ಬಾಗಲಕೋಟೆ :Minister CC Patil : ಪ್ರಧಾನಿ ಮೋದಿ ಜನ್ಮದಿನದಂದು ಎಂಟು ನಮೀಬಿಯಾ ಚಿರತೆಗಳನ್ನು ಭಾರತಕ್ಕೆ ಕರೆಸಿಕೊಂಡ ವಿಚಾರವಾಗಿ ಮಾತನಾಡಿದ ಸಚಿವ ಸಿ.ಸಿ ಪಾಟೀಲ್, ನಮ್ಮ ದೇಶದ ಪ್ರಧಾನಿ ಹುಟ್ಟುಹಬ್ಬಕ್ಕಾಗಿ ಆಫ್ರಿಕಾದಿಂದ ಎಂಟು ಚಿರತೆಗಳನ್ನು ಕಳುಹಿಸಿಕೊಟ್ಟ ಆಫ್ರಿಕಾ ದೇಶದ ಆಡಳಿತ ವರ್ಗಕ್ಕೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ವಿದೇಶದವರು ಕೂಡ ಮೋದಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಗಳನ್ನು ನೀಡುತ್ತಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ನಾನು ಅಲ್ಪ ಕಾಲ ಅರಣ್ಯ ಸಚಿವನಾಗಿ ಕೆಲಸ ಮಾಡಿದ್ದೇನೆ. ಹುಲಿ ಸಂತತಿಯಲ್ಲಿ ನಮ್ಮ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಆದರೆ ಅಂಕಿ ಅಂಶಗಳ ಲೋಪದಿಂದಾಗಿ ಸರ್ಕಾರಿ ದಾಖಲೆಗಳಲ್ಲಿ ಮಧ್ಯ ಪ್ರದೇಶದಲ್ಲಿ ಹೆಚ್ಚು ಹುಲಿಗಳಿವೆ ಎಂದು ತೋರಿಸಲಾಗಿದೆ. ಆದರೆ ಮೊದಲೇ ಸ್ಥಾನದಲ್ಲಿರೋದು ಕರ್ನಾಟಕ. ಚಿರತೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿತ್ತು. ಆದರೆ ಈಗ ಬಂದಿರುವ ಎಂಟು ಚಿರತೆಗಳ ಸಂತಾನ ಭಾಗ್ಯದ ಮೂಲಕ ಚೀತಾಗಳ ವಂಶಾವಳಿಯನ್ನು ಹೆಚ್ಚಿಸಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಈಶ್ವರಪ್ಪರನ್ನು ಪುನಃ ಸಂಪುಟಕ್ಕೆ ಮರಳಿ ಸೇರಿಸಿಕೊಳ್ಳುವ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಇದು ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ನಾನೇನು ಹೇಳಲು ಸಾಧ್ಯವಿಲ್ಲ ಎಂದು ಮಾರ್ಮಿಕ ಉತ್ತರ ನೀಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಕಾಲದ ಹಗರಣಗಳನ್ನು ತನಿಖೆಗೆ ಒಳಪಡಿಸುವ ವಿಚಾರವಾಗಿ ಇದೇ ವೇಳೆ ಮಾತನಾಡಿದ ಅವರು. ಹಾವು ಅವರ ಬುಟ್ಟಿಯಲ್ಲೂ ಇದೆ, ನಮ್ಮ ಬುಟ್ಟಿಯಲ್ಲೂ ಇದೆ. ಅವರ ಬುಟ್ಟಿಯಲ್ಲಿ ಇರೋಕಿಂತ ಚೋಲೋ ಹಾವನ್ನು ನಾವು ಬಿಡುತ್ತೇವೆ . ಸಿದ್ದರಾಮಯ್ಯ ಸುಮ್ಮನಿದ್ದರೆ ನಾವು ಸುಮ್ಮನಿರ್ತೇವೆ. ಅವರು ನಮ್ಮ ಮೇಲೆ ಆರೋಪ ಮಾಡಿದರೆ ನಾವೂ ಕೆಣುತ್ತೇವೆ ಎಂದು ಹೇಳುವ ಮೂಲಕ ನೀವು ಭ್ರಷ್ಟಾಚಾರದ ವಿಚಾರವನ್ನು ಎತ್ತಬೇಡಿ. ನಾವೂ ನಿಮ್ಮ ಅಕ್ರಮಗಳನ್ನು ಬಯಲಿಗೆಳೆಯೋದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿರೋಧ ಪಕ್ಷದ ಜೊತೆಯಲ್ಲಿ ಸಚಿವ ಸಿ.ಸಿ ಪಾಟೀಲ್ ಡೀಲ್ ಮಾಡಿಕೊಳ್ಳಲು ಮುಂದಾಗಿದ್ದಾರಾ ಎಂಬ ಅನುಮಾನ ಮೂಡಿದೆ.
ಇದನ್ನು ಓದಿ : Sanju Samson: ಸಂಜು ಸ್ಯಾಮ್ಸನ್ ಬಾಯಿಗೆ ತುಪ್ಪ ಸವರಿದ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ
ಇದನ್ನೂ ಓದಿ : Vinay Kumar : MI ಎಮಿರೇಟ್ಸ್ ತಂಡಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ಬೌಲಿಂಗ್ ಕೋಚ್
Minister CC Patil wants to make a deal with the opposition on the issue of corruption