ಬೆಂಗಳೂರು : ಸದ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವ ಜೋರಾಗುವ ಲಕ್ಷಣವಿದೆ. ರಾಜ್ಯದಲ್ಲಿ ಒಂದುವರ್ಷದ ಬಳಿಕ ನಡೆಯಲಿರೋ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆದಿದ್ದು, ರಾಜಕೀಯ ನಾಯಕರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾರಾಟಕ್ಕೆ ಸಜ್ಜಾಗಿದ್ದಾರೆ. ಈ ಮಧ್ಯೆ ಇತ್ತೀಚಿಗಷ್ಟೇ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದಿದ್ದ ಜಮೀರ್ (Zameer Ahmed Khan) ಮತ್ತೆ ಪಕ್ಷಾಂತರ ಮಾಡೋ ಮುನ್ಸೂಚನೆ ಸಿಕ್ಕಿದೆ.
ಹೌದು ಸದ್ಯ ರಾಜ್ಯದಲ್ಲಿ ಉಳಿದಿರೋ ಕೆಲವೇ ಕೆಲವು ಅಲ್ಪಸಂಖ್ಯಾತ ನಾಯಕರಲ್ಲಿ ಜಮೀರ್ ಅಹ್ಮದ್ ಖಾನ್ ಕೂಡ ಒಬ್ಬರು.ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದ ಜಮೀರ್ ಸಚಿವರಾಗಿಯೂ ಕಾಂಗ್ರೆಸ್ ನಿಂದ ಅಧಿಕಾರ ಅನುಭವಿಸಿದ ಜಮೀರ್ ಅಹ್ಮದ್ ಖಾನ್ ಈಗ ಕಾಂಗ್ರೆಸ್ ನಿಂದ ವಿಮುಖರಾದಂತಿದೆ. ಇತ್ತೀಚಿಗೆ ಪಕ್ಷದ ಕಾರ್ಯಕ್ರಮಗಳಲ್ಲಿ ಜಮೀರ್ ಅಹ್ಮದ್ ಕಾಣಿಸಿಕೊಳ್ಳುತ್ತಿಲ್ಲ. ಅಷ್ಟೇ ಯಾಕೆ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದಾಗಲೂ ಜಮೀರ್ ಅಹ್ಮದ್ ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಜಮೀರ್ ಕಾಂಗ್ರೆಸ್ ತ್ಯಜಿಸುತ್ತಾರೆ ಎಂಬ ಸುದ್ದಿ ಬಲವಾಗಿ ಕೇಳಿಬರಲಾರಂಭಿಸಿತ್ತು. ಈ ವಿಚಾರ ತಿಳಿದ ಮಾಜಿಸಿಎಂ ಸಿದ್ದರಾಮಯ್ಯ ಕಂಗಾಲಾಗಿದ್ದು ಇದ್ದೊಬ್ಬ ಆಪ್ತನನ್ನು ಕಳೆದುಕೊಳ್ಳಬಾರದೆಂಬ ಕಾರಣಕ್ಕೆ ಸಿದ್ದು ಜಮೀರ್ ರನ್ನು ಕರೆದು ಮಾತನಾಡಿಸಿದ್ದಾರಂತೆ.
ಈ ವೇಳೆ ಯಾವುದೇ ರೀತಿಯಲ್ಲೂ ಸ್ಪಷ್ಟ ಅಭಿಪ್ರಾಯ ಹೇಳದೇ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ ಜಮೀರ್ ಅಹ್ಮದ್ ನೀವು ಕಾಂಗ್ರೆಸ್ ನಲ್ಲಿ ಇದ್ದ ಒಂದೇ ಕಾರಣಕ್ಕೆ ನಾನಿನ್ನು ಇದ್ದೇನೆ. ಈಗ ನಾನು ಏನು ಹೇಳಲ್ಲ. ಹಬ್ಬ ಮುಗಿದ ಮೇಲೆ ಈ ಬಗ್ಗೆ ವಿವರವಾಗಿ ಮಾತನಾಡುತ್ತೇನೆ ಎಂದಿದ್ದಾರೆ. ಜಮೀರ್ ಈ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಜಮೀರ್ ಹೀಗೆ ಹೇಳ್ತಿದ್ದಂತೆ ಎಚ್ಚೆತ್ತುಕೊಂಡಿರೋ ಸಿದ್ದರಾಮಯ್ಯ ಹಾಗೆಲ್ಲ ಏನಿಲ್ಲ. ಯಾವುದೇ ಕಾರಣಕ್ಕೂ ಯಾವುದೇ ತುರ್ತುನಿರ್ಧಾರ ಕೈಗೊಳ್ಳಬೇಡ ಎಂದು ಕಿವಿಮಾತು ಹೇಳಿದ್ದಾರಂತೆ.
ಎಲ್ಲರಿಗೂ ಗೊತ್ತಿರುವಂತೆ ಜಮೀರ್ ಅಹ್ಮದ್ ಖಾನ್ ಸಿದ್ಧರಾಮಯ್ಯನವರ ಜೊತೆ ಗುರುತಿಸಿಕೊಂಡಿದ್ದು, ಈ ಹಿಂದೆ ನಾಲ್ಕಾರು ಭಾರಿ ಹಲವು ಕಾಂಗ್ರೆಸ್ ಸಮಾರಂಭದಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದರು. ಈ ಎಲ್ಲ ಕಾರಣಕ್ಕೆ ಜಮೀರ್ ರನ್ನು ಡಿಕೆಶಿ ಬಣ ಟಾರ್ಗೆಟ್ ಮಾಡಿದೆ ಎನ್ನಲಾಗಿದೆ. ಹೀಗಾಗಿ ಈ ಎಲ್ಲ ಕಾರಣಕ್ಕೆ ಬೇಸತ್ತ ಜಮೀರ್ ಸದ್ಯದಲ್ಲೇ ಕಾಂಗ್ರೆಸ್ ತೊರೆದು ಮತ್ತೆ ಜೆಡಿಎಸ್ ನತ್ತ ಮುಖಮಾಡುತ್ತಾರೆ ಎನ್ನಲಾಗ್ತಿದೆ.
ಇದನ್ನೂ ಓದಿ : ಶ್ರೀರಾಮನಿಗೆ ಅಪಚಾರ ಮಾಡಬೇಡಿ ಎಂದ ಹೆಚ್.ಡಿ.ಕುಮಾರಸ್ವಾಮಿ
ಇದನ್ನೂ ಓದಿ : ಬಿ.ಜೆ.ಪುಟ್ಟಸ್ವಾಮಿ ಇನ್ನೂ ಗಾಣಿಗರ ಮಹಾಸ್ವಾಮಿ : ಇಳಿವಯಸ್ಸಿನಲ್ಲಿ ಸನ್ಯಾಸದ ಮೊರೆ ಹೋದ ಮಾಜಿ ಸಚಿವ
MLA Zameer Ahmed Khan May be Resining congress