Lok Sabha Election 2024 : ಎಲ್ಲ ಅಂದುಕೊಂಡಂತೆ ಆದರೇ ಮಂಡ್ಯದಲ್ಲಿ ಈ ಭಾರಿ ಮಾಜಿಸಿಎಂ ಕುಮಾರಸ್ವಾಮಿ (HD Kumaraswamy) ಹಾಗೂ ಅವರ ಒಂದು ಕಾಲದ ರಾಜಕಿಯ ದ್ವೇಷಿ ಎನಿಸಿರುವ ಸುಮಲತಾ ಒಟ್ಟಿಗೆ ಪ್ರಚಾರ ಮಾಡಬಹುದು. ಆದರೆ ಹೀಗಂದುಕೊಂಡ ಬಿಜೆಪಿಗರಿಗೆ ಈಗ ಸುಮಲತಾ ತಲೆನೋವಾಗಿದ್ದಾರೆ. ನೂರು ಮನವೊಲಿಕೆಗಳ ಬಳಿಕವೂ ಸುಮಲತಾ (MP Sumalatha) ಇನ್ನೂ ತಮ್ಮ ಅಂತಿಮ ತೀರ್ಮಾನ ಪ್ರಕಟಿಸಿಲ್ಲ. ಇಷ್ಟೇ ಅಲ್ಲ ಶನಿವಾರ ಮತ್ತೊಮ್ಮೆ ಮಂಡ್ಯ (Mandya) ದಲ್ಲಿ ಸಭೆ ನಡೆಸೋದಾಗಿ ಸುಮಲತಾ ಹೇಳಿದ್ದು, ಮಂಡ್ಯದಲ್ಲಿ ಬಂಡಾಯದ ಬಾವುಟ ಹಾರಿಸ್ತಾರಾ ಸೊಸೆ ಸುಮಲತಾ ಅನ್ನೋ ಸಂಶಯ ಎಲ್ಲರನ್ನೂ ಕಾಡುತ್ತಿದೆ.

ನಟಿ ಹಾಗೂ ಸಂಸದೆ ಸುಮಲತಾ ಈಗ ಬಿಜೆಪಿಯ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ನಿರ್ಧರಿಸಿದೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಿಂದ ಗೆದ್ದ ಸಂಸದೆ ಸುಮಲತಾ ಮಾತ್ರ ಈ ಭಾರಿ ಕ್ಷೇತ್ರವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಸ್ಪರ್ಧಿಸೋದು ಖಚಿತವಾಗಿದ್ದರೂ ಇನ್ನೂ ತಮ್ಮ ಬೆಂಬಲ ಅಥವಾ ಬಂಡಾಯದ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಶನಿವಾರ ಮಂಡ್ಯದಲ್ಲಿ ಸುಮಲತಾ ಬೆಂಬಲಿಗರ ಸಭೆ ನಡೆಸೋದಾಗಿ ಹೇಳಿದ್ದು, ಅಲ್ಲೇ ಬೆಂಬಲಿಗರು ಹಾಗೂ ಅಭಿಮಾನಿಗಳ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಪ್ರಕಟಿಸೋದಾಗಿ ಹೇಳಿದ್ದಾರೆ. ಆದರೆ ಎಲ್ಲೂ ಕೂಡ ಹಾಲಿ ಅಭ್ಯರ್ಥಿಯಾಗಿರುವ ಕುಮಾರಸ್ಚಾಮಿಯವರನ್ನು ಬೆಂಬಲಿಸುವ ಮಾತನ್ನಾಡಿಲ್ಲ. ಮಂಡ್ಯವನ್ನು ಬಿಜೆಪಿ ಉಳಿಸಿಕೊಂಡಿದ್ದರೇ ನಾವು ಒಳ್ಳೆಯ ಪೈಟ್ ನೀಡಬಹುದಿತ್ತು ಎಂದು ಸುಮಲತಾ ಹೇಳಿದ್ದು, ಮಂಡ್ಯ ತಮ್ಮ ಕೈಯಿಂದ ತಪ್ಪಿದ್ದಮ್ಮೆ ಬೇಸರವಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ವಿಜಯೇಂದ್ರ್ ಖುದ್ದು ಸುಮಲತಾ ಮನೆಗೆ ತೆರಳಿದ್ದು, ಮಂಡ್ಯದಲ್ಲಿ ನಡೆಯೋ ಬಿಜೆಪಿ ಜೆಡಿಎಸ್ ಸಮನ್ವಯ ಸಭೆಗೆ ಆಹ್ವಾನಿಸಿದ್ದಾರಂತೆ. ಆದರೆ ಅಲ್ಲಿಯೂ ಮಂಡ್ಯ ಬಿಜೆಪಿ ಬೆಂಬಲಿಸುವ ತೀರ್ಮಾನ ಘೋಷಿಸಿಲ್ಲ ಎನ್ನಲಾಗಿದೆ. ಕುಮಾರಸ್ವಾಮಿ ಸ್ಪರ್ಧೆಗೆ ಸುಮಲತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ತಮ್ಮ ನಿರ್ಧಾರದ ಬಗ್ಗೆ ಅಚಲ ವಾಗಿದ್ದಾರೆ ಎನ್ನಲಾಗಿದೆ.
