ಮಂಗಳವಾರ, ಏಪ್ರಿಲ್ 29, 2025
HomepoliticsMLA Basana Gowda Patil Yatnal : ಮಂತ್ರಿ ಸ್ಥಾನಕ್ಕೆ ಕ್ಷೇತ್ರ ಬಿಟ್ಟು ವರಿಷ್ಠರ ಮನೆ...

MLA Basana Gowda Patil Yatnal : ಮಂತ್ರಿ ಸ್ಥಾನಕ್ಕೆ ಕ್ಷೇತ್ರ ಬಿಟ್ಟು ವರಿಷ್ಠರ ಮನೆ ಅಲೆಯಬೇಕು : ಬಸನಗೌಡ ಪಾಟೀಲ್​ ಯತ್ನಾಳ್​

- Advertisement -

ರಾಯಚೂರು : MLA Basana Gowda Patil Yatnal : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸಚಿವ ಸ್ಥಾನದ ಬಗ್ಗೆ ಮಾತುಗಳನ್ನಾಡಿದ್ದಾರೆ. ರಾಯಚೂರಿನದ ದೇವನ ದುರ್ಗದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿ ಉಳಿದಿದೆ. ಹೀಗಿರುವಾಗ ಪಕ್ಷದ ವರಿಷ್ಠರು ಸಚಿವ ಸ್ಥಾನ ನೀಡಿದರೂ ಸಹ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.


ಮಂತ್ರಿ ಸ್ಥಾನ ಪಡೆಯಬೇಕು ಅಂದರೆ ನಮ್ಮ ಕ್ಷೇತ್ರವನ್ನು ಬಿಟ್ಟು ಪ್ರತಿ ದಿನ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ಮನೆಗೆ ಅಲೆದಾಡಬೇಕು. ಮಂತ್ರಿ ಸ್ಥಾನದ ಆಸೆ ಇರುವವರು ಪಾಪ ಪ್ರತಿ ದಿನ ಹೋಗಿ ವರಿಷ್ಠರ ಮನೆ ಕಾಯುತ್ತಾರೆ. ಸಚಿವ ಸ್ಥಾನ ಬೇಕು ಅಂದರೆ ದೆಹಲಿಗೂ ಅಲೆದಾಡಬೇಕು. ಅವರನ್ನು ಭೇಟಿಯಾಗಬೇಕು, ಇವರನ್ನು ಭೇಟಿಯಾಗಬೇಕು ಎಂದು ಹೇಳಿದರು.

ಮಂತ್ರಿ ಆಗುವುದಕ್ಕಿಂತಲೂ ಹೆಚ್ಚು ಅಧಿಕಾರದಲ್ಲಿ ನಾವಿದ್ದೇವೆ .ಮುಖ್ಯಮಂತ್ರಿಗಳು ಏನು ನಮ್ಮ ಕೆಲಸ ಮಾಡಬೇಕು ಎಲ್ಲಾ ಮಾಡುತ್ತಿದ್ದಾರೆ, ಹಿಂಗಾಗಿ ಮಂತ್ರಿಗಿರಿ ಏಕೆ ಬೇಕು..? ಒಂದು ವೇಳೆ ಈಗ ಮಂತ್ರಿಯಾದರೂ ಅದರಿಂದ ಯಾವುದೇ ಉಪಯೋಗವಿಲ್ಲ. ಏಕೆಂದರೆ ಆರು ತಿಂಗಳ ಅವಧಿಯಲ್ಲಿ ಏನು ಮಾಡಲೂ ಸಾಧ್ಯವಿಲ್ಲ. ಎಲ್ಲಾ ನಿಗಮ ಮಂಡಳಿಗಳನ್ನು ವಿಸರ್ಜನೆ ಮಾಡಿ ಈ ಅವಧಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ಕೊಡಬಹುದಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.


ಮುಂದಿನ ರಾಜ್ಯ ವಿಧಾನಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು. ನಾವು ಮುಂದಿನ ಚುನಾವಣೆಯನ್ನು ಪ್ರಧಾನಿ ಮೋದಿಯವರ ಹೆಸರಿನಲ್ಲಿ ಎದುರಿಸುತ್ತೇವೆ. ಹಾಗೂ ಅವರ ಹೆಸರಿನಲ್ಲಿಯೇ ಮುಂದೆ ಬರುತ್ತೇವೆ. ರಾಜ್ಯ ನಾಯಕರ ಬಗ್ಗೆ ನಾನೇನು ಹೇಳುವುದಿಲ್ಲ. ನಮಗೆ ನರೇಂದ್ರ ಮೋದಿ ನಾಯಕತ್ವ ಮಾತ್ರ ಮುಖ್ಯ ಎಂದು ಹೇಳಿದರು.

ಇದನ್ನು ಓದಿ : Jothe Jotheyali Serial :ಮುಕ್ತಾಯವಾಗುತ್ತಿದೆಯಾ ‘ಜೊತೆ ಜೊತೆಯಲಿ’ ಧಾರವಾಹಿ : ಸುಳಿವು ಬಿಚ್ಚಿಟ್ಟಿದೆ ಈ ವಿಡಿಯೋ

ಇದನ್ನೂ ಓದಿ :Cruiser Accident 7 dies : ಕ್ರೂಸರ್ ಪಲ್ಟಿ 7 ಜನರು ಸ್ಥಳದಲ್ಲೇ ದುರ್ಮರಣ‌, ಮೂವರ ಸ್ಥಿತಿ ಚಿಂತಾಜನಕ

MLA Basana Gowda Patil Yatnal’s statement about ministerial post

RELATED ARTICLES

Most Popular