ಮಂಡ್ಯ : Melukote MLA C.S. Puttaraju : ಮೇಲುಕೋಟೆ ಶಾಸಕ ಸಿ.ಎಸ್ ಪುಟ್ಟರಾಜು ತಮ್ಮ ಮೇಲೆ ಸಂಸದೆ ಸುಮಲತಾ ಅಂಬರೀಶ್ ಹೊರಿಸಿರುವ ಕಮಿಷನ್ ಆರೋಪದ ಕುರಿತಂತೆ ಗುಡುಗಿದ್ದು ಆಣೆ ಪ್ರಮಾಣದ ಸವಾಲನ್ನು ಒಪ್ಪಿಕೊಂಡಿದ್ದಾರೆ. ಮೇಲುಕೋಟೆಯ ಸನ್ನಿಧಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸುಮಲತಾ ನಿಗದಿ ಮಾಡಿದ ದಿನಾಂಕದಂದು ನಾನು ಆಣೆ ಪ್ರಮಾಣ ಮಾಡಲು ತಯಾರಿದ್ದೇನೆ. ಶಾಸಕನಾಗಿ ನಾನು ಸದನದಲ್ಲಿ ಯಾವ ರೀತಿ ಮಾತನಾಡಿದ್ದೇನೆ ಅನ್ನೋದನ್ನು ಸುಮಲತಾ ಇತಿಹಾಸ ತೆಗೆದು ನೋಡಲಿ ಎಂದು ಗುಡುಗಿದ್ದಾರೆ.
ಜನ ಸುಮಲತಾರನ್ನು ಅಂಬರೀಶ್ ಪತ್ನಿ ಎಂಬ ಕಾರಣಕ್ಕೆ ಗೆಲ್ಲಿಸಿದ್ದಾರೆ. ಇವರನ್ನು ಮಂಡ್ಯ ಜನತೆ ಆಯ್ಕೆ ಮಾಡಿದ್ದು ಕೆಲಸ ಮಾಡಲಿ ಅಂತಾ. ಸುಮಲತಾರ ಟಾರ್ಗೆಟ್ ಜೆಡಿಎಸ್. ಜೆಡಿಎಸ್ ನಾಯಕರ ವಿರುದ್ಧ ಮಾತನಾಡಿ ತಾನು ಹೀರೋ ಆಗಬೇಕು ಎಂಬ ಬಯಕೆ ಇವರದ್ದು, ಮಾತನಾಡಿದ ಕೂಡಲೇ ನಾನು ದೊಡ್ಡ ಲೀಡರ್ ಆಗ್ತೇನೆ ಎಂದುಕೊಂಡಿದ್ದರೆ ಅದನ್ನು ಈಗಲೇ ಬಿಡಿ. ಗೌರವದಿಂದ ರಾಜಕಾರಣ ಮಾಡಿ ಎಂದು ಕಿವಿ ಹಿಂಡಿದ್ದಾರೆ.
ನನ್ನ ವ್ಯಕ್ತಿತ್ವ ಏನು ಅನ್ನೋದು ಅಂಬರೀಶ್ಗೆ ಗೊತ್ತು. ಅಂಬರೀಶ್ ಚುನಾವಣೆಯಲ್ಲಿ ನಿಂತ ಸಂದರ್ಭದಲ್ಲಿ ನಾನು ಹಣ ಹಾಕಿದ್ದೆ. ನನ್ನ ಹಾಗೂ ಅಂಬರೀಶ್ ಸಂಬಂಧ ಎಂತದ್ದು ಅನ್ನೋದನ್ನು ಇವರು ರಾಕ್ಲೈನ್ಗೆ ಹೋಗಿ ಕೇಳಲಿ. ಅಂಬರೀಶ್ ಕುಟುಂಬ ಸೇರಿದಂತೆ ಜಿಲ್ಲೆಯ ಎಲ್ಲಾ ರಾಜಕಾರಣಿಗಳು ಮೂಡಾ ಸೈಟ್ ಪಡೆದಿದ್ದಾರೆ.ಇದೇ ವಿಚಾರವಾಗಿ ನನ್ನ ಮೇಲೆ ಕೋರ್ಟ್ ಕೇಸಿದೆ. ಅವರ ಬಳಿ ನನ್ನ ವಿರುದ್ಧ ದಾಖಲೆಗಳಿದ್ದರೆ ತರಲಿ. ನಮ್ಮ ಬಳಿಯೂ ದಾಖಲೆಗಳಿವೆ. ಅವರ ಕುಟುಂಬವೂ ಮೂಡಾ ಸೈಟ್ ಪಡೆದಿದೆ. ಚುನಾವಣೆ ಬಂದಾಗ ಈ ಸೈಟ್ ವಿಚಾರ ಹೊರ ತೆಗೆಯುತ್ತಾರೆ. ಇದೊಂದು ದೊಡ್ಡ ಷಡ್ಯಂತ್ರ ಎಂದಿದ್ದಾರೆ.
ನಾನು ಚೆಲುವನಾರಾಯಣ ಸ್ವಾಮಿ ಸನ್ನಿಧಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಮೂಡಾ ಸೈಟ್ ವಿಚಾರದಲ್ಲಿ ಕೋರ್ಟ್ ತೀರ್ಪು ನಮ್ಮ ಪರ ಇರಲಿದೆ. ಅಜಾತ ಶತ್ರು ಅಂಬೀರಶಣ್ಣನ್ನನ್ನು ನೆನೆದು ಸುಮಲತಾ ಕೆಲಸ ಮಾಡಲಿ. ಈ ರೀತಿ ಲಘು ಮಾತು ಅವರಿಗೆ ಶೋಭೆ ತರಲ್ಲ. ನನ್ನ ಸ್ವಂತ ಹಣದಿಂದ ನಾನು ಕ್ಷೇತ್ರದ ಜನತೆ ಸೇವೆ ಮಾಡಿದ್ದೇನೆ. ರಾಜಕೀಯ ಜೀವನದಲ್ಲಿ ಸಂಪಾದನೆ ಮಾಡಿದ್ದಕ್ಕಿಂತ ಕಳೆದುಕೊಂಡಿದ್ದು ಹೆಚ್ಚು. ಅವರ ಬಳಿ ದಾಖಲೆಗಳಿದ್ದರೆ ತರಲಿ . ನಾನು ಚರ್ಚೆಗೆ ಸಿದ್ಧ ಎಂದಿದ್ದಾರೆ.
ಇದನ್ನು ಓದಿ : Ambulance driver :41 ಗಂಟೆಯಲ್ಲಿ 2700 ಕಿ.ಮೀ ಆಂಬ್ಯುಲೆನ್ಸ್ ಚಾಲನೆ ಮಾಡಿ ರೋಗಿಯನ್ನು ಸುರಕ್ಷಿತವಾಗಿ ತಲುಪಿಸಿದ ಅಂಬ್ಯುಲೆನ್ಸ್ ಚಾಲಕ
ಇದನ್ನೂ ಓದಿ : Team India New Jersey : ಟಿ20 ವಿಶ್ವಕಪ್: ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಣ; ಹೊಸ ಲುಕ್ ಸೂಪರ್
Melukote MLA C.S. Puttaraju accepted Sumaltar’s Oath – scale challenge