MP Pratap Simha : ಮೈಸೂರು ಸಂಸದ ಪ್ರತಾಪ್ ಸಿಂಹ ಸೋಲಿಸೋಕೆ ಸಿದ್ಧು ಶಪಥ : ಅಪ್ಪನ ವೈರಿಗೆ ಎದುರಾಳಿಯಾಗ್ತಿದ್ದಾರೆ ಪುತ್ರ ಡಾ.ಯತೀಂದ್ರ

ಮೈಸೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಬಳಿಕ ಈಗ ಲೋಕಸಭಾ ಚುನಾವಣೆ ಕಣ‌ (MP Pratap Simha) ರಂಗೇರಲಾರಂಭಿಸಿದೆ. ಈಗಾಗಲೇ ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಿಸಿದೆ. ಈ ಮಧ್ಯೆ ಕಾಂಗ್ರೆಸ್ ನಿಂದ ಡಾ.ಯತೀಂದ್ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಮಗನನ್ನು ಕಣಕ್ಕಿಳಿಸಿ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆಯೋ ಪ್ಲ್ಯಾನ್ ನಲ್ಲಿದ್ದಾರೆ.

ಡಾ.ಯತೀಂದ್ರ ಸಿದ್ಧರಾಮಯ್ಯ, ಸಿದ್ಧರಾಮಯ್ಯನವರ ರಾಜಕೀಯ ಉತ್ತರಾಧಿಕಾರಿ. ಮಾತ್ರವಲ್ಲದೇ ಸಿದ್ಧರಾಮಯ್ಯನವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ ಆದರ್ಶ ಪುತ್ರ. ಈಗ ಈ ಪುತ್ರನ ತ್ಯಾಗಕ್ಕೆ ಬೆಲೆ ಕಟ್ಟಲು ಕಾಂಗ್ರೆಸ್ ಸಿದ್ಧವಾಗಿದೆ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಡಾ.ಯತೀಂದ್ರರನ್ನು ಅಭ್ಯರ್ಥಿಯಾಗಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಹಾಗಿದ್ದರೇ ಕಾಂಗ್ರೆಸ್ ನ ಈ ನಿರ್ಧಾರದ ಹಿಂದಿ ಲೆಕ್ಕಾಚಾರಗಳೇನು ಅನ್ನೋದನ್ನು ಗಮನಿಸೋದಾದರೇ.

