ಸಲಾರ್ ಸಿನಿಮಾ ಟೀಂನಿಂದ ಸಿಹಿಸುದ್ದಿ…! ಪ್ರಭಾಸ್ ಗೆ ಜೊತೆಯಾಗಲಿದ್ದಾರೆ ಬಾಲಿವುಡ್ ಬೆಡಗಿ…!!

ಕೆಜಿಎಫ್-2 ನಿರ್ದೇಶಕ ಹಾಗೂ ಪ್ರಭಾಸ್ ಕಾಮಿನೇಶನ್ ನಲ್ಲಿ ಬರ್ತಿರೋ ಬಹುನೀರಿಕ್ಷಿತ ಚಿತ್ರ ಸಲಾರ್ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡ್ತಿದೆ. ಕೊರೋನಾ ಎರಡನೇ ಅಲೆ ಬಳಿಕ ಮತ್ತೆ ಶೂಟಿಂಗ್ ಆರಂಭಿಸಿರೋ ಚಿತ್ರತಂಡ, ಸಿನಿಮಾಗೆ ಬಾಲಿವುಡ್ ಸುಂದರಿ ಎಂಟ್ರಿಯ ಸಿಹಿಸುದ್ದಿ ಕೊಟ್ಟಿದೆ.

ಹೌದು ಸಲಾರ್ ಗೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಎಂಟ್ರಿ ಕೊಡಲಿದ್ದಾರಂತೆ. ಈ ಮೊದಲು ಪ್ರಭಾಸ್ ಗೆ ನಾಯಕಿಯಾಗಿ ಕತ್ರಿನಾ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಬಳಿಕ ಈ ಸ್ಥಾನಕ್ಕೆ ಶ್ರುತಿ ಹಾಸನ್ ಆಯ್ಕೆ ಮಾಡಲಾಗಿತ್ತು.

ಆದರೆ ಒಂದು ಹಾಡಿನಲ್ಲಾದ್ರೂ ಪ್ರಭಾಸ್ ಮತ್ತು ಕತ್ರಿನಾರನ್ನು ಒಟ್ಟಿಗೆ ನೋಡೋ ಅವಕಾಶ ಅಭಿಮಾನಿಗಳಿಗೆ ಸಿಗಲಿದ್ದು, ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಕತ್ರಿನಾ ಕೈಫ್ ಸಲಾರ್ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ.

ಸಲಾರ್ ಚಿತ್ರವನ್ನು ಹೊಂಬಾಳೆ ಫಿಲ್ಮ್ಸಂ ನಿರ್ಮಿಸುತ್ತಿದ್ದು, ಹೈದ್ರಾಬಾದ್ ನಲ್ಲಿ ಸಿನಿಮಾದ ಎರಡನೇ ಹಂತದ ಶೂಟಿಂಗ್ ಆರಂಭಗೊಂಡಿದೆ. ಸದ್ಯದಲ್ಲೇ ಶೂಟಿಂಗ್ ತಂಡಕ್ಕೆ ಕತ್ರಿನಾ ಕೈಫ್ ಎಂಟ್ರಿಯಾಗಲಿದ್ದು, ಮಾದಕ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರಂತೆ.

ಬಾಲಿವುಡ್ ನಟಿಯರು ಐಟಂ ಸಾಂಗ್ ಗೆ ಹೆಜ್ಜೆ ಹಾಕೋ ಟ್ರೆಂಡ್ ಇತ್ತೀಚಿಗೆ ಜೋರಾಗಿದ್ದು, ಕನ್ನಡದ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣಾದಲ್ಲೂ ಬಾಲಿವುಡ್ ಬೆಡಗಿ ಜಾಕ್ವಲಿನ್ ಐಟಂಸಾಂಗ್ ನಲ್ಲಿ  ಹೆಜ್ಜೆ ಹಾಕಿದ್ದಾರೆ.  

Comments are closed.