Johnson’s baby powder :ಜಾನ್ಸನ್‌ ಬೇಬಿ ಪೌಡರ್‌ ಲೈಸೆನ್ಸ್ ರದ್ದು ಮಾಡಿದ ಮಹಾರಾಷ್ಟ್ರ

ಮಹಾರಾಷ್ಟ್ರ :(Johnson’s baby powder) ನವಜಾತ ಶಿಶುಗಳ ಚರ್ಮದ ಮೇಲೆ ಜಾನ್ಸನ್‌ ಬೇಬಿ ಫೌಡರ್‌ ಗಂಭೀರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಆಡಳಿತವು ಮಹಾರಾಷ್ಟ್ರದ ಥಾಣೆಯ ಮುಲುಂಡ್ ನಲ್ಲಿರುವ ಜಾನ್ಸನ್‌ ಪ್ರೈವೇಟ್‌ ಲಿಮಿಟೆಡ್‌ ನ ಬೇಬಿ ಪೌಡರ್‌ ಉತ್ಪಾದನ ಪರವಾನೆಯನ್ನು ರದ್ದುಗೊಳಿಸಿದೆ.

(Johnson’s baby powder)ಉತ್ಪನ್ನವು ಕಡ್ಡಾಯ ಮಿತಿಗಿಂತ ಹೆಚ್ಚಿನ ಪಿಹೆಚ್ (PH)ಮೌಲ್ಯವನ್ನು ಹೊಂದಿದೆ ಎಂಬ ಅಂಶವು ಪ್ರಯೋಗಾಲಯದ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಈ ಕಾರಣದಿಂದಾಗಿ ಜಾನ್ಸ್ ನ್‌ ಪೌಡರ್‌ ಉತ್ಪಾದನ ಮತ್ತು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಕೋಲ್ಕತ್ತಾ ಮೂಲದ ಸೆಂಟ್ರಲ್‌ ಡ್ರಗ್ಸ್‌ ಲ್ಯಾಬೋರೆಟರಿಯ ನಿರ್ಣಾಯಕ ವರದಿಯ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.ಗುಣಮಟ್ಟದ ತಪಾಸಣೆಯ ಉದ್ದೇಶವನ್ನಿಟ್ಟುಕೊಂಡು ಎಫ್‌ಡಿಎ(FDA) ಮುಂಬೈ, ಪುಣೆ ಮತ್ತು ನಾಸಿಕ್‌ ನಿಂದ ಜಾನ್ಸನ್‌ ಬೇಬಿ ಪೌಡರ್‌ ನ ಮಾದರಿಗಳನ್ನು ಪಡೆದುಕೊಳ್ಳಲಾಗಿತ್ತು. ಇದು ಕೂಡ ಪ್ರಮಾಣಿತ ಗುಣಮಟ್ಟವನ್ನು ಹೊಂದಿಲ್ಲ. ಪರೀಕ್ಷೆಗಾಗಿ ಬಿಡಿಸಿದ ಮಾದರಿಯು “ಐಎಸ್‌ 5339:2004 ರಷ್ಟು ನಿರ್ದಿಷ್ಟತೆಯನ್ನುಪಡೆಯದ ಕಾರಣದಿಂದಾಗಿ ಅದು ಶಿಶುಗಳಿಗೆ ಸ್ಕಿನ್‌ ಗೆ ಯೋಗ್ಯವಾಗಿಲ್ಲ ಎಂದು ಘೋಷಿಸಿದೆ.

ಇದನ್ನೂ ಓದಿ:ಪ್ರಧಾನಿ ಮೋದಿಯವರ 5 ಆರೋಗ್ಯಕರ ಜೀವನಶೈಲಿ ಪದ್ಧತಿಗಳು

ಇದನ್ನೂ ಓದಿ:ವಿಶ್ವ ವಿಖ್ಯಾತ ಮೈಸೂರು ದಸರಾ- ಯುವ ಸಂಭ್ರಮಕ್ಕೆ ಚಾಲನೆ

ಇದನ್ನೂ ಓದಿ:ಪುನೀತ್​ ರಾಜ್​ಕುಮಾರ್​ ಜನ್ಮದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸಲು ಸರ್ಕಾರದ ನಿರ್ಧಾರ

ಇದನ್ನೂ ಓದಿ: ಸರ್ಕಾರಿ ಸರ್ವರ್ ಹ್ಯಾಕ್ ಮಾಡಿ ನಕಲಿ ಆರ್.ಟಿ.ಸಿ ಸೃಷ್ಟಿ ಮಾಡ್ತಿದ್ದ ಗ್ಯಾಂಗ್ ಅಂದರ್

(FDA)ಎಫ್ ಡಿಎ ಡ್ರಗ್ಸ್‌ ಕಾಸ್ಮೆಟಿಕ್ಸ್‌ ಆಕ್ಟ್ 1940 ರ ನಿಯಮಗಳ ಅಡಿಯಲ್ಲಿ ನೋಟಿಸ್‌ ನೀಡಲಾಗಿತ್ತು, ಜೊತೆಗೆ ಮಾರುಕಟ್ಟೆಯಿಂದ ಉತ್ಪನ್ನಗಳನ್ನು ಹಿಂಪಡೆಯಲು ಕಂಪನಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಈ ಸಂಸ್ಥೆಯು ಇದನ್ನು ಒಪ್ಪುತ್ತಿಲ್ಲ ಪ್ರಯೋಗಾಲಯಕ್ಕೆ ಪರೀಕ್ಷಿಸಲು ಕಳುಹಿಸಿದಕ್ಕಾಗಿ ಇದನ್ನು ನ್ಯಾಯಲಯದಲ್ಲಿ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.ಕಳೆದ ಹಲವು ವರ್ಷಗಳಿಂದಲೂ ಜಾನ್ಸನ್‌ ಫೌಡರ್‌ ವಿರುದ್ದ ಅಪಸ್ವರ ಕೇಳಿಬಂದಿದೆ. ಇದೀಗ ಮಹಾರಾಷ್ಟ್ರದಲ್ಲಿ ಜಾನ್ಸನ್‌ ಬೇಬಿ ಫೌಡರ್‌ ಉತ್ಪಾದನಾ ಘಟಕವನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.

Johnson’s baby powder cancel license in Maharashtra

Comments are closed.