  1. ಅಸಮಧಾನ ಹತ್ತಿಕ್ಕುವುದು- ಕಾಂಗ್ರೆಸ್ ನಿಂದ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಸಾಕಷ್ಟು ನಾಯಕರು ಸಿದ್ಧವಾಗಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೂ ಅಸಮಧಾನ ಕಟ್ಟಿಟ್ಟ ಬುತ್ತಿ. ಆದರೆ ಯತೀಂದ್ರ ಅವರನ್ನು ಅಭ್ಯರ್ಥಿ ಮಾಡಿದಲ್ಲಿ ಎಲ್ಲರೂ ಸಿದ್ಧರಾಮಯ್ಯನವರ ಮುಖ ನೋಡಿ ಬಣ ರಾಜಕೀಯ ಬಿಟ್ಟು ಮತ ಹಾಕುತ್ತಾರೆ ಮತ್ತು ಚುನಾವಣೆ ಗೆಲ್ಲಿಸಲು ಮುಂದಾಗುತ್ತಾರೆ.
  2. ಡಾ.ಯತೀಂದ್ರ ಸಿದ್ಧರಾಮಯ್ಯ ವರ್ಚಸ್ಸು: ವೈಯಕ್ತಿಕವಾಗಿ ರಾಜಕಾರಣ ಇಷ್ಟವಿಲ್ಲದೇ ಇದ್ದರೂ ತಂದೆಗಾಗಿ ರಾಜಕಾರಣಕ್ಕೆ ಬಂದ ಯತೀಂದ್ರ್ ರಾಜಕಾರಣದಲ್ಲಿ ಶುದ್ಧತೆ ಉಳಿಸಿಕೊಂಡಿದ್ದಾರೆ. ಒಂದು ಭಾರಿ ಶಾಸಕರಾದರೂ ಯಾವುದೇ ಹಗರಣವಿಲ್ಲದೇ ಕೆಲಸ ಮಾಡಿ ಜನ ಬೆಂಬಲ ಗಳಿಸಿದ್ದಾರೆ. ಅಲ್ಲದೇ ತಂದೆಯ ಗೆಲುವಿಗಾಗಿ ಶ್ರಮಿಸಿ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ.
  3. ಪ್ರತಾಪ್ ಸಿಂಹರನ್ನು ಹಣಿಯುವ ತಂತ್ರ: ಸಿಎಂ ಸಿದ್ಧರಾಮಯ್ಯನವರು ಬಿಜೆಪಿಯ ಎರಡು ಯುವ ಮುಖಗಳಾದ ಪ್ರತಾಪ್ ಸಿಂಹ್ ಹಾಗೂ ತೇಜಸ್ವಿ ಸೂರ್ಯ ಅವರನ್ನು ಟೀಕಿಸುತ್ತಲೇ ಇರುತ್ತಾರೆ. ಅದರಲ್ಲೂ ಪ್ರತಾಪ್ ಸಿಂಹರನ್ನು ಕಾಗದದ ಹುಲಿ ಎಂದೇ ವ್ಯಂಗ್ಯವಾಡುವ ಸಿದ್ಧು ಮಗನನ್ನು ಪ್ರತಾಪ್ ಸಿಂಹ ಎದುರು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಸಿಂಹ ಗೆ ತಿರುಗೇಟು ಕೊಡುವ ಲೆಕ್ಕಾಚಾರದಲ್ಲಿದ್ದಾರೆ.
  4. ಎಲ್ಲದಕ್ಕಿಂತ‌ ಮುಖ್ಯವಾಗಿ ತಂದೆಗಾಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಿದ ಡಾ.ಯತೀಂದ್ರ್ ರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ ತಮ್ಮ ಮಗನ ರಾಜಕೀಯ ಭವಿಷ್ಯವನ್ನು ಸುಭದ್ರಗೊಳಿಸೋದು ಸಿದ್ಧು ಮಾಸ್ಟರ್ ಪ್ಲ್ಯಾನ್.

ಇದನ್ನೂ ಓದಿ : Illegal property case : ಅಕ್ರಮ ಆಸ್ತಿ ಪ್ರಕರಣ : ಡಿಕೆಶಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್

ಇದನ್ನೂ ಓದಿ : BL Santosh – BS Yeddyurappa : BL ಸಂತೋಷ್‌ ಬಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, BS ಯಡಿಯೂರಪ್ಪ ಬಣಕ್ಕೆ ವಿಪಕ್ಷ ನಾಯಕನ ಸ್ಥಾನ : ಮುನಿಸಿಗೆ ಮದ್ದೆರೆದ ಬಿಜೆಪಿ ಹೈಕಮಾಂಡ್‌

ಹೀಗೆ ನಾನಾ ಲೆಕ್ಕಾಚಾರದೊಂದಿಗೆ ಸಿಎಂ ಸಿದ್ಧರಾಮಯ್ಯನವರ ಪುತ್ರ ಯತೀಂದ್ರರನ್ನು ಮೈಸೂರಿನಲ್ಲಿ ಮತ್ತೊಮ್ಮೆ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಲು ಕಾಂಗ್ರೆಸ್ ಪಾಳಯ ಸಿದ್ಧವಾಗಿದೆ.

MP Pratap Simha: Mysore MP Pratap Simha Slammed Siddaramaiah: Son Dr. Yathindra is an opponent of his father’s enemy.

Comments are closed.