wedding canceled : ಮಾಲೆ ಹಾಕುವಾಗ ವರನ ಕೈ ತಾಗಿತೆಂದು ಮದುವೆ ನಿಲ್ಲಿಸಿದ ವಧು

ಮಂಗಳೂರು : wedding canceled : ಹಿಂದೂ ಸಂಪ್ರದಾಯದಂತೆ ನಡೆಯುವ ಮದುವೆಗಳಲ್ಲಿ ವಧು ವರರು ಹಾರ ಬದಲಾಯಿಸಿಕೊಳ್ಳುವುದು , ತಾಳಿ ಕಟ್ಟುವುದು, ಸಪ್ತಪದಿ ತುಳಿಯುವುದು ಇವೆಲ್ಲ ಕಾಮನ್​. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಎಂಬಲ್ಲಿ ವರ ವಧುವಿನ ಕೊರಳಿಗೆ ಹಾರ ಹಾಕುತ್ತಿದ್ದ ಸಂದರ್ಭದಲ್ಲಿ ಆತನ ಕೈ ತನ್ನ ಕತ್ತಿಗೆ ತಾಗಿದೆ ಎಂದು ಹೇಳಿದ ವಧುವು ಮದುವೆಯನ್ನು ರದ್ದು ಮಾಡಿದಂತಹ ವಿಚಿತ್ರ ಘಟನೆಯೊಂದು ನಡೆದಿದೆ.


ನಾರಾವಿ ದೇವಸ್ಥಾನದ ಸಭಾಭವನದಲ್ಲಿ ಮುಡುಕೊಣಾಜೆ ಮೂಲದ ಯುವತಿಯೊಂದಿಗೆ ಬೆಳ್ತಂಗಡಿಯ ಯುವಕನ ಮದುವೆ ನಡೆಯುತ್ತಿತ್ತು .ಮದುವೆ ಮಂಟಪದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಳ್ತಿದ್ದ ಸಂದರ್ಭದಲ್ಲಿ ವಧುವಿನ ಕಿವಿ ಹಾಗೂ ಕತ್ತಿಗೆ ವರನ ಕೈ ತಾಗಿದೆ. ಇದಕ್ಕೆ ಕೋಪಗೊಂಡಿದ್ದ ಯುವತಿಯನ್ನು ಹಿರಿಯರು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ತಾಳಿ ಹಾಗೂ ಹೂವಿನ ಹಾರವನ್ನು ಕಿತ್ತೆಸೆದ ವಧುವು ನಾನು ಈ ಮದುವೆ ಆಗೋದಿಲ್ಲ ಎಂದು ಹೇಳಿದ್ದಾಳೆ .


ಇದೇ ವಿಚಾರವಾಗಿ ವಧು – ವರರ ಕುಟುಂಬಸ್ಥರ ನಡುವೆ ವಾದ – ವಿವಾದ ಏರ್ಪಟ್ಟಿದೆ. ಈ ಗಲಾಟೆಯನ್ನು ಸರಿಪಡಿಸಲು ವೇಣೂರು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ವಧುವು ನಾನು ನಿಶ್ಚಿತಾರ್ಥ ಮಾಡಿಕೊಂಡಿರುವುದೇ ಒಬ್ಬನ ಜೊತೆ.ನನ್ನನ್ನು ನೋಡಲು ಬಂದವನೇ ಮೊತ್ತಬ್ಬ. ಈಗ ನೋಡಿದರೆ ಬೇರೆಯವನ ಜೊತೆ ನನಗೆ ಮದುವೆಯಾಗುತ್ತಿದೆ. ಹೀಗಾಗಿ ನಾನು ಮದುವೆಯನ್ನು ತಿರಸ್ಕರಿಸುತ್ತಿದ್ದೇನೆ ಎಂದು ಯುವತಿಯು ಆರೋಪಿಸಿದ್ದಾಳೆ ಎನ್ನಲಾಗಿದೆ.

ಇದನ್ನು ಓದಿ : ಕುಂದಾಪುರ ಶಿಲ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಸಾವಿನ ಹಿಂದೆ ಲವ್‌ ಜಿಹಾದ್‌ ಆರೋಪ

ಇದನ್ನೂ ಓದಿ : Kerala dowry death: ಕೇರಳ ವಿಸ್ಮಯ ಸಾವು ಪ್ರಕರಣ: ಪತಿಗೆ 10 ವರ್ಷ ಜೈಲು, 12.55 ಲಕ್ಷ ರೂ ದಂಡ

wedding canceled due hand touch

Comments are closed.