Rahul Dravid celebrate : ರಾಹುಲ್ ದ್ರಾವಿಡ್ ಯಾವತ್ತಾದ್ರೂ ಈ ರೀತಿ ಸಂಭ್ರಮಿಸಿದ್ದನ್ನು ನೋಡಿದ್ದೀರಾ ?

ಎಡ್ಜ್’ಬಾಸ್ಟನ್: ಕ್ರಿಕೆಟ್ ಜಗತ್ತು ಕಂಡದ ಅತ್ಯಂತ ಸ್ಥಿತಪ್ರಜ್ಞ ವ್ಯಕ್ತಿ ಯಾರಾದ್ರೂ ಇದ್ರೆ ಅದು ‘ದಿ ಗ್ರೇಟ್ ವಾಲ್ ಆಫ್ ಇಂಡಿಯಾ’ ಖ್ಯಾತಿಯ ರಾಹುಲ್ ದ್ರಾವಿಡ್. ಸರ್ವಶ್ರೇಷ್ಠ ಆಟಗಾರನಾಗಿ, ನಾಯಕನಾಗಿ, ಭಾರತ ತಂಡದ ತರಬೇತುದಾರನಾಗಿ.. ಹೀಗೆ ಯಾವುದೇ ಪಾತ್ರದಲ್ಲೂ ದ್ರಾವಿಡ್ ತಮ್ಮ ಭಾವನೆಗಳನ್ನು ತೋರಿಸಿಕೊಂಡವರಲ್ಲ. ಅಬ್ಬರದ ಸಂಭ್ರಮ ಆಚರಿಸಿದವರಲ್ಲ. ಆದರೆ ಅದೇ ದ್ರಾವಿಡ್ ಈಗ ಎಡ್ಜ್’ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ರಿಷಭ್ ಪಂತ್ ಶತಕ ಬಾರಿಸುತ್ತಿದ್ದಂತೆ ಸಂಭ್ರಮಿಸಿದ (Rahul Dravid celebrate) ರೀತಿಯನ್ನು ನೋಡಿ ಕ್ರಿಕೆಟ್ ಜಗತ್ತೇ ಅಚ್ಚರಿ ಪಟ್ಟಿದೆ.

ಟೀಮ್ ಇಂಡಿಯಾ ಕೋಚ್ ದ್ರಾವಿಡ್ ಅವರ ಈ ಸಂಭ್ರಮಕ್ಕೆ ಕಾರಣವಿದೆ. ಶುಕ್ರವಾರ ಶುರುವಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಎದುರಿಸಿತ್ತು. 98 ರನ್ ಗಳಿಸುವಷ್ಟರಲ್ಲಿ ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಪೆವಿಲಿಯನ್ ಸೇರಿಕೊಂಡಾಗಿತ್ತು. ಆ ಸಂದರ್ಭದಲ್ಲಿ ಕ್ರೀಸ್’ಗಿಳಿದಿದ್ದ ವಿಕೆಟ್ ಕೀಪರ್ ರಿಷಭ್ ಪಂತ್, ಕೌಂಟರ್ ಅಟ್ಯಾಕ್ ನಡೆಸಿ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಚಿಂದಿ ಉಡಾಯಿಸಿದ್ದರು.

ಕೇವಲ 89 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ್ದ ಪಂತ್, ಅಂತಿಮವಾಗಿ 111 ಎಸೆತಗಳಲ್ಲಿ 20 ಬೌಂಡರಿ ಮತ್ತು 4 ಸಿಕ್ಸರ್ಸ್ ನೆರವಿನಿಂದ ಸಿಡಿಲಬ್ಬರದ 146 ರನ್ ಗಳಿಸಿದ್ದರು. ಅಷ್ಟೇ ಅಲ್ಲ, 6 ವಿಕೆಟ್’ಗೆ ಆಲ್ರೌಂಡರ್ ರವೀಂದ್ರ ಜಡೇಜ ಜೊತೆ ದ್ವಿಶತಕದ ಜೊತೆಯಾಟ(222 ರನ್) ಆಡಿ ತಂಡಕ್ಕೆ ಆಸರೆಯಾಗಿದ್ದರು. ತಂಡ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ರಿಷಭ್ ಪಂತ್ ಅಪದ್ಬಾಂಧವನಂತೆ ನಿಂತು ಆಡಿ ಬಾರಿಸಿದ ಶತಕ ಕೋಚ್ ರಾಹುಲ್ ದ್ರಾವಿಡ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಕಾರಣದಿಂದ ರಿಷಭ್ ಪಂತ್ ಶತಕವನ್ನು ದ್ರಾವಿಡ್ ಈ ರೀತಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : ಟೀಮ್ ಇಂಡಿಯಾ ಹೊಸ ಕ್ಯಾಪ್ಟನ್ ಬುಮ್ರಾಗೆ ಧೋನಿಯೇ ಸ್ಫೂರ್ತಿ

ಇದನ್ನೂ ಓದಿ : Ravi Shastri : ಒಂದೇ ಸರಣಿ… 2 ಟೂರ್… ಹೊಸ ಅವತಾರದಲ್ಲಿ ಟೀಮ್ ಇಂಡಿಯಾ ಮಾಜಿ ಕೋಚ್ ಶಾಸ್ತ್ರಿ

Have you ever seen Rahul Dravid celebrate like this?

Comments are closed.