Lok Sabha Elections : ಲೋಕಸಭಾ ಅಭ್ಯರ್ಥಿ ಆಯ್ಕೆ ಸುನೀಲ್ ಹೆಗಲಿಗೆ : ಗೆಲುವಿಗಾಗಿ ಕೈಪಡೆ ಹೊಸ ತಂತ್ರ

ಬೆಂಗಳೂರು : ರಾಜ್ಯದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಈ ಅಧಿಕಾರವನ್ನು (Lok Sabha Elections) ಮುಂದಿನ ಒಂದಷ್ಟು ವರ್ಷಗಳ ಕಾಲ‌ ತನ್ನ ‌ಬಳಿಯಲ್ಲೇ ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಆರಂಭಿಸಿದೆ. ಈಗಾಗಲೇ ಐದು ಗ್ಯಾರಂಟಿಗಳ ಮೂಲಕ ಜನರ ಮನಗೆದ್ದಿರುವ ಕಾಂಗ್ರೆಸ್ ಲೋಕಸಭಾ ಎಲೆಕ್ಷನ್ ಗೆ ಅಭ್ಯರ್ಥಿ ಆಯ್ಕೆಯಲ್ಲೂ ಅತ್ಯಂತ ಜಾಣ ನಡೆ ಪ್ರದರ್ಶಿಸುವ ಮೂಲಕ ಹೆಚ್ಚಿನ ಕ್ಷೇತ್ರ ಗೆಲ್ಲುವ ಲೆಕ್ಕಾಚಾರ ಆರಂಭಿಸಿದೆ.

ಹೌದು 2019 ರಲ್ಲಿ ಬೆಂಗಳೂರಿನಲ್ಲಿ ಕೇವಲ ಒಂದು ಲೋಕಸಭಾ ಸ್ಥಾನ ಗೆದ್ದಿದ್ದ ಕಾಂಗ್ರೆಸ್ ತೀವ್ರ ಮುಜುಗರ ಎದುರಿಸಿತ್ತು.‌ ಕರ್ನಾಟಕದಾದ್ಯಂತ ಕೂಡ ಕಾಂಗ್ರೆಸ್ ಸಾಧನೆ ತೃಪ್ತಿಕರವಾಗಿರಲಿಲ್ಲ. ಹೀಗಾಗಿ 2024 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ವಿಶೇಷ ವ್ಯಕ್ತಿಯೊಬ್ಬರನ್ನು ಅಖಾಡಕ್ಕಿಳಿಸಿದೆ‌. ಕಾಂಗ್ರೆಸ್ ಗಾಗಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯನ್ನು ಸುನೀಲ್ ಕನಗೋಳ್ ನಡೆಸಲಿದ್ದಾರಂತೆ.

ಈಗಾಗಲೇ ಕಾಂಗ್ರೇಸ್‌ ಪರವಾಗಿ ಲೋಕಸಭಾ ಚುನಾವಣೆಯ ಕಣಕ್ಕಿಳಿಯುವ ಕಲಿಗಳ ಆಯ್ಕೆಯಲ್ಲಿ ತೊಡಗಿರುವ ಸುನಿಲ್ , 2019ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳ ವಿವರ ಕಲೆ ಹಾಕಿದ್ದಾರಂತೆ. ಅಭ್ಯರ್ಥಿಗಳು ಕ್ಷೇತ್ರದಲ್ಲಿ ಗಳಿಸಿರುವ ವರ್ಚಸ್ಸು, ಜನ ಸ್ಪಂದನೆ ಬಗ್ಗೆ ಸರ್ವೇ ಆರಂಭಿಸಿದ್ದಾರಂತೆ.

ಅಗತ್ಯವಿದ್ದಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡೋದಾಗಿಯೂ ಸುನೀಲ್ ಸೂಚಿಸಿದ್ದಾರಂತೆ. ಬಿಜೆಪಿ ಅಭ್ಯರ್ಥಿಗಳಿಗೆ ಸರಿಸಾಟಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಇರಬೇಕು.ಸ್ಥಳೀಯವಾಗಿ ಜನ ಸಂಪರ್ಕ ಹೊಂದಿರಬೇಕು. ಚುನಾವಣೆ ಸಲುವಾಗಿ ಆಕ್ಟೀವ್ ಆದವರಿಗೆ ಸಿಗಲ್ಲ ಕೈ ಟಿಕೆಟ್ ಎಂಬ ಮಾಹಿತಿ ಕಾಂಗ್ರೆಸ್ ವಲಯದಿಂದಲೇ ಲಭ್ಯವಾಗ್ತಿದೆ. ಇನ್ನೂ ಕಾಂಗ್ರೆಸ್ ಹೈಕಮಾಂಡ್ ಕೂಡ ಸುನೀಲ್ ಕನಗೋಳ್ ವರದಿ ಮೇಲೆ ವಿಶ್ವಾಸ ಹೊಂದಿದ್ದು ,ಕನಗೋಳ್ ಸಿದ್ದಪಡಿಸಿದ ವರದಿ ಪರಿಗಣಿಸಿ ಈ ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಇದನ್ನೂ ಓದಿ : NEP Cancelled in Karnataka : ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಎನ್‌ಇಪಿ ರದ್ದು: ಸಿಎಂ ಸಿದ್ದರಾಮಯ್ಯ

ರಾಜ್ಯ ಗೆದ್ದ ಮಾದರಿಯಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಕನಗೋಳ್ ವರದಿ ರೆಡಿ ಮಾಡಿರುವ ಕನಗೋಳ್, ಯಾರನ್ನು ನಿಲ್ಲಿಸಿದರೇ ಪಕ್ಷಕ್ಕೆ ಲಾಭವಾಗಲಿದೆ. ಯಾರ ಪರವಾಗಿ ಜನರ ಒಲವಿದೆ ಎಂಬ ಮಾಹಿತಿಗಾಗಿ ಈಗಾಗಲೇ ಗ್ರೌಂಡ್ ವರ್ಕ್ ಆರಂಭಿಸಿದ್ದು, ಇದು ಹಲವು ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿತರ ಅಸಮಧಾನಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸುನೀಲ್ ಕನಗೋಳ್ ವರದಿ ಆಧರಿಸಿ ಲೋಕಸಭಾ ಚುನಾವಣೆಯ ಟಿಕೇಟ್ ಹಂಚಿಕೆ ಮಾಡಲು ನಿರ್ಧರಿಸಿದ್ದಾರಂತೆ.

Lok Sabha Elections: Lok Sabha Candidate Selection Sunil Heglige: New strategy for victory

Comments are closed.