basanagowda patil yatnal : ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ್​

ವಿಜಯಪುರ : ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣ ಇದೀಗ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷಗಳು ಈ ಘಟನೆಯ ಬಳಿಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (basanagowda patil yatnal)​ ಕೂಡ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ವಿಜಯಪುರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ರಾಜ್ಯಕ್ಕೆ ಶಕ್ತಿಯುತ ಗೃಹ ಸಚಿವರು ಬೇಕೆಂದು ಜಾಹೀರಾತು ಹಾಕಲಿ ಎಂದು ಹೇಳಿದರು.


ದೇಶದಲ್ಲಿ ಮಿಕ್ಯಾವ ಕಡೆಗಳಲ್ಲಿಯೂ ಈ ರೀತಿಯ ಗಲಾಟೆಗಳು ಆಗುತ್ತಿಲ್ಲ. ಕೇವಲ ರಾಜ್ಯದಲ್ಲಿ ಮಾತ್ರ ಧರ್ಮ ಸಂಘರ್ಷ ನಡೆಯುತ್ತಿದೆ. ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ತಾವು ಒಬ್ಬ ಗೃಹ ಮಂತ್ರಿ ಎಂಬುವುದೇ ಇನ್ನೂ ಅರಿವಿಗೆ ಬಂದಂತೆ ಕಾಣುತ್ತಿಲ್ಲ. ಬೆಳಗ್ಗೆ ಒಂದು ಮಾತನ್ನು ಹೇಳುತ್ತಾರೆ. ಸಂಜೆ ವೇಳೆಗೆ ಇನ್ನೊಂದೇ ಹೇಳುತ್ತಾರೆ. ಹೀಗಾಗಿ ರಾಜ್ಯಕ್ಕೊಂದು ಹೊಸ ಗೃಹ ಮಂತ್ರಿ ಬೇಕೆಂದು ಜಾಹೀರಾತು ಹಾಕಬೇಕಿದೆ ಎಂದು ವ್ಯಂಗ್ಯವಾಡಿದರು.


ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ತನಿಖೆ ಇನ್ನಷ್ಟು ಚುರುಕುಗೊಳ್ಳಬೇಕು.ಗಲಭೆಗಳಲ್ಲಿ ಕಾಣದ ಕೈಗಳ ಕೈವಾಡವಿದೆ. ಮನೆಗಳಲ್ಲಿ ಸರ್ಚ್​ ಆಪರೇಷನ್​ ಕೈಗೊಳ್ಳಬೇಕು. ಯಾರ ಮನೆಗಳಲ್ಲಿ ತಲ್ವಾರ್​ ಇದೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಹೇಳಿದರು.


ಸ್ವಪಕ್ಷೀಯರ ವಿರುದ್ಧ ಕಿಡಿಕಾರಿದ ಶಾಸಕ ಯತ್ನಾಳ್​, ಗೃಹ ಸಚಿವರು ಇನ್ನೂ ಪರಿಶೀಲನೆ ನಡೆಸುತ್ತಾ ಕುಳಿತರೆ ಆಗುವುದಿಲ್ಲ. ತಪ್ಪು ನಡೆದಲ್ಲಿ ಕಠಿಣ ಕಾ್ನೂನು ಕ್ರಮಕ್ಕೆ ಆದೇಶಿಸಬೇಕು. ಡಿ.ಜೆ ಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ಶಾಸಕ ಜಮೀರ್​ ಅಹಮದ್​ ಬಂಧನವಾಗಬೇಕಿತ್ತು. ಆದರೆ ಇವರು ಒಳ ಒಳಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.ಇವರ ಹೊಂದಾಣಿಕೆಯಿಂದ ಮುಗ್ಧ ಹಿಂದೂಗಳು ಸಾಯುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಇದನ್ನು ಓದಿ : Ghebreyesus On 3-day Visit To Gujarat : ಮೂರು ದಿನಗಳ ಗುಜರಾತ್​ ಪ್ರವಾಸದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

ಇದನ್ನೂ ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್‌

lets advertise that karnataka needs a strong home minister says basanagowda patil yatnal

Comments are closed.