಸಸ್ ಆಗಿದೆ. ಪ್ರಯೋಗಿಕವಾಗಿ 1020 ಬಾಡಿ ವೋರ್ನ್ ಕ್ಯಾಮರಾಗಳಲ್ಲಿ ( Body Worn Camera) ಕಾರ್ಯಾರಂಭ ಮಾಡಿದ್ದ ಪೊಲೀಸರು ಸಫಲತೆ ಪಡೆದಿದ್ದಾರೆ. ದಂಡ ವಿಧಿಸೋ ಟೈಂನಲ್ಲಿ ಭುಜಕ್ಕೆ ಕ್ಯಾಮರಾ ಕಡ್ಡಾಯವಾಗಿ ಹಾಕಿ ಕೆಲಸ ಮಾಡ್ತಿದ್ದರು. ಇದರಿಂದ ಪೊಲೀಸರು ವಾಹನ ನಿಲ್ಲಿಸೋದ್ರಿಂದ ಹಿಡಿದು, ಮಾತುಕತೆ ಜೊತೆಗೆ ದಂಡ ಹಾಕೋವರೆಗೂ ಎಲ್ಲವೂ ರೆಕಾರ್ಡ್ ಆಗ್ತಿದೆ. ಡ್ಯೂಟಿಯಲ್ಲಿ ಇರೋ ಪ್ರತಿ ನಿಮಿಷವೂ ಎಲ್ಲವನ್ನು ರೆಕಾರ್ಡ್ ಮಾಡಲಾಗುತ್ತಿದೆ.

ಈ ಕ್ಯಾಮರಾ ಬಳಕೆಯಿಂದ ಕಿರಿಕಿರಿ ತಪ್ಪಿದ್ದು, ಪ್ರಯೋಗಿಕವಾಗಿ ಯಶಸ್ಸು ಕಂಡ ಹಿನ್ನಲೆ ಮತ್ತೆ 5 ಸಾವಿರ ಬಾಡಿ ವೋರ್ನ್ ಕ್ಯಾಮರಾ ನೀಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಇನ್ಮುಂದೆ ನಗರದಲ್ಲಿ ಎಲ್ಲೇ ದಂಡ ಸಂಗ್ರಹವಾದರೂ ಅದು ಬಾಡಿ ವೋರ್ನ್ ಕ್ಯಾಮರಾ ( Body Worn Camera) ಸಮ್ಮುಖದಲ್ಲೇ ನಡೆಯಲಿದೆ. ಇದಕ್ಕೂ ಮುನ್ನ ಸಂಚಾರಿ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ಸದಾ ವಾಗ್ವಾದ ನಡೆಯುತ್ತಿತ್ತು. ದಂಡ ವಿಧಿಸೋ ಟೈಂನಲ್ಲಿ ಪೊಲೀಸರು ಹಲ್ಲೆ ಮಾಡಿದ್ರು, ಲಂಚ ಪಡೆದು ವಾಹನಗಳನ್ನ ಬಿಟ್ಟು ಕಳಿಸ್ತಾರೆ ಅನ್ನೋ ಆರೋಪಗಳಿತ್ತು.

ಈಗ ರೆಕಾರ್ಡ್ ಕ್ಯಾಪ್ಯಾಸಿಟಿ 50 GB ಜೊತೆಗೆ ಧೀರ್ಘ ಕಾಲದ ಬ್ಯಾಟರಿ ಇರೋ ಈ ಕ್ಯಾಮರಾಗಳಿಂದಾಗಿ ಟ್ರಾಫಿಕ್ ಸಿಬ್ಬಂದಿ ಹಾಗೂ ವಾಹನ ಸವಾರರ ಅನುಚಿತ ವರ್ತನೆಗಳಿಗೆ ಬ್ರೇಕ್ ಬಿದ್ದಿದೆ. ಪ್ರತಿಯೊಂದು ರೆಕಾರ್ಡ್ ಆಗೋದ್ರಿಂದ ಅವಾಚ್ಯ ಶಬ್ದಗಳ ಬಳಕೆಗೂ ಕಡಿಮೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳು ಹಾಕೋದು ಕಡಿಮೆಯಾಗಿದೆ ಅಂತಾರೆ ಹಿರಿಯ ಅಧಿಕಾರಿಗಳು. ಒಟ್ಟಿನಲ್ಲಿ ಕೊನೆಗೂ ಟ್ರಾಫಿಕ್ ರಾಮಾಯಣಕ್ಕೆ ಬಾಡಿ ವೋರ್ನ್ ಕ್ಯಾಮರಾ ( Body Worn Camera) ಮದ್ದಿನಂತೆ ಬಂದಿದ್ದು ಮುಂದಾದರೂ ಸಮಸ್ಯೆ ಕಡಿಮೆಯಾಗುತ್ತಾ ಕಾದು ನೋಡಬೇಕಿದೆ.

ಇದನ್ನೂ ಓದಿ : Bus Free Travel : ಬಿಎಂಟಿಸಿ ಬಸ್‌ನಲ್ಲಿ ಒಂದು ವಾರ ಉಚಿತ ಪ್ರಯಾಣ

ಇದನ್ನೂ ಓದಿ : Namma clinic : ಬೆಂಗಳೂರಲ್ಲಿ ಬಾಗಿಲು ತೆರೆಯಲಿದೆ ನಮ್ಮ ಕ್ಲಿನಿಕ್

(Traffic cops have a mandatory body worn camera)

Comments are closed.