Uddhav Thackeray resigned : ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ

ಮುಂಬೈ : ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ದಿನೇ ದಿನೇ ಜಟಿಲವಾಗುತ್ತಿದೆ. ಸುಪ್ರೀಂ ಕೋರ್ಟ್ ಅವಿಶ್ವಾಸ ಮತಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray resigned ) ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ಅವಿಶ್ವಾಸ ನಿರ್ಣಯ ನಡೆಯಲಿದೆ. ಆದ್ರೆ ರಿಟ್‌ ಅರ್ಜಿಯ ವಿಚಾರಣೆಯ ಬೆನ್ನಲ್ಲೇ ನ್ಯಾಯಾಲಯದ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿತ್ತು. ಅಲ್ಲದೇ ಜುಲೈ 11 ರಂದು ಅರ್ಜಿಯ ವಿಚಾರಣೆಯ ನಡೆಯಲಿದೆ. ಈ ನಡುವಲ್ಲೇ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಏಕನಾಥ್ ಶಿಂಧೆ ಅವರು ಶಿವಸೇನೆ, ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ ಸರ್ಕಾರ ವನ್ನು ಪತನದ ಅಂಚಿಗೆ ತಳ್ಳುವ ಮೂಲಕ ಸುಮಾರು 40 (55 ರಲ್ಲಿ) ಸೇನಾ ಶಾಸಕರ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಇಂದು ಸಂವೇದನಾಶೀಲ ಮತ್ತು ಸುಸಂಸ್ಕೃತ ಮುಖ್ಯಮಂತ್ರಿಯನ್ನು ಕಳೆದುಕೊಂಡಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ಉದ್ಧವ್ ಠಾಕ್ರೆ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ರಾವುತ್, ಮಹಾರಾಷ್ಟ್ರ ಮುಖ್ಯಮಂತ್ರಿ ಅತ್ಯಂತ ಆಕರ್ಷಕವಾಗಿ ಕೆಳಗಿಳಿದರು ಎಂದು ಹೇಳಿದ್ದಾರೆ. ಸಂವೇದನಾಶೀಲ ಮತ್ತು ಸುಸಂಸ್ಕೃತ ಮುಖ್ಯಮಂತ್ರಿಯನ್ನು ಕಳೆದು ಕೊಂಡಿದ್ದೇವೆ. ವಂಚಕರು ಸುಖಾಂತ್ಯ ಕಾಣುವುದಿಲ್ಲ ಎಂದು ಇತಿಹಾಸ ಹೇಳುತ್ತದೆ ಎಂದು ರಾವುತ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Draupadi Murmu Village : ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹುಟ್ಟೂರಿಗೆ ವಿದ್ಯುತ್‌ ಭಾಗ್ಯ

ಇದನ್ನೂ ಓದಿ : udaipur murder case : ಟೈಲರ್​ ಹತ್ಯೆ ಪ್ರಕರಣ : ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಹುದ್ದೆಯಲ್ಲಿ ಬಡ್ತಿ ನೀಡಿದ ರಾಜಸ್ಥಾನ ಸಿಎಂ

Maharashtra political crisis: Uddhav Thackeray resigned as Chief Minister

Comments are closed.