Maharashtra Crisis LIVE : ಅಧಿಕೃತ ನಿವಾಸ ತೊರೆದ ಸಿಎಂ ಉದ್ಬವ್ ಠಾಕ್ರೆ :‌ ಶಿಂಧೆ ತಂಡ ಸೇರಿದ ಇನ್ನೂ 3 ಶಿವಸೇನೆ ಶಾಸಕರು

ಮುಂಬೈ : ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು (Maharashtra Crisis LIVE) ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. ಶಾಸಕರು ಬಯಸಿದ್ರೆ ರಾಜೀನಾಮೆಗೆ ಸಿದ್ದ ಎಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ತಡರಾತ್ರಿ ಮಲಬಾರ್ ಹಿಲ್‌ನಲ್ಲಿರುವ ತಮ್ಮ ಅಧಿಕೃತ ನಿವಾಸ ‘ವರ್ಷ’ವನ್ನು ಖಾಲಿ ಮಾಡಿ ತಮ್ಮ ಕುಟುಂಬದೊಂದಿಗೆ ಬಾಂದ್ರಾದಲ್ಲಿರುವ ತಮ್ಮ ಖಾಸಗಿ ಮನೆ ‘ಮಾತೋಶ್ರೀ’ಗೆ ತೆರಳಿದ್ದಾರೆ. ಇನ್ನೊಂದೆಡೆ ಯಲ್ಲಿ ಬಂಡಾಯ ಶಾಸಕರ ಸಂಖ್ಯೆ ಹೆಚ್ಚುತ್ತಿದ್ದು, ಇನ್ನೂ ಮೂವರು ಶಾಸಕರು ಬಂಡಾಯ ನಾಯಕ ಏಕನಾಥ್‌ ಶಿಂಧೆ ಅವರ ಗುಂಪು ಸೇರಿಕೊಂಡಿದ್ದಾರೆ.

ಸಚಿವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶಾಸಕರು ಬಂಡಾಯ ಸಾರುತ್ತಿದ್ದಂತೆಯೇ ಅಲರ್ಟ್‌ ಆಗಿರುವ ಸಿಎಂ ಉದ್ಬವ್‌ ಠಾಕ್ರೆ ಬುಧವಾರ ಸುದ್ದಿಗೋಷ್ಠಿಯನ್ನು ನಡೆಸಿ ಯಾವುದೇ ಕ್ಷಣದಲ್ಲಿಯೂ ರಾಜೀನಾಮೆ ನೀಡಲು ಸಿದ್ದ ಎಂದಿದ್ದರು. ಸಿಎಂ ಉದ್ಬವ್‌ ಠಾಕ್ರೆ ಭಾವನಾತ್ಮಕ ಮನವಿಗೂ ಸ್ಪಂಧಿಸದ ಬಂಡಾಯ ಶಾಸಕರು ತಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ಬಂಡಾಯ ನಾಯಕ ಏಕನಾಥ ಶಿಂಧೆ ಅವರೇ ಮುಂದುವರಿಯುತ್ತಾರೆ ಎಂದು 34 ಶಾಸಕರ ಸಹಿ ಹೊಂದಿರುವ ಶಿವಸೇನೆ ಶಾಸಕಾಂಗ ಪಕ್ಷವು ಅಂಗೀಕರಿಸಿದ ನಿರ್ಣಯವನ್ನು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಕಳುಹಿಸಲಾಗಿದೆ.

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಬೆನ್ನಲ್ಲೇ ಶಿವಸೇನೆ ಏಕನಾಥ್ ಶಿಂಧೆ ಅವರನ್ನು ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿದೆ. ಆದರೂ ರೆಬೆಲ್‌ ಶಾಸಕರು ಸಿಎಂಗೆ ಟಾಂಗ್‌ ಕೊಟ್ಟಿದ್ದಾರೆ. ಪಕ್ಷದ ಸಿದ್ದಾಂತಗಳಿಗೆ ವಿರುದ್ದವಾಗಿರುವ ಪಕ್ಷಗಳಾಗಿರುವ ಎನ್‌ಸಿಪಿ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಜೊತೆಯಲ್ಲಿ ಸರಕಾರ ರಚಿಸಿದ್ದಕ್ಕಾಗಿ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನವಿದೆ ಎಂದು ಶಿವಸೇನೆ ಶಾಸಕರು ಹೇಳಿಕೊಂಡಿದ್ದಾರೆ.