ಮೂಲಗಳ ಮಾಹಿತಿ ಪ್ರಕಾರ ಸುಮಲತಾ ಪ್ರತ್ಯೇಕ ಅಥವಾ ಬಂಡಾಯ ಸ್ಪರ್ಧೆಗೆ ಸಿದ್ಧವಾಗುತ್ತಿದ್ದಾರಂತೆ. ಈ ಮಾಹಿತಿಯನ್ನು ಸುಮಲತಾ ಕುಟುಂಬ ಮೂಲಗಳೇ ಖಚಿತಪಡಿಸಿವೆ. ಸುಮಲತಾಗೆ ರಾಜ್ಯ ಸಭಾ ಸದಸ್ಯತ್ವ ನೀಡಿ ಕೇಂದ್ರ ಸಚಿವ ಸ್ಥಾನ ನೀಡೋದಾಗಿ ಹೈಕಮಾಂಡ್ ಮನವೊಲಿಸಿದೆಯಂತೆ.
ಇದನ್ನೂ ಓದಿ : Lok Sabha Election 2024 : ಹನಿಮೂನ್ ನಲ್ಲೇ ಡಿವೋರ್ಸ್: ಚುನಾವಣೆ ಗೂ ಮುನ್ನವೇ ಮುರಿದುಬೀಳುತ್ತಾ ಜೆಡಿಎಸ್ -ಬಿಜೆಪಿ ಮೈತ್ರಿ
ಆದರೆ ಇದಕ್ಕೆ ಒಪ್ಪದ ಸುಮಲತಾ, ಮಂಡ್ಯ ನನ್ನ ಕರ್ಮಭೂಮಿ. ನಾನು ಅಲ್ಲಿಂದಲೇ ರಾಜಕೀಯ ಮಾಡಲು ಬಯಸುತ್ತೇನೆ. ನನ್ನ ಬದಲು ಕುಮಾರಸ್ವಾಮಿಯವರಿಗೇ ಈ ಆಫರ್ ನೀಡಿ ಅವರನ್ನೇ ರಾಜ್ಯಸಭೆಗೆ ಕಳುಹಿಸಿ. ನಾನ್ಯಾಕೆ ನನ್ನ ಸ್ಥಾನ ಬಿಟ್ಟುಕೊಡಲಿ ಎಂದು ಪಟ್ಟು ಹಿಡಿದಿದ್ದಾರಂತೆ.

ಕೊನೆಯ ಪ್ರಯತ್ನವಾಗಿ ಶನಿವಾರ ಸುಮಲತಾ ಜಿಲ್ಲೆಯ ಜನರನ್ನು ಭೇಟಿ ಮಾಡಲಿದ್ದು, ಅಲ್ಲಿ ಚರ್ಚಿಸಿದ ಬಳಿಕ ಸುಮಲತಾ ಅಂತಿಮವಾಗಿ ತಮ್ಮ ಬಂಡಾಯ ಸ್ಪರ್ಧೆಯ ನಿರ್ಧಾರ ಪ್ರಕಟಿಸಲಿದ್ದಾರಂತೆ.ಈ ಹಿಂದೆ ಪತಿ ಸಚಿವರಾಗಿದ್ದ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಲ್ಲಿ ಟಿಕೇಟ್ ದೊರೆಯದಿದ್ದಾಗ ಬಂಡಾಯ ಸ್ಪರ್ಧೆ ಮಾಡಿದ್ದರು.
ಇದನ್ನೂ ಓದಿ : ಡಿ.ಕೆ.ಸುರೇಶ್ ಗೆಲುವಿಗೆ ಕುಸುಮಾ ಹನುಮಂತರಾಯಪ್ಪ ಪಣ : ಯಾರೀವರು ? ಹಿನ್ನಲೆಯೇನು ಗೊತ್ತಾ ?
ಈ ವೇಳೆ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿಯವರ ಎಲ್ಲ ಪ್ರಯತ್ನಗಳ ಬಳಿಕವೂ ಸುಮಲತಾ ಗೆದ್ದುಬಂದಿದ್ದರು. ಈ ವೇಳೆ ಸುಮಲತಾಗೆ ಸಿನಿಮಾ ಸ್ಟಾರ್ ಗಳಾದ ದರ್ಶನ್ ಹಾಗೂ ಯಶ್ ಬೆಂಬಲ ಕೂಡ ಸಿಕ್ಕಿತ್ತು. ಆದರೆ ಈ ಭಾರಿ ಯಾವುದೇ ಬೆಂಬಲ ಸಿಗಲಿ ಬಿಡಲಿ ನನ್ನ ಕೆಲಸಗಳು ನನ್ನ ಗೆಲ್ಲಿಸಲಿವೆ ಎನ್ನುತ್ತ ಸುಮಲತಾ ಬಂಡಾಯ ಸ್ಪರ್ಧೆಗೆ ಸಿದ್ಧವಾಗಿದ್ದಾರಂತೆ.
Lok Sabha Election 2024 : BJP- JDS Alliance Trouble Sumalatha ready for contest in Mandya Constituency