ಒಂದೇ ಪಂದ್ಯದಲ್ಲಿ ಹೀರೋ ಟ್ರೆಂಡಿಂಗ್‌ ಆದ ಲಕ್ನೋ ಸೂಪರ್‌ ಜೈಂಟ್ಸ್‌ ಬೌಲರ್‌ ಮಯಾಂಕ್‌ ಯಾದವ್‌

IPL 2024  LSG Vs PBKS : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲೀಗ ಇದೀಗ ಮಯಾಂಕ್‌ ಯಾದವ್‌ ಸಖತ್‌ ಸದ್ದು ಮಾಡುತ್ತಿದ್ದಾರೆ. ಪಂಜಾಬ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಬೌಲರ್‌ ಮಯಾಂಕ್‌ ಯಾದವ್‌ (Mayank Yadav ) ಹೀರೋ ಆಗಿ ಹೊರ ಹೊಮ್ಮಿದ್ದಾರೆ.

IPL 2024  LSG Vs PBKS : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲೀಗ ಇದೀಗ ಮಯಾಂಕ್‌ ಯಾದವ್‌ ಸಖತ್‌ ಸದ್ದು ಮಾಡುತ್ತಿದ್ದಾರೆ. ಪಂಜಾಬ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌  (Lucknow Super Giants) ತಂಡದ ಬೌಲರ್‌ ಮಯಾಂಕ್‌ ಯಾದವ್‌ (Mayank Yadav ) ಹೀರೋ ಆಗಿ ಹೊರ ಹೊಮ್ಮಿದ್ದಾರೆ. ಚೊಚ್ಚಲ ಪಂದ್ಯದಲ್ಲಿಯೇ ಮಿಂಚಿರುವ ಮಯಾಂಕ್‌ ಯಾದವ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ (Social Media Trending)  ಕ್ರಿಯೇಟ್‌ ಮಾಡಿದ್ದಾರೆ.

ಐಪಿಎಲ್‌ 2024 ಆವೃತ್ತಿಯಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ನೇತೃತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಕೊನೆಗೂ ಗೆಲುವಿನ ನಗು ಬೀರಿದೆ. ಈ ಮೂಲಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಪಂಜಾಬ್‌ ಕಿಂಗ್ಸ್‌ ತಂಡದ ವಿರುದ್ದ ಲಕ್ನೋ ಭರ್ಜರಿ 21 ರನ್‌ ಗಳ ಅಂತರದಿಂದ ಗೆಲುವು ಸಾಧಿಸಿದೆ.

IPL 2024 Lucknow Super Giants bowler Mayank Yadav became the trending hero in a single match LSG vs PKBS
Image Credit to Original Source

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರ ಕಣಕ್ಕೆ ಇಳಿದಿರುವ ಮಯಾಂಕ್‌ ಯಾದವ್‌ 27ರನ್‌ ನೀಡಿ 3 ವಿಕೆಟ್‌ ಪಡೆಯುವ ಮೂಲಕ ಪಂದ್ಯಶ್ರೇಷ್ಟರಾಗಿ ಹೊರಹೊಮ್ಮಿದ್ದಾರೆ. ಪಂಜಾಬ್‌ ಕಿಂಗ್ಸ್‌ ತಂಡದ ಖ್ಯಾತ ಆಟಗಾರರಾದ ಜಾನಿ ಬೈರ್‌ಸ್ಟೋವ್, ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಿತೇಶ್ ಶರ್ಮಾ ಅವರ ವಿಕೆಟ್‌ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಕೇವಲ 21ರ ಹರೆಯದ ವೇಗಿ ಸತತವಾಗಿ 150 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿದ್ದಾರೆ.

ಮಯಾಂಕ್‌ ಯಾದವ್‌ ಒಂದು ಗಂಟೆಗೆ 155.8 ಕಿಮೀ ವೇಗದಲ್ಲಿ ಎಸೆತಗಾರಿಕೆಯನ್ನು ಮಾಡಿದ್ದು, ಈ ಎಸೆತ ಈ ಋತುವಿನ ವೇಗದ ಎಸೆತ ಅನ್ನೋ ದಾಖಲೆ ನಿರ್ಮಿಸಿದೆ. ಪಂದ್ಯದ ನಂತರ ಮಾತನಾಡಿರುವ ಮಯಾಂಕ್‌, ನಾನು ಮೊದಲ ಎಸೆತಗಳಲ್ಲಿ ನರ್ವಸ್ ಆಗಿದ್ದೇನೆ. ಆದರೆ ನಂತರದಲ್ಲಿ ಇತರರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಎಸೆತಗಾರಿಕೆಯನ್ನು ನಿಭಾಯಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : IPL 2024: ಮುಂಬೈ ಇಂಡಿಯನ್ಸ್‌ ತಂಡದಿಂದ ಹೊರಬಿದ್ದ ಬೆಂಕಿ ಬೌಲರ್‌, ಶ್ರೀಲಂಕಾದ ಈ 3 ಆಟಗಾರರು ಐಪಿಎಲ್‌ಗೆ ಅನುಮಾನ

ಇನ್ನು ಆಟಗಾರರ ಮೇಲೆ ಒತ್ತಡ ಹಾಕುವುದು, ಸ್ಟಂಪ್‌ ಮೇಲೆ ಬೌಲ್‌ ಮಾಡುವುದರ ಜೊತೆಗೆ ಸಾಧ್ಯವಾದಷ್ಟು ವೇಗದ ಎಸೆತಗಳನ್ನು ಎಸೆಯುವುದು ನನ್ನ ತಂತ್ರಗಾರಿಕೆಯಾಗಿತ್ತು. ಆರಂಭದಲ್ಲಿ ವೇಗದ ಜೊತೆಗೆ ನಿಖರತೆಯನ್ನು ಕಾಯ್ದುಕೊಂಡಿದ್ದು, ವಿಕೆಟ್‌ಗಳನ್ನು ಬಹುಬೇಗನೆ ಪಡೆಯಲು ಸಹಕಾರಿಯಾಯಿತು. ತಂಡದ ನಾಯಕ ರಾಹುಲ್‌ ಬೇಗನೆ ಬೌಲಿಂಗ್‌ ಮಾಡಲು ಸೂಚಿಸಿದರು. ಅದ್ರಲ್ಲೂ ಮೊದಲ ವಿಕೆಟ್‌ ನನ್ನ ಫೇವರೇಟ್‌ ಆಗಿತ್ತು ಎಂದು ಸಂತಸ ಹಂಚಿಕೊಂಡಿದ್ದಾರೆ.

IPL 2024 Lucknow Super Giants bowler Mayank Yadav became the trending hero in a single match LSG vs PKBS
Image Credit to Original Source

ಇದನ್ನೂ ಓದಿ : ಐಪಿಎಲ್ 2024 ಅಂಕಪಟ್ಟಿ : ಚೆನ್ನೈಗೆ ಅಗ್ರಸ್ಥಾನ, ಲಕ್ನೋ ಸೂಪರ್‌ ಜೈಂಟ್ಸ್‌ಗೆ ಕೊನೆಯ ಸ್ಥಾನ, ಇಲ್ಲಿದೇ ಸಂಪೂರ್ಣ ವಿವರ

ಕಳೆದ ಐಪಿಎಲ್‌ನಲ್ಲಿ ಗಾಯದಿಂದ ಹೊರಬಹುದು ಕಠಿಣವಾಗಿತ್ತು. ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್‌ನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ತುಡಿತವನ್ನು ಹೊಂದಿದ್ದೆ. ಇದೇ ಕಾರಣದಿಂದಲೇ ನಾನು ಗಾಯದ ಸಮಸ್ಯೆಯಿಂದ ಬಹುಬೇಗನೆ ಹೊರಗೆ ಬಂದಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ್ದಾರೆ.

ಇದನ್ನೂ ಓದಿ : Eಸಲ ಕಪ್ ನಮ್ದೆ ! ಆರ್‌ಸಿಬಿಗೆ WPL 2024 ಟ್ರೋಫಿ, ಅಭಿಮಾನಿಗಳಿಗೆ ವಿಶೇಷ ಸಂದೇಶ ಕೊಟ್ಟ ಸ್ಮೃತಿ ಮಂಧಾನ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ ಕ್ರಿಯೇಟ್‌ ಮಾಡಿರುವ ಮಯಾಂಕ್‌ ಯಾದವ್‌, ಇದುವರೆಗೆ ಒಟ್ಟು ಎರಡು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, 17 ಲಿಸ್ಟ್-ಎ ಪಂದ್ಯಗಳು ಮತ್ತು 11 T20I ಗಳು ಒಳಗೊಂಡಿವೆ. ದೆಹಲಿ ತಂಡದ ಪರ ದೇಶೀಯ ಮಟ್ಟದ ಪಂದ್ಯಗಳನ್ನು ಆಡಿದ್ದಾರೆ. 2021 ರಲ್ಲಿ ಅವರ ಲಿಸ್ಟ್-ಎ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅಲ್ಲದೇ 2022 ರಲ್ಲಿ ಅವರ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು.

IPL 2024 Lucknow Super Giants bowler Mayank Yadav became the trending hero in a single match LSG vs PKBS

Comments are closed.