ಶಿವಸೇನೆ ಶಾಸಕರ ಧಂಗೆಯಿಂದ ಕಂಗಾಲಾಗಿರುವ ಸಿಎಂ ಉದ್ಬವ್‌ ಠಾಕ್ರೆ ತಡರಾತ್ರಿ ತಮ್ಮ ಅಧಿಕೃತ ನಿವಾಸವನ್ನು ತೆರವುಗೊಳಿಸಿದ್ದಾರೆ. ಈ ಮೂಲಕ ಸಿಎಂ ಸ್ಥಾನಕ್ಕೆ ಠಾಕ್ರೆ ರಾಜೀನಾಮೆಯನ್ನು ನೀಡುವುದು ಪಕ್ಕಾ ಎನ್ನುವ ಮಾತು ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಜೊತೆಗೆ ನಿನ್ನೆ ರಾತ್ರಿ ಮತ್ತೆ ಮೂವರು ಶಾಸಕರು ಶಿವಸೇನೆಯ ಅತೃಪ್ತ ಶಾಸಕರ ಗುಂಪು ಸೇರಿಕೊಂಡಿದ್ದಾರೆ. ಅಲ್ಲದೇ ಇನ್ನೂ ಆರು ಶಾಸಕರು ಈ ಗುಂಪನ್ನು ಸೇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಸರ್ಕಾರದ ರಾಜಕೀಯ ಅಸ್ಥಿರತೆಯ ಮಧ್ಯೆ ಶಿವಸೇನೆಯ ಇನ್ನೂ ಮೂವರು ಬಂಡಾಯ ಶಾಸಕರು ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ಗೆ ತಲುಪಿದ್ದಾರೆ. ಬಂಡಾಯ ಪಾಳೆಯದ ಶಾಸಕರು ಮಹಾರಾಷ್ಟ್ರ ರಾಜ್ಯಪಾಲರಿಗೆ, ‘ಏಕನಾಥ್ ಶಿಂಧೆ ಈಗಲೂ ಶಾಸಕಾಂಗ ಪಕ್ಷದ ನಾಯಕ’ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ‘ಬಂಡಾಯ’ ಶಾಸಕರು ಏಕನಾಥ್ ಶಿಂಧೆ ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಎಂದು ಪುನರುಚ್ಚರಿಸಿದ್ದಾರೆ ಎಂದು ಹೇಳಿದ್ದಾರೆ. ಶಿಂಧೆ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.

ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಪಕ್ಷದ ತತ್ವಕ್ಕೆ ರಾಜಿ ಮಾಡಿಕೊಳ್ಳಲಾಗಿದೆ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಸಾಧಿಸುವ ಸಲುವಾಗಿ ಪಕ್ಷ ಮತ್ತು ಅದರ ನಾಯಕತ್ವವು ವ್ಯತಿರಿಕ್ತ ಸಿದ್ಧಾಂತಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಪಕ್ಷದ ತತ್ವಗಳನ್ನು ರಾಜಿ ಮಾಡಿಕೊಂಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ನಮ್ಮ ಪಕ್ಷವನ್ನು ಸೈದ್ಧಾಂತಿಕವಾಗಿ ವಿರೋಧಿಸುವ ಎನ್‌ಸಿಪಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸಿದ್ದಕ್ಕಾಗಿ ನಮ್ಮ ಪಕ್ಷದ (ಶಿವಸೇನೆ) ಕಾರ್ಯಕರ್ತರಲ್ಲಿ ಅಗಾಧ ಅಸಮಾಧಾನವಿದೆ ಎಂದಿದ್ದಾರೆ. ಇನ್ನೊಂದೆಡೆಯಲ್ಲಿ ಗುವಾಹಟಿಯಲ್ಲಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇತರ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ.

ಸಂಸದರಾಗಿ ಕಮಲ್‌ನಾಥ್‌ಗೆ ಸ್ವಂತ ಸರ್ಕಾರ ಉಳಿಸಿಕೊಳ್ಳಲಾಗಲಿಲ್ಲ: ಕಾಂಗ್ರೆಸ್ ವಿರುದ್ಧ ಶಿವರಾಜ್ ಚೌಹಾಣ್ ವಾಗ್ದಾಳಿ

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ನಡುವೆ ಪಕ್ಷದ ಹಿರಿಯ ನಾಯಕ ಕಮಲ್ ನಾಥ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವೀಕ್ಷಕರನ್ನಾಗಿ ನಿಯೋಜಿಸುವ ಕಾಂಗ್ರೆಸ್ ನಿರ್ಧಾರದ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. “ಕಾಂಗ್ರೆಸ್ ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ” ಎಂದು ಉಜ್ಜಯಿನಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಹೇಳಿದರು. “ಕಮಲ್ ನಾಥ್ (ಸಂಸದ ಕಾಂಗ್ರೆಸ್ ಮುಖ್ಯಸ್ಥ ಮತ್ತು ಮಾಜಿ ಸಂಸದ ಸಿಎಂ) ಮಹಾರಾಷ್ಟ್ರಕ್ಕೆ ಹೋಗಿದ್ದಾರೆ … ಸ್ವಂತ ಸರ್ಕಾರವನ್ನು ಉಳಿಸಲು ಸಾಧ್ಯವಾಗದ ಯಾರಾದರೂ ಹೇಗೆ ಮಧ್ಯಪ್ರದೇಶ, ಮಹಾರಾಷ್ಟ್ರ ಸರ್ಕಾರವನ್ನು ಉಳಿಸುವುದೇ?… ಕಾಂಗ್ರೆಸ್ ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ ಎಂದು ಚೌಹಾಣ್ ಹೇಳಿದರು.

ಇದನ್ನೂ ಓದಿ : Maharashtra Politics : ಮಹಾ ಸರ್ಕಾರದ ಪತನಕ್ಕೆ ಕರ್ನಾಟಕದ ಮಾಸ್ಟರ್ ಮೈಂಡ್ : ಆಫರೇಶನ್ ಕಮಲದ ಹಿಂದೆ ರಮೇಶ್‌ ಜಾರಕಿಹೊಳಿ ?

ಇದನ್ನೂ ಓದಿ : Ubhav Thackeray Government : ಮಹಾಪತನದತ್ತ ಶಿವಸೇನಾ ಸರ್ಕಾರ : ಬಂಡಾಯ ಸಾರಿದ 50 ಕ್ಕೂ ಅಧಿಕ ಶಾಸಕರು

Maharashtra Crisis LIVE CM Uddhav Thackeray Quits Official Residence, 3 More Shiv Sena Rebel MLAs Join Shinde Team

Comments are closed.