ಮಂಗಳವಾರ, ಏಪ್ರಿಲ್ 29, 2025
Homekarnatakaoutrage people : ಕರ್ಪ್ಯೂ ಬಡವರಿಗೆ, ಪಾದಯಾತ್ರೆ ಕಾಂಗ್ರೆಸ್ ಗೆ : ಸರ್ಕಾರದ ನಡೆಗೆ ಜನರ...

outrage people : ಕರ್ಪ್ಯೂ ಬಡವರಿಗೆ, ಪಾದಯಾತ್ರೆ ಕಾಂಗ್ರೆಸ್ ಗೆ : ಸರ್ಕಾರದ ನಡೆಗೆ ಜನರ ಆಕ್ರೋಶ

- Advertisement -

ಬೆಂಗಳೂರು : ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮೇಕೆದಾಟು ಪಾದಯಾತ್ರೆ ಕೊರೋನಾ ಹಾಗೂ ವೀಕೆಂಡ್ ಕರ್ಪ್ಯೂ ನಡುವೆಯೂ ಆರಂಭವಾಗಿದೆ. ಮೂರು ಧರ್ಮದ ಧರ್ಮಗುರುಗಳು, ಕಾಂಗ್ರೆಸ್ ನಾಯಕರು ಹಾಗೂ ನಟ ದುನಿಯಾ ವಿಜಿ ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ‌ ನೀಡಿದ್ದಾರೆ. ರಾಜ್ಯದಲ್ಲಿ ಕರ್ಪ್ಯೂ ಹೇರಿಕೆ ಮಾಡಿ ಬಡವರ ಪ್ರಾಣ ಹಿಂಡುತ್ತಿರುವ ಸರಕಾರ, ಕಾಂಗ್ರೆಸ್‌ಗೆ ಪಾದಯಾತ್ರೆ ನಡೆಸಲು ಅವಕಾಶ ಕಲ್ಪಿಸಿರುವುದು ಭಾರೀ ಆಕ್ರೋಶಕ್ಕೆ ( outrage people ) ಕಾರಣವಾಗಿದ್ದು, ಜನಸಾಮಾನ್ಯರು ರಾಜ್ಯ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಪಾದಯಾತ್ರೆಗೆ ಚಾಲನೆ ನೀಡಿ‌ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ನಾವು ಎರಡು ತಿಂಗಳ ಹಿಂದೆಯೇ ಪಾದಯಾತ್ರೆ ಘೋಷಿಸಿದ್ದೇವೆ.‌ ಆದರೂ ಬಿಜೆಪಿ ಕೊರೋನಾ ಹೆಸರಿನಲ್ಲಿ ನಮ್ಮ ಪಾದಯಾತ್ರೆ ತಡೆಯುವ ಪ್ರಯತ್ನ ನಡೆಸಿದೆ. ಆದರೆ ನಾವು ಯಾವ ಬೆದರಿಕೆಗೂ ಬಗ್ಗಲ್ಲ.‌ ಪಾದಯಾತ್ರೆ ನಡೆಸೇ ನಡೆಸುತ್ತೇವೆ.‌ ಜನವರಿ 19 ರವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಗುಡುಗಿದ್ದಾರೆ. ಇನ್ನು ರಾಮನಗರದಾದ್ಯಂತ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದ್ದರೂ ಚುನಾವಣಾ ಸಮಾವೇಶದ ಮಾದರಿಯಲ್ಲಿ ಪಾದಯಾತ್ರೆಗೆ ಜನಜಾತ್ರೆಯೇ ಹರಿದು ಬರುತ್ತಿದ್ದು, ಬೇರೆ ಬೇರೆ ಜಿಲ್ಲೆಗಳಿಂದಲೂ ಜನರು ಕಾಂಗ್ರೆಸ್ ಒದಗಿಸಿಕೊಟ್ಟ ಬಸ್ ಗಳಲ್ಲಿ ಆಗಮಿಸಿ ಪಾದಯಾತ್ರೆಗೆ ಕೈಜೋಡಿಸುತ್ತಿದ್ದಾರೆ.

ಈ ಮಧ್ಯೆ ರಾಮನಗರ ಜಿಲ್ಲಾಢಳಿತ ಈ ಜಿದ್ದಾಜಿದ್ದಿ ರಾಜಕೀಯ ಮೇಲಾಟಕ್ಕೆ ಮೂಕಸಾಕ್ಷಿಯಾಗಿದ್ದು, ಸಾವಿರಾರು ಜನರು ಸ್ಥಳದಲ್ಲಿ ಜಮಾವಣೆಯಾಗುತ್ತಿರುವುದಕ್ಕೆ ರಾಮನಗರ ಎಸ್ ಪಿ ಗಿರೀಶ್ ಮೂಕಸಾಕ್ಷಿಯಂತೆ ನಿಂತಿದ್ದ ದೃಶ್ಯ ಮಾಧ್ಯಮಗಳಲ್ಲಿ ಕಂಡುಬಂತು. ಇನ್ನೊಂದೆಡೆ ಗೃಹ ಸಚಿವ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.‌ ಮಾತ್ರವಲ್ಲ ತಮ್ಮಿಂದಲೇ ನಿಯಂತ್ರಿಸಲು ಸಾಧ್ಯವಾಗದ ಪಾದಯಾತ್ರೆಯನ್ನು ನಿಯಂತ್ರಿಸುವ ಹೊಣೆಗಾರಿಕೆಯನ್ನು ರಾಮನಗರ ಜಿಲ್ಲಾಢಳಿತದ ತಲೆಗೆ ಕಟ್ಟಿ ಸುಮ್ಮನಾಗಿದ್ದಾರೆ.

