ಭಾನುವಾರ, ಏಪ್ರಿಲ್ 27, 2025
HomepoliticsPratap simha : ಅಧಿಕಾರದಲ್ಲಿದ್ದಾಗ ನಾರಾಯಣ ಗುರುಗಳು ನೆನಪಾಗಲಿಲ್ಲವೇ?: ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ಪ್ರಶ್ನೆ

Pratap simha : ಅಧಿಕಾರದಲ್ಲಿದ್ದಾಗ ನಾರಾಯಣ ಗುರುಗಳು ನೆನಪಾಗಲಿಲ್ಲವೇ?: ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ಪ್ರಶ್ನೆ

- Advertisement -

ಮೈಸೂರು : ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ಥಬ್ಧಚಿತ್ರಕ್ಕೆ ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಂಸದ ಪ್ರತಾಪ್​ ಸಿಂಹ ಟಾಂಗ್​ ನೀಡಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ರಾಜ್ಯದಲ್ಲಿ ಕ್ಯಾಂಟೀನ್​​ಗೆ ನಾಮಕರಣ ಮಾಡುವಾಗ ನಾರಾಯಣ ಗುರುಗಳ ನೆನಪಾಗಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.


ಸಿದ್ದರಾಮಯ್ಯರಿಗೆ ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿ ಎಂಬಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಕ್ಯಾಂಟೀನ್​ಗಳನ್ನು ನಿರ್ಮಿಸಿತ್ತು. ಈ ಅವಧಿಯಲ್ಲಿ ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯರಿಗೆ ಕ್ಯಾಂಟೀನ್​​ಗೆ ಹೆಸರಿಡುವಾಗ ಈ ನೆಲದ ಮಹಾಪುರುಷರ ನೆನಪಾಗಲಿಲ್ಲವೇ..? ಆಗ ಇಂದಿರಾ ಗಾಂಧಿ ಹೆಸರು ಮಾತ್ರ ನೆನಪಾಯ್ತಾ..? ಅಧಿಕಾರದಲ್ಲಿದ್ದಾಗ ನಿಮಗೆ ಇದ್ಯಾವುದು ನೆನಪಿರಲಿಲ್ಲವೇ..? ಅಧಿಕಾರ ಕೈ ತಪ್ಪಿ ಹೋದ ಮೇಲೆ ಸಮಾಜ ಸುಧಾರಕರು ನೆನಪಾದರೇ ಎಂದು ಪ್ರಶ್ನೆ ಮಾಡಿದ್ದಾರೆ.


ಗಣರಾಜ್ಯೋತ್ಸವ ಪರೇಡ್​ನಲ್ಲಿ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲು ಒಂದಷ್ಟು ವಿಧಾನಗಳಿವೆ. ಆಯ್ಕೆ ಪ್ರಕ್ರಿಯೆ ಕೂಡ ಪಾರದರ್ಶಕವಾಗಿ ಇರುತ್ತದೆ. ಯಾರನ್ನೂ ಅವಮಾನ ಮಾಡಬೇಕು ಎಂಬುದು ನಮ್ಮ ಉದ್ದೇಶವಲ್ಲ. ಸಿದ್ದರಾಮಯ್ಯ ಮಾರ್ಗಸೂಚಿಗಳನ್ನು ಸರಿಯಾಗಿ ಓದಿಕೊಳ್ಳಲಿ ಎಂದು ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಮಾತನಾಡುತ್ತಿದ್ದಾರೆ. ತಾವು ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯರಿಗೆ ನಾರಾಯಣ ಗುರುಗಳು, ಒನಕೆ ಓಬವ್ವ ಇವರೆಲ್ಲ ನೆನಪಾಗಲಿಲ್ಲ. ಈಗ ನಮಗೆ ಸಮಾಜ ಸುಧಾರಕರಿಗೆ ಗೌರವ ಕೊಡಿ ಅಂತಾ ಪಾಠ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

MP Pratap simha criticizes congress leader siddaramiah

ಇದನ್ನು ಓದಿ : supporters fighting : ಬಿ.ಕೆ.ಹರಿಪ್ರಸಾದ್‌ vs ರಮಾನಾಥ ರೈ : ಬೆಂಬಲಿಗರ ಗಲಾಟೆಗೆ ಹೈಕಮಾಂಡ್‌ ಗರಂ

ಇದನ್ನೂ ಓದಿ : Karnataka school collage close : ಶಾಲೆ ಕಾಲೇಜು 15-20 ದಿನ ಬಂದ್‌ ಮಾಡಿ : ನೈಟ್‌ ಕರ್ಪ್ಯೂಯಿಂದ ಜನಜೀವನಕ್ಕೆ ತೊಂದರೆ : ಎಚ್.ಡಿ.ಕುಮಾರಸ್ವಾಮಿ

RELATED ARTICLES

Most Popular