ಬೆಂಗಳೂರು : ವಿಧಾನಪರಿಷತ್ ನ 7 ಸ್ಥಾನಗಳಿಗೆ ಮೂರು ಪಕ್ಷಗಳ ಅಭ್ಯರ್ಥಿಗಳು ಅವಿರೋಧ ಆಯ್ಕೆಗೊಂಡಿದ್ದಾರೆ. ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಅಚ್ಚರಿಯ ಅಭ್ಯರ್ಥಿಗಳು ವಿಧಾನಪರಿಷತ್ ಸದಸ್ಯರಾಗಿ ಮೇಲ್ಮನೇ ಪ್ರವೇಶಿಸಿದ್ದಾರೆ. ಈ ಆಯ್ಕೆಯ ಬೆನ್ನಲ್ಲೇ ಕಾಂಗ್ರೆಸ್ ನ ಆಂತರಿಕ ಭಿನ್ನಮತ (MLC Election Controversy) ಬೀದಿಗೆ ಬಿದ್ದಿದ್ದು, ವಿಧಾನ ಪರಿಷತ್ ಗೆ ಯಾವ ಮಾನದಂಡದ ಆಧಾರದ ಮೇಲೆ ಆಯ್ಕೆ ನಡೆಯಿತು ಎಂಬ ಮಾಹಿತಿ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಎಂಎಲ್’ಸಿ ಆಯ್ಕೆ (MLC Election ) ವಿಚಾರದಲ್ಲಿ ಸ್ಥಾನ ವಂಚಿತರ ಅಸಮಾಧಾನ ಬಯಲಾಗಿದ್ದು, ಸ್ಥಾನ ವಂಚಿತ ಕಾಂಗ್ರೆಸ್ ನಾಯಕ ಎಂ.ಡಿ ಲಕ್ಷ್ಮೀನಾರಾಯಣ ಡಿಕೆಶಿಗೆ ಬಹಿರಂಗವಾಗಿ ಪತ್ರ ಬರೆದು ಆಯ್ಕೆಯಾದ ಅಭ್ಯರ್ಥಿಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಆಯ್ಕೆಗೆ ಮಾನದಂಡವೇನು ? ಇದಕ್ಕಾಗಿ ನಡೆದ ಸಭೆಗಳೆಷ್ಟು ಎಂದೆಲ್ಲ ಪ್ರಶ್ನಿಸಿದ್ದಾರೆ. ಅಲ್ಲದೇ ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಚಿಂಥನ ಮಂಥನ ಸಭೆಯಲ್ಲಿ ಮುಕ್ತ ಚರ್ಚೆಗೆ ಆದ್ಯತೆ ಕೊಡುವಂತೆ ಪತ್ರದಲ್ಲಿ ಅಗ್ರಹಿಸಿದ್ದಾರೆ.
ಚಿಂತನ ಮಂಥನ ಸಭೆಯಲ್ಲಿ 6 ಪ್ರಶ್ನೆಗಳ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಎಂ.ಡಿ ಲಕ್ಷ್ಮೀನಾರಾಯಣ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ. ಜೂನ್ 2 ಹಾಗೂ 3 ರಂದು ನಡೆಯಲಿರುವ ರಾಜ್ಯ ಕಾಂಗ್ರೆಸ್ ಚಿಂತನ ಮಂಥನ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಎಂಡಿ ಲಕ್ಷ್ಮೀನಾರಾಯಣ್ ಮನವಿ ಮಾಡಿದ್ದಾರೆ. ಇನ್ನು ಎಂಡಿ ಲಕ್ಷ್ಮೀನಾರಾಯಣ ಕೇಳಿದ ಪ್ರಶ್ನೆಗಳೇನು ಎಂಬುದನ್ನು ಗಮನಿಸೋದಾದರೇ,

- ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚುನಾವಣೆ ಸಮಿತಿ ಇದೆಯೇ ?
- ಇದ್ದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಎಷ್ಟು ಸಭೆಗಳನ್ನು ನಡೆಸಲಾಯಿತು? ಯಾವ ಮಾನದಂಡವನ್ನು ಅನುಸರಿಸಿ ಆಯ್ಕೆ ಮಾಡಲಾಗಿದೆ ?
- ಅಪೇಕ್ಷೀತರ ಪಟ್ಟಿಯಲ್ಲಿ ಎಷ್ಟು ಜನರ ಹೆಸರನ್ನು ಎ.ಐ.ಸಿ.ಸಿ.ಗೆ ಶಿಪಾರಸ್ಸು ಮಾಡಲಾಯಿತು ?
- ಕೆ.ಪಿ.ಸಿ.ಸಿ. ಅಧ್ಯಕ್ಷರು, ಸಿದ್ದರಾಮಯ್ಯ ಶಿಫಾರಸ್ಸು ಮಾಡಿ ನೀಡಿದ ಪಟ್ಟಿಯಲ್ಲಿರುವ ಹೆಸರುಗಳನ್ನು ತಿರಸ್ಕಾರ ಮಾಡಲು ಕಾರಣವೇನು? ತೀರ್ಮಾನಿಸಿ ಪಟ್ಟಿಯನ್ನು ತಿರಸ್ಕಾರ ಮಾಡಿದ್ದು ಸರಿಯೇ?
- ತಿರಸ್ಕಾರ ಮಾಡಿದ ನಂತರ ಯಾವ ಹೆಸರುಗಳನ್ನು ನೀಡಲಾಯಿತು ?
- ಕೊನೆ ಗಳಿಗೆಯಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ನೀಡಿದ ಹೆಸರುಗಳನ್ನು ಕೈಬಿಟ್ಟು, ಬೇರೆಯವರು ಸೂಚಿಸಿದ ಹೆಸರುಗಳನ್ನು ಎ.ಐ.ಸಿ.ಸಿ. ಅನುಮೋದನೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ

ಈ ಬೆಳವಣಿಗೆಗಳು ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರ ಗೌರವಕ್ಕೆ ಚ್ಯುತಿ ಬಂದಂತಾಗಿದೆ. ಹೀಗಾಗಿ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದು ಪತ್ರದಲ್ಲಿ ಎಂಡಿಎಲ್ ಒತ್ತಾಯಿಸಿದ್ದಾರೆ. ಈಗಾಗಲೇ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಿನ್ನಡೆ ಅನುಭವಿಸಿರುವ ಡಿಕೆಶಿಗೆ ಈ ಪತ್ರ ಮತ್ತಷ್ಟು ಮುಜುಗರ ತಂದಿದೆ.
ಇದನ್ನೂ ಓದಿ : CT Ravi Love Letter : ಪಲ್ಲವಿಗೊಂದು ಪ್ರೇಮಪತ್ರ : ವೈರಲ್ ಆಯ್ತು ಸಿ.ಟಿ.ರವಿ ಲೆಟರ್
ಇದನ್ನೂ ಓದಿ : wedding canceled : ಮಾಲೆ ಹಾಕುವಾಗ ವರನ ಕೈ ತಾಗಿತೆಂದು ಮದುವೆ ನಿಲ್ಲಿಸಿದ ವಧು
MLC Election Controversy Congress Leaders letter to DK Shivakumar