ಕಾಂಗ್ರೆಸ್‌ ಚುನಾವಣೆಗಾಗಿ ಜನರ ಆರೋಗ್ಯವನ್ನು ಲೆಕ್ಕಿಸದೇ ಪಾದಯಾತ್ತೆ ನಡೆಸುತ್ತಿದೆ ಎಂದು ಆರೋಪಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕರ್ಪ್ಯೂ ಉಲ್ಲಂಘಿಸಿದ್ರೇ ಕಾನೂನು ಇದೆ. ಕಾಂಗ್ರೆಸ್ ಮುಂದಿನ ಚುನಾವಣೆಗಾಗಿ ಮಾಡ್ತಿರೋ ಈ ತಂತ್ರವನ್ನು ಜನರು ಗಮನಿಸುತ್ತಿದ್ದಾರೆ.‌ಮುಂದಿನ‌ದಿನದಲ್ಲಿ ಕಾಂಗ್ರೆಸ್ ಇದಕ್ಕೆ ಬೆಲೆ‌ತೆರಲಿದೆ ಎಂದಿದ್ದಾರೆ.

ಇನ್ನು ಅತ್ತ ಕಾಂಗ್ರೆಸ್ ಯಾವ ಬೆದರಿಕೆಗೂ ಬಗ್ಗದೇ ಪಾದಯಾತ್ರೆ ಆರಂಭಿಸುತ್ತಿದ್ದಂತೆ ಇತ್ತ ಸಿಎಂ ಬೊಮ್ಮಾಯಿ ಆತಂಕಗೊಂಡಿದ್ದು ಜನತೆಗೆ ತಪ್ಪು ಸಂದೇಶ ಹೋಗಲಿದೆ ಎಂಬ ಕಾರಣಕ್ಕೆ ಮುಂದೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ತುರ್ತು ಸಭೆ ನಡೆಸಿದ್ದಾರೆ. ಹಿರಿಯ ಸಚಿವರಾದ ಗೋವಿಂದ್ ಕಾರಜೋಳ, ಭೈರತಿ ಬಸವರಾಜ್, ಗೃಹ ಸಚಿವ ಅರಗ ಜ್ಞಾನೇಂದ್ರರನ್ನು ನಿವಾಸಕ್ಕೆ ಕರೆಸಿಕೊಂಡಿದ್ದು, ಮುಂದೇ ಏನು ಮಾಡೋದು ಎಂಬ ಚರ್ಚೆ ನಡೆಸಿದ್ದಾರಂತೆ. ಒಟ್ಟಿನಲ್ಲಿ ಜನ ಸಾಮಾನ್ಯರಿಗೆ ಕರ್ಪ್ಯೂ ವಿಧಿಸಿರೋ ಸರ್ಕಾರ ಒಂದೆಡೆಯಾದ್ರೇ ಸರ್ಕಾರವನ್ನೇ ಉಲ್ಲಂಘಿಸಿ ಪಾದಯಾತ್ರೆ ಆರಂಭಿಸಿರೋ ಕಾಂಗ್ರೆಸ್ ಇನ್ನೊಂದೆಡೆ ಏನಾಗುತ್ತೆ ಅನ್ನೋ ಆತಂಕ ಮನೆಮಾಡಿದೆ.

ಇದನ್ನೂ ಓದಿ :  ಸರಕಾರದ ಎಡವಟ್ಟು, ಹಳ್ಳಿಯತ್ತ ಹೊರಟ ಜನರು : ಹಳ್ಳಿಯಲ್ಲೂ ಕೊರೊನಾ, ಓಮಿಕ್ರಾನ್‌ ಭೀತಿ

ಇದನ್ನೂ ಓದಿ : ಸರಕಾರ – ಪೊಲೀಸ್ ಇಲಾಖೆ ಮಾಸ್ಟರ್ ಪ್ಲ್ಯಾನ್, ರಾಮನಗರಕ್ಕೆ ಕೊನೆಯಾಗುತ್ತಾ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ

(lockdown curfew for people, congress mekedatu Hiking, outrage people against Karnataka Government)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular