Lok Sabha Election 2024 : ಶಿವಮೊಗದಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಕಾದಾಟ, ಬಿವೈ ರಾಘವೇಂದ್ರ vs ಗೀತಾ ಶಿವರಾಜ್‌ ಕುಮಾರ್‌

ಶಿವಮೊಗ್ಗ : Lok Sabha Election 2024: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಹಿಡಿದಿದೆ. ಈ ಮಧ್ಯೆ ಸದ್ದಿಲ್ಲದೇ ಲೋಕಸಭಾ ಚುನಾವಣೆಗೂ ಲೆಕ್ಕಾಚಾರ ಆರಂಭಿಸಿದ್ದು, ಮುಂದಿನ‌ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ಮಾಜಿಸಿಎಂ ಮಕ್ಕಳ ಕದನಕ್ಕೆ ಸಾಕ್ಷಿಯಾಗಲಿದೆ. ಸದ್ಯ ಬಿಜೆಪಿ ಸುಪರ್ದಿಯಲ್ಲಿರೋ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗುತ್ತಾ? ಇಂತಹದೊಂದು ಆತಂಕಕ್ಕೆ ಕಾರಣ ಆಗಿರೋದು ಕಾಂಗ್ರೆಸ್ ನ ಲೋಕಸಭಾ ಚುನಾವಣೆಯ ಲೆಕ್ಕಾಚಾರ. ಸದ್ಯ ನೀರಿಕ್ಷಿಸದಷ್ಟು ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿದಿರೋ ಕಾಂಗ್ರೆಸ್ ಶಿವಮೊಗ್ಗ (Shivamogga ) ಲೋಕಸಭಾ ಕ್ಷೇತ್ರದಲ್ಲಿ ಮಾಜಿಸಿಎಂ ಬಿಎಸ್ವೈ ಪುತ್ರ ಬಿ.ವೈ.ರಾಘವೇಂದ್ರ (BY Raghavendra ) ಗೆ ಎದುರಾಳಿಯಾಗಿ ಮತೋರ್ವ ಮಾಜಿಸಿಎಂ ಪುತ್ರಿ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಅವರನ್ನು ಕಣಕ್ಕಿಳಿಸುವ ಸಿದ್ಧತೆ ನಡೆಸಿದೆ ಎನ್ನಲಾಗ್ತಿದೆ‌.

ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಗೀತಾ ಶಿವರಾಜ್ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.ಮಾತ್ರವಲ್ಲ ತಮ್ಮ ಪತಿ ಶಿವರಾಜ್ ಕುಮಾರ್ ಜೊತೆ ಸೇರಿ ಸಹೋದರ ಮಧು ಬಂಗಾರಪ್ಪ ಹಾಗೂ ಹಲವು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕೂಡ ನಡೆಸಿದ್ದರು. ಈಗ ಬರ್ತಿರೋ ಮಾಹಿತಿ ಪ್ರಕಾರ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ನಿಂದ ಶಿವಮೊಗ್ಗ ಲೋಕಸಭೆಯ ಮುಂದಿನ ಅಭ್ಯರ್ಥಿಯಾಗಲಿದ್ದಾರಂತೆ. ಈ ವಿಚಾರ ಇನ್ನೂ ಅಧಿಕೃತವಾಗದೇ ಇದ್ದರೂ ತೆರೆಮರೆಯಲ್ಲೇ ಸಿದ್ಧತೆಯಂತೂ ನಡೆದಿದೆ.

ಸದ್ಯ ಕಾಂಗ್ರೆಸ್ ಗೆ ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆಗೆ ನಿಲ್ಲಬಹುದಾದಂತ ಹಾಗೂ ಗೆದ್ದು ಬರಬಹುದಾದಂತ ಅಭ್ಯರ್ಥಿಯ ಕೊರತೆ ಇದೆ. ಈ ಕಾರಣಕ್ಕೆ ಕಾಂಗ್ರೆಸ್ ಗೀತಾರನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದೆ. ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಗೀತಾ ಶಿವರಾಜ್ ಕುಮಾರ್ ಒಂದು ಭಾರಿ ಜೆಡಿಎಸ್ ನಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದಾರೆ. ಇದೇ ಅನುಭವದ ಮೇಲೆ ಕಾಂಗ್ರೆಸ್ ನಿಂದ ನಿಲ್ಲಿಸಿ ಗೀತಾರನ್ನು ಗೆಲ್ಲಿಸಿಕೊಳ್ಳುವ ಉತ್ಸಾಹದಲ್ಲಿದೆ ಕಾಂಗ್ರೆಸ್. ಇದನ್ನೂ ಓದಿ : Dk Shivakumar vs Siddaramaiah : ಸಿಎಂ ಮಾತ್ರವಲ್ಲ ಸಚಿವ ಸ್ಥಾನಕ್ಕೂ ಪಟ್ಟು: ಸಂಪುಟದಲ್ಲಿ ಸಿದ್ಧು ಆಪ್ತ ರಿಗೆ ಮಣೆ, ಡಿಕೆಶಿಗೆ ಹಿನ್ನಡೆ

ಇದಕ್ಕೆ ಈಗಾಗಲೇ ತಯಾರಿ ಆರಂಭಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಗೀತಾರನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಪರೋಕ್ಷವಾಗಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕಿಮ್ಮನೆ ರತ್ನಾಕರ ಹೆಗಲೇರಿಸಿದ್ದಾರೆ. ಈ ಬಗ್ಗೆ ಕಿಮ್ಮನೆ ರತ್ನಾಕರ ಅವರಿಗೆ ಪತ್ರ ಬರೆದಿರೋ ಡಿಕೆಶಿ, ಸೋಲಿಗೆ ಸಾಂತ್ವನ ಹೇಳಿದ್ದಲ್ಲದೇ, ನಿಮ್ಮ ಸೇವೆಯನ್ನು ಪಕ್ಷ ಗಮನಿಸಿದೆ. ನೀವು ಸೋಲಿಗೆ ಕಂಗೆಡದೇ ತಕ್ಷಣದಿಂದಲೇ ಜಿಲ್ಲೆಯಲ್ಲಿ ಲೋಕಸಭಾ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ಕಾರ್ಯ ಮಾಡಿ ಎಂದು ಮನವಿ ಮಾಡಿದ್ದಾರೆ. ಗೀತಾ ಕಣಕ್ಕಿಳಿಯೋದರಿಂದ ಮಾಜಿಸಿಎಂ ಬಂಗಾರಪ್ಪನವರ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಎಂಬ ಅಭಿಮಾನವೂ ಕಡೆಯಲಿದೆ ಅನ್ನೋ ವಿಶ್ವಾಸ ಕಾಂಗ್ರೆಸ್ ನದ್ದು. ಇದನ್ನೂ ಓದಿ : Praveen Nettar’s Nuthana Kumari : ಪ್ರವೀಣ್‌ ನೆಟ್ಟಾರು ಪತ್ನಿಯನ್ನು ಕೆಲಸದಿಂದ ವಜಾಗೊಳಿಸಿದ ಕಾಂಗ್ರೆಸ್‌ ಸರಕಾರ

ಅಲ್ಲದೇ ಗೀತಾರನ್ನು ಗೆಲ್ಲಿಸಿಕೊಳ್ಳುವ ಉದ್ದೇಶದಿಂದಲೇ ಇದೇ ಮೊದಲ ಸಲ ಕಾಂಗ್ರೆಸ್ ನಿಂದ ಗೆದ್ದಿದ್ದರೂ ಮಧು ಬಂಗಾರಪ್ಪ ಗೆ ಸಚಿವ ಸ್ಥಾನ ನೀಡಿದ ಕಾಂಗ್ರೆಸ್ ಲೋಕಸಭೆ ಸ್ಥಾನದ ಮೇಲೆ ಕಣ್ಣಿಟ್ಟು ಒಂದೇ ಕಲ್ಲಿಗೆ ಹಲವು ಹಕ್ಕಿ ಹೊಡೆಯುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಈ ಭಾರಿಯಾದ್ರೂ ದೊಡ್ಮನೆ ಸೊಸೆ ಸಂಸತ್ ಭವನದ ಮೆಟ್ಟಿಲೇರುತ್ತಾರಾ ಕಾದು ನೋಡಬೇಕಿದೆ.

Lok Sabha Election 2024 Fight of former chief minister’s children in Shivamogga BY Raghavendra vs Geetha Shivarajkumar

Comments are closed.