ಉಡುಪಿ : ಪ್ರತಿಭಟನೆ ನಡೆಸಿ ಮಂತ್ರಿ ಪದವಿಯನ್ನು ಪಡೆದುಕೊಳ್ಳುವುದು ಧರ್ಮವಲ್ಲ. ಸಚಿವ ಸಂಪುಟ ವಿಸ್ತರಣೆಯ ಕುರಿತು ನಾನು ಪ್ರತಿಕ್ರೀಯೆ ನೀಡುವುದಿಲ್ಲ. ನಾನು ಮೌನವ್ರತ ಕ್ಕೆ ಜಾರಿದ್ದೇನೆ ಎಂದು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.
ನನ್ನ ಪರವಾಗಿ ಪ್ರತಿಭಟಿಸುವುದು ಧರ್ಮವಲ್ಲ. ಪ್ರತಿಭಟನೆ ಸಮಾಜದ ಒಳಿತಿಗಾಗಿ ಮಾತ್ರವೇ ಪ್ರತಿಭಟನೆ ಮಾಡಬೇಕು. ಸರಕಾರದ ದುರಾಡಳಿತವನ್ನು ಪ್ರತಿಭಟಿಸಬೇಕು. ಸಚಿವ ಸಂಪುಟ ವಿಸ್ತರಣೆಯ ಕುರಿತು ಯಾವುದೇ ಪ್ರತಿಕ್ರೀಯೆ ನೀಡುವುದಿಲ್ಲ. ಈ ಹಿಂದೆ ನನ್ನನ್ನ ಒಂದು ಬಾರಿ ಪ್ರಮೋಶನ್‌ಗೆ ಕರೆದು ಡಿಮೋಶನ್ ಮಾಡಿದ್ದಾರೆ. ಹೀಗಾಗಿ ಮುಂದಿನ ನಿರ್ಧಾರವನ್ನು ಪರಮಾತ್ಮನೇ ಬಲ್ಲ ಎಂದಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಸತತ ಐದು ಬಾರಿ ಶಾಸಕರಾಗಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಆಯ್ಕೆಯಾಗಿದ್ದಾರೆ. ಸರಳತೆಯಿಂದಲೇ ಕುಂದಾಪುರದ ವಾಜಪೇಯಿ ಅಂತಾನೇ ಕರೆಯಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಸಚಿವ ಸ್ಥಾನ ನೀಡುವುದಾಗಿ ಘೋಷಣೆ ಮಾಡಿ ಅಂತಿಮ ಹಂತದಲ್ಲಿ ಅವರನ್ನು ಕೈಬಿಡಲಾಗಿತ್ತು. ಆದ್ರೀಗ ಮತ್ತೆ ಸಚಿವ ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆಯಿತ್ತು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಬಾರೀ ಒತ್ತಡ ಕೇಳಿಬಂದಿತ್ತು. ಆದರೆ ಈ ಬಾರಿಯೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ.