Renukacharya shed tears : ಯಡಿಯೂರಪ್ಪರನ್ನು ಕಂಡು ಗಳಗಳನೇ ಕಣ್ಣೀರಿಟ್ಟ ಶಾಸಕ ರೇಣುಕಾಚಾರ್ಯ

ದಾವಣೆಗೆರೆ : Renukacharya shed tears : ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪರಿಗೆ ಅಪಾರ ಅಭಿಮಾನಿ ಬಳಗವಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಭಿಮಾನಿ ಗಳು ಮಾತ್ರವಲ್ಲದೇ ಇವರ ಗರಡಿಯಲ್ಲೇ ಬೆಳೆದ ಅನೇಕ ನಾಯಕರೂ ಸಹ ಇದ್ದಾರೆ. ನಿನ್ನೆ ಶಿಕಾರಿಪುರದಲ್ಲಿ ಮಾತನಾಡಿದ್ದ ಯಡಿಯೂರಪ್ಪ ಮುಂದಿನ ಚುನಾವಣೆ ಯಲ್ಲಿ ತಾವು ಸ್ಪರ್ಧಿಸುತ್ತಿಲ್ಲ ಎಂಬ ವಿಚಾವರನ್ನು ಸ್ಪಷ್ಟ ಪಡಿಸಿದ್ದರು. ಅಲ್ಲದೇ ತಮಗೆ ರಾಜಕೀಯ ಜನ್ಮ ನೀಡಿದ್ದ ಶಿಕಾರಿಪುರ ಕ್ಷೇತ್ರವನ್ನು ಪುತ್ರ ಬಿ.ವೈ ವಿಜಯೇಂದ್ರರಿಗೆ ಬಿಟ್ಟು ಕೊಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಬಿ.ಎಸ್​ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬ ವಿಚಾರವಾಗಿ ಶಾಸಕ ರೇಣುಕಾಚಾರ್ಯ ಕಣ್ಣೀರು ಹಾಕಿದ್ದಾರೆ. ದಾವಣಗೆರೆಯಲ್ಲಿರುವ ಹೊನ್ನಾಳಿ ರೇಣುಕಾಚಾರ್ಯ ನಿವಾಸಕ್ಕೆ ಆಗಮಿಸಿದ್ದ ಯಡಿಯೂರಪ್ಪರನ್ನು ಕಾಣುತ್ತಲೇ ರೇಣುಕಾಚಾರ್ಯ ಗಳ ಗಳನೇ ಕಣ್ಣೀರು ಸುರಿಸಿದರು. ಯಡಿಯೂರಪ್ಪ ಮುಂದೆ ಕುಳಿತು ಭಾವುಕರಾದ (Renukacharya shed tears) ರೇಣುಕಾಚಾರ್ಯ ನೀವು ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಯಡಿಯೂರಪ್ಪರಿಗೆ ಮನವಿ ಮಾಡಿದರು.

ಬಳಿಕ ಈ ವಿಚಾರವಾಗಿ ಮಾತನಾಡಿದ ಶಾಸಕ ಹಾಗೂ ಸಿಎಂ ಆಪ್ತ ಕಾರ್ಯದರ್ಶಿ ರೇಣುಕಾಚಾರ್ಯ ಯಡಿಯೂರಪ್ಪನವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ತಾನು ಪಕ್ಷ ಸಂಘಟನೆ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಯಡಿಯೂರಪ್ಪ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವುದು ನಮ್ಮೆಲ್ಲರ ಇಂಗಿತವಾಗಿದೆ ಎಂದು ಹೇಳುತ್ತಾ ಭಾವುಕರಾದರು.

ಪುತ್ರನಿಗೆ ಸ್ವಂತ ಕ್ಷೇತ್ರವನ್ನೇ ಬಿಟ್ಟುಕೊಟ್ಟಿರುವ ಯಡಿಯೂರಪ್ಪ ನಡೆ ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ಬಿಜೆಪಿಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಟಿಕೆಟ್​ ಸಿಗುವುದಿಲ್ಲ ಎಂಬುದನ್ನು ಅರಿತು ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ದಟ್ಟವಾಗಿದೆ. ಯಡಿಯೂರಪ್ಪ ತಮ್ಮ ನಿರ್ಧಾರವನ್ನು ಹೊರ ಹಾಕುತ್ತಿದ್ದಂತೆಯೇ ಅವರು ರಾಜಕೀಯದಿಂದಲೇ ಹಿಂದೆ ಸರಿಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಯಡಿಯೂರಪ್ಪ ಕೇವಲ ಚುನಾವಣೆಯಿಂದ ಮಾತ್ರ ಹಿಂದೆ ಸರಿದಿದ್ದು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗುವುದಾಗಿ ಹೇಳಿದ್ದಾರೆ.

ಇದನ್ನು ಓದಿ : Woman Gangraped : ರೈಲ್ವೆ ನಿಲ್ದಾಣದ ಸಿಬ್ಬಂದಿಯಿಂದಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ : ನಾಲ್ವರ ಬಂಧನ

ಇದನ್ನೂ ಓದಿ : T20 World Cup 2022 India : ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಾಡಲಿದೆ ಟೀಮ್ ಇಂಡಿಯಾ

Comments are closed.