supporters fighting : ಬಿ.ಕೆ.ಹರಿಪ್ರಸಾದ್‌ vs ರಮಾನಾಥ ರೈ : ಬೆಂಬಲಿಗರ ಗಲಾಟೆಗೆ ಹೈಕಮಾಂಡ್‌ ಗರಂ

ಮಂಗಳೂರು : ನಾರಾಯಣ ಗುರುಗಳ ಸ್ತಬ್ಧಚಿತ್ರ ವಿವಾದದ ಕುರಿತಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯ ವೇಳೆಯಲ್ಲಿ ಹಿರಿಯ ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್‌ ಹಾಗೂ ರಮಾನಾಥ ರೈ ಬೆಂಬಲಿಗರ ನಡುವೆ ಗಲಾಟೆ ( supporters fighting ) ನಡೆದಿದೆ. ಘಟನೆ ಪಕ್ಷದ ಕಾರ್ಯಕರ್ತರಿಗೆ ಬೇಸರ ತರಿಸಿದೆ, ಇದರ ಬೆನ್ನಲ್ಲೇ ಹೈಕಮಾಂಡ್‌ ಪಕ್ಷದ ನಾಯಕರ ವಿರುದ್ದ ಗರಂ ಆಗಿದೆ. ಅಲ್ಲದೇ ಕೆಪಿಸಿಸಿ ಹಾಗೂ ಎಐಸಿಸಿ ಘಟನೆಯ ವರದಿ ನೀಡುವಂತೆ ಕೇಳಿದೆ.

ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ಒಡೆದ ಮನೆಯಾಗಿದೆ. ಪಕ್ಷದ ನಾಯಕರ ನಡುವಲ್ಲೇ ಮುನಿಸು, ಒಳಜಗಳ ಜೋರಾಗಿದೆ. ಈ ನಡುವಲ್ಲೇ ನಾಯಕರ ಬೆಂಬಲಿಗರ ನಡುವೆ ಇಷ್ಟು ದಿನ ಗುಟ್ಟಾಗಿ ನಡೆಯುತ್ತಿದ್ದ ಕಿತ್ತಾಟ ಇದೀಗ ಬಹಿರಂಗವಾಗಿದೆ. ಕಳೆದ ಕೆಲವು ತಿಂಗಳುಗಳಿಂದಲೂ ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಮಾತು ಕೇಳಿಬರುತ್ತಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆಯಲ್ಲಿಯೂ ತಮ್ಮ ಬೆಂಬಲಿಗರಿಗೆ ಟಿಕೆಟ್‌ ಕೊಡಿಸಲು ಸಾಕಷ್ಟು ಕಸರತ್ತು ನಡೆಸಿದ್ದರು.

ಇದೀಗ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿಯೇ ಎರಡೂ ಬಣಗಳ ನಡುವೆ ಗಲಾಟೆ ನಡೆದಿದೆ. ನಾರಾಯಣಗುರುಗಳ ಸ್ತಬ್ದಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್‌ ಸಭೆಯನ್ನು ಆಯೋಜಿಸಿತ್ತು. ಇದೇ ವೇಳೆಯಲ್ಲಿಯೇ ಯುವ ಕಾಂಗ್ರೆಸ್ ಅಧ್ಯಕ್ಷ ಲೂಕಾಮನ್ (ಬಿ.ಕೆ.ಹರಿಪ್ರಸಾದ್‌ ಬಣದ ಯುವ ನಾಯಕ) ನಾರಾಯಣ ಗುರು ಸ್ತಬ್ಧಚಿತ್ರದ ಮೆರವಣಿಗೆ ಹಮ್ಮಿಕೊಂಡಿದ್ದರು. ಈ ಬಗ್ಗೆ ಸಭೆಯಲ್ಲಿ ರಮಾನಾಥ ರೈ ಬಣ ಜಿಲ್ಲಾ ಕಾಂಗ್ರೆಸ್ ಸಭೆ ನಡೆಯುವ ಹೊತ್ತಿನಲ್ಲಿ ಈ ರೀತಿಯ ಪ್ರತಿಭಟನೆ ಆಯೋಜಿಸಿರುವುದು ಸರಿಯಲ್ಲ ಎಂದು ಗಲಾಟೆ ನಡೆಸಿದೆ.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಿರಿಯ ನಾಯಕರುಗಳಾದ ಬಿಕೆ ಹರಿಪ್ರಸಾದ್ ಹಾಗೂ ರಮಾನಾಥ ರೈ ಬೆಂಬಲಿಗರ ನಡುವೆ ನಿನ್ನೆ ಗಲಾಟೆ ನಡೆದಿದ್ದು ಈ ಬಗ್ಗೆ ಹೈಕಮಾಂಡ್ ಗರಂ ಆಗಿದೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತ ಕೆಪಿಸಿಸಿ ಹಾಗೂ ಎಐಸಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ವರದಿ ಕೇಳಿದೆ. ಇನ್ನು ಜಾಥಾಕ್ಕೆ ಚಾಲನೆ ನೀಡಲು ಮಂಗಳೂರಿಗೆ ಆಗಮಿಸಿದ್ದ ಹಿರಿಯ ಕಾಂಗ್ರೆಸ್‌ ಮುಖಂಡ ಡಾ.ಜಿ.ಪರಮೇಶ್ವರ್‌ ಅವರು ಕೂಡ ಕಾಂಗ್ರೆಸ್‌ ಯುವ ನಾಯಕರಿಗೆ ಹಾಗೂ ಹಿರಿಯ ನಾಯಕರಿಗೆ ಒಂದಿಷ್ಟು ಕಿವಿಮಾತುಗಳು ಹೇಳಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಒಂದು ಕಾಲದಲ್ಲಿ ಕರಾವಳಿ ಭಾಗದಲ್ಲಿ ಪ್ರಾಬಲ್ಯ ಮೆರೆದಿದ್ದ ಕಾಂಗ್ರೆಸ್‌ ಪಕ್ಷದಲ್ಲೀಗ ನಾಯಕರ ನಡುವಿನ ಕಿತ್ತಾಟ ಪಕ್ಷಕ್ಕೆ ಭಾರೀ ಹಿನ್ನಡೆಯಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಇದನ್ನೂ ಓದಿ : ಶಾಲೆ ಕಾಲೇಜು 15-20 ದಿನ ಬಂದ್‌ ಮಾಡಿ : ನೈಟ್‌ ಕರ್ಪ್ಯೂಯಿಂದ ಜನಜೀವನಕ್ಕೆ ತೊಂದರೆ : ಎಚ್.ಡಿ.ಕುಮಾರಸ್ವಾಮಿ

ಇದನ್ನೂ ಓದಿ : ಬಿಜೆಪಿ ಗೂಡು ತೊರೆದ್ರಾ 20 ಶಾಸಕರು : ಸಿದ್ಧವಾಯ್ತು ಡಿಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್

ಇದನ್ನೂ ಓದಿ : Opinion: ಡಿ ಕೆ ಶಿವಕುಮಾರ್ ಅವರು ಪಾದಯಾತ್ರೆಯ ವೇಳೆ ತೂರಾಡಲು Vertigo ಸಮಸ್ಯೆಯೂ ಕಾರಣವಾಗಿರಬಹುದು

(BK Hariprasad vs Ramanatha Rai supporters fighting in Dakshin kannada congress office, kpcc and aicc warning to congress leaders)

Comments are